“ನಮ್ಮ ಭೂಮಿ ನಮ್ಮ ಭವಿಷ್ಯ “  ಶರಣಬಸವ ಪಟ್ಟೆದ್,“ಘನ ತ್ಯಾಜ್ಯ ಮತ್ತು ದ್ರವ್ಯ ತ್ಯಾಜ್ಯ ನಿರ್ವಹಣೆ ಕುರಿತು ಒಂದು ದಿನದ ಕಾರ್ಯಾಗಾರ ಮತ್ತು ಪ್ರಾತ್ಯಕ್ಷತೆ”
ಸಂಜೆವಾಣಿ ವಾರ್ತೆ
ಹೊಸಪೇಟೆ ಜೂ6:ನಮ್ಮ ಭೂಮಿಯನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು, ಮುಂದಿನ ಜನಾಂಗಕ್ಕೂ ಶುದ್ಧಗಾಳಿ, ನೀರು ಸೇರಿದಂತೆ ವಾತಾವರಣ ಅನುಭವಿಸಲು ಉಳಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಕ್ಯಾಶುಟೆಕ್ ಸಂಸ್ಥೆಯ ಸಿಇಓ ಶರಣಬಸವ ಪಟ್ಟೆದ್ ಹೇಳಿದರು.
ಅವರು ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ವಿಭಾಗದ ವತಿಯಿಂದ ಪರಿಸರ ದಿನಾಚರಣೆ ಅಂಗವಾಗಿ ನಡೆದ “ಘನ ತ್ಯಾಜ್ಯ ಮತ್ತು ದ್ರವ್ಯ ತ್ಯಾಜ್ಯ ನಿರ್ವಹಣೆ ಕುರಿತು ಒಂದು ದಿನದ ಕಾರ್ಯಾಗಾರ ಮತ್ತು ಪ್ರಾತ್ಯಕ್ಷತೆ” ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿ ಘನ ತ್ಯಾಜ್ಯದಲ್ಲಿ ಹಸಿ ಕಸ, ಒಣ ಕಸ ಮತ್ತು ಅಪಾಯಕಾರಿ ಕಸ ಎಂಬ ಮೂರು ವಿಂಗಡನೆ ಇದೆ, ಅಪಾಯಕಾರಿ ಕಸವು ಆಸ್ಪತ್ರೆಗಳಿಂದ ಬರುವ ವೈದ್ಯಕೀಯ ತ್ಯಾಜ್ಯ ಮತ್ತು ಇ-ವೇಸ್ಟ್ ಗಳನ್ನು ಬೇರೆ ಕಸದೊಂದಿಗೆ ಮಿಶ್ರಿತಗೊಳಿಸದೆ ಪ್ರತ್ಯೇಕವಾಗಿ ವೈಜ್ಞಾನಿಕ ವಿಲೇವಾರಿ ಮತ್ತು ನಿರ್ವಹಣೆ ಮಾಡಬೇಕು. ಅಪಾಯಕಾರಿ ಕಸವನ್ನು ಮಿಶ್ರಿತಗೊಳಿಸಿದರೆ ಅದರಿಂದಾಗುವ ದುಷ್ಪರಿಣಾಮ ನೇರವಾಗಿ ಪರ್ಯಾವರಣದ ಮೇಲೆ ಬೀರುತ್ತದೆ  ಎಂದು ಅಭಿಪ್ರಾಯಪಟ್ಟರು.
ಅತಿಥಿಗಳಾದ ವಿಜಯನಗರ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಅಶೋಕ್ ತೋಟದ್ ಮಾತನಾಡಿ ವಿದ್ಯಾರ್ಥಿಗಳು ಪರಿಸರದ ಮಹತ್ವವನ್ನು ಅರಿತು, ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡುವಂತೆ ಕರೆ ನೀಡಿದರು  ಪ್ರಾಂಶುಪಾಲ ಡಾ.ಯು.ಎಂ.ರೋಹಿತ್ ಮಾತನಾಡಿ ನಮ್ಮ ಮಹಾವಿದ್ಯಾಲಯದಲ್ಲಿ 20 ಎಕರೆ ಜಾಗದಲ್ಲಿ ಪ್ರತೀ ವಿದ್ಯಾರ್ಥಿಗಳು ಒಂದು ಗಿಡವನ್ನು ನೆಟ್ಟು ಅವರು ಇಲ್ಲಿರುವ ನಾಲ್ಕು ವರ್ಷದ ಅವಧಿಯಲ್ಲಿ ಆ ಗಿಡಗಳನ್ನು ಪೋಶಿಸಿ ಬೆಳಸಿದ್ದಾದರೆ ಸಾವಿರಾರು ಗೀಡಗಳನ್ನು ಬೆಳಸಿದಂತಾಗುತ್ತದೆ ಇದರಿಂದ ಇಡೀ ಪ್ರದೇಶ ಹಸಿರುಗೊಳ್ಳುತ್ತದೆ ಎಂದು ತಿಳಿಸಿದರು.  
ಸಂಪನ್ಮೂಲ ವ್ಯಕ್ತಿ ಬಾಲಚಂದ್ರ ಜಾಬಶೆಟ್ಟಿ ಮಾತನಾಡಿ ಪರಿಸರ ಸ್ನೇಹಿ ಸೂಕ್ಷ್ಮಾಣುಗಳ ಅಭಿವೃದ್ಧಿಯ ಪ್ರಾತ್ಯಕ್ಷತೆಯನ್ನು ವಿದ್ಯಾರ್ಥಿಗಳಿಗೆ ತೋರಿಸಿದರು. ಸಿವಿಲ್ ವಿಭಾಗದ ಮುಖ್ಯಸ್ಥರಾದ ಡಾ. ಶಿವಕೇಶವ ಕುಮಾರ್, ಸುರೇಂದ್ರ ಪಾಟೀಲ್, ಪ್ರೊ. ಬಸವರಾಜ್ ಆರ್ , ಪ್ರೊ. ರಜನಿ ಉಮಾಪತಿ, ಪ್ರೊ. ಬಸವರಾಜ್ ಹುಬ್ಬಳಿ, ಪ್ರೊ ಅನಿಲ್ ಕುಮಾರ್ ಮತ್ತು ವಿವಿಧ ತಾಂತ್ರಿಕ ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
One attachment • Scanned by Gmail