ಛಾಯಾಗ್ರಾಹಕ ಸುಧೀಂದ್ರ ಪುರೋಹಿತಗೆ ಸನ್ಮಾನ
ಕಲಬುರಗಿ:ಸೆ.24:ಕರ್ನಾಟಕ ರಾಜ್ಯ ವಿಪ್ರ ಫೋಟೋ ಮತ್ತು ವಿಡಿಯೋಗ್ರಾಫರ್ ಸಂಘ ಬೆಂಗಳೂರು ಇವರ ವತಿಯಂದ 2024-25ನೇ ಸಾಲಿನ ವಿಶ್ವ ಛಾಯಗ್ರಹಣ ದಿನಾಚಣೆಯ ಅಂಗವಾಗಿ, ಛಾಯಾಗ್ರಹಣ ಮತ್ತು ವಿಡಿಯೋಗ್ರಫಿ ಕ್ಷೇತ್ರದಲ್ಲಿ ಅವಿರತ ಸೇವೆಯನ್ನು ಗುರುತಿಸಿ ಕಲಬುರಗಿ ಹಿರಿಯ ಛಾಯಾಗ್ರಾಹಕ ಸುಧೀಂದ್ರ ಪುರೋಹಿತ್ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.
ಅದರ ಅಂಗವಾಗಿ ಪ್ರಶಾಂತ ನಗರದ ಸುಧೀಂದ್ರ ಪುರೋಹಿತ್ ಅವರನ್ನು ಕಲಬುರಗಿಯ ವಿಪ್ರ ಫೋಟೋ ಮತ್ತು ವಿಡಿಯೋಗ್ರಾಫರ್ ಜಿಲ್ಲಾ ಸಮಿತಿ ವತಿಯಿಂದ ಗೌರವಾಧ್ಯಕ್ಷರದ ಎಂ.ಎನ್.ಎಸ್ ಶಾಸ್ತ್ರಿ, ಅಧ್ಯಕ್ಷ ರಾಘವೇಂದ್ರ ಭುರ್ಲಿ ಹಾಗೂ ಕಾರ್ಯದರ್ಶಿ ಕೃಷ್ಣರಾಜ ಮಳ್ಳಿ ಅವರು ಗೌರವಿಸಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿದ ಸುಧೀಂದ್ರ ಪುರೋಹಿತ್ ಮಾತನಾಡಿ ವಿಶ್ವ ಛಾಯಗ್ರಹಣ ದಿನದ ಅಂಗವಾಗಿ ಪ್ರಶಸ್ತಿ ಸಿಕ್ಕಿರುವುದು ಹರ್ಷ ತಂದಿದೆ, ಯುವಕರು ಛಾಯಾಗ್ರಹಣ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ, ಸೃಜನ ಶಲತೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು.
ಸಮಿತಿಯ ಪ್ರಮುಖರಾದ ನಾರಾಯಣ ಜೋಶಿ, ಮಧುಸೂಧನ್ ಕುಲಕರ್ಣಿ, ವಿನುತ ಜೋಶಿ, ನಿತೀನ್ ದೇವನಿಕರ್, ಬಾಪೂರವ್ ಕುಲಕರ್ಣಿ, ಪ್ರತೀಕ್ ಭುರ್ಲಿ, ಶ್ರೀನಿವಾಸ ಕುಲಕರ್ಣಿ,ಶ್ರೀಮತಿ ಜ್ಯೋತಿ ಪುರೋಹಿತ್, ಸುಪ್ರೀತ್ ಪುರೋಹಿತ್ ಇದ್ದರು.