ಸಸಿ ನೆಡುವ ಕಾರ್ಯಕ್ರಮ
ಧಾರವಾಡ, ಜೂ6: ಕರ್ನಾಟಕ ಉಚ್ಛ ನ್ಯಾಯಾಲಯ, ಧಾರವಾಡ ಪೀಠದಲ್ಲಿ “ವಿಶ್ವ ಪರಿಸರ ದಿನಾಚರಣೆ” ನಿಮಿತ್ತ ವಿವಿಧ ತರಹದ ಸಸಿ ನೆಡುವ ಕಾರ್ಯಕ್ರಮವನ್ನು ಉಚ್ಛ ನ್ಯಾಯಾಲಯದ ಕಾನೂನು ಸೇವಾ ಸಮಿತಿ, ಉಚ್ಛನ್ಯಾಯಾಲಯದ ವಕೀಲರ ಸಂಘ, ಅರಣ್ಯ ಇಲಾಖೆ, ಮತ್ತು ತೋಟಗಾರಿಕಾ ಇಲಾಖೆ ಇವರ ಸಹಯೋಗದೊಂದಿಗೆ ಆಚರಿಸಲಾಯಿತು.
ಈ ಕಾರ್ಯಕ್ರಮದ ಅಂಗವಾಗಿ ಉಚ್ಛನ್ಯಾಯಾಲಯದ ಆವರಣದಲ್ಲಿ ಧಾರವಾಡ ಪೀಠದ ಹಿರಿಯ ನ್ಯಾಯಮೂರ್ತಿಗಳಾದ ಎಸ್. ಜಿ. ಪಂಡಿತ ಅವರು ಸಸಿಗಳನ್ನು ನೆಡುವುದರ ಮೂಲಕ ಚಾಲನೆಯನ್ನು ನೀಡಿದರು. ಅವರೊಂದಿಗೆ ಸಹನ್ಯಾಯಮೂರ್ತಿಗಳು ಹಾಗೂ ವಕೀಲರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯಕಾರಿ ಸಮತಿ ಸದಸ್ಯರು, ಅಡಿಷನಲ್ ಅಡ್ವೋಕೆಟ್ ಜನರಲ್, ಅಡಿಷನಲ್ ಸಾಲಿಟರ್ ಜನರಲ್, ಅರಣ್ಯ ಇಲಾಖೆ ಮತ್ತು ತೋಟಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿ ವಿವಿಧ ಪ್ರಭೇದದ ಸುಮಾರು 100 ಸಸಿಗಳನ್ನು ಉಚ್ಛನ್ಯಾಯಾಲಯದ ಆವರಣದಲ್ಲಿ ನೆಟ್ಟರು.