ಸೆ. 27ಕ್ಕೆ ಹಾರಕೂಡ ಶ್ರೀಗಳ 719ನೇ ನಾಣ್ಯ ತುಲಾಭಾರ:60 ಕಲಾವಿದರಿಗೆ ರಾಜ್ಯ ಮಟ್ಟದ ಕುಮಾರಶ್ರೀ ಪ್ರಶಸ್ತಿ ಪ್ರದಾನ
ಕಲಬುರಗಿ:ಸೆ.24:ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಸುವರ್ಣ ಕರ್ನಾಟಕ ಉತ್ಸವ-50 ಹಾಗೂ ಶ್ರೀ ಕುಮಾರೇಶ್ವರ ನಾಟ್ಯ ಸಂಘದ 42ನೇ ವಾರ್ಷಿಕೋತ್ಸವ ನಿಮಿತ್ಯ ಇದೇ ಸೆಪ್ಟೆಂಬರ್ 27ರಂದು ಶುಕ್ರವಾರ ಬೆಳಿಗ್ಗೆ 10-30ಕ್ಕೆ ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರ 719ನೇ ನಾಣ್ಯ ತುಲಾಭಾರ, 60 ಕಲಾವಿದರಿಗೆ ರಾಜ್ಯ ಮಟ್ಟದ ಕುಮಾರಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಹಾನಗಲ್ ಶ್ರೀ ಗುರು ಕುಮಾರೇಶ್ವರ ನಾಟ್ಯ ಸಂಘದ ಮಾಲಿಕ ಎಲ್.ಬಿ. ಶೇಖ್ ಮಾಸ್ತರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 1983ರ ಆಗಸ್ಟ್ 4ರಂದು ಮಹಾರಾಷ್ಟ್ರದ ಜತ್ ತಾಲ್ಲೂಕಿನ ಉಮದಿ ಗ್ರಾಮದಲ್ಲಿ ಕಂಪೆನಿ ಪ್ರಾರಂಭಗೊಂಡಿತು. ಸಾಮಾಜಿಕ, ಐತಿಹಾಸಿಕ, ಪೌರಾಣಿಕ ಹಾಗೂ ಧಾರ್ಮಿಕ ನಾಟಕಗಳನ್ನು ಇಡೀ ಕರ್ನಾಟಕ ರಾಜ್ಯಾದ್ಯಂತ ಸಂಚರಿಸಿ ಯಶಸ್ವಿ ಪ್ರಯೋಗಗಳನ್ನು ನೀಡಿದ ಹಿರಿಮೆಗೆ ಕಂಪೆನಿ ಒಳಗಾಗಿದೆ ಎಂದರು.
ಸಮಾರಂಭದ ದಿವ್ಯ ಸಾನಿಧ್ಯವನ್ನು ಡಾ. ಚನ್ನವೀರ ಶಿವಾಚಾರ್ಯರು, ಅಧ್ಯಕ್ಷತೆಯನ್ನು ಶರಣಬಸವೇಶ್ವರ ಸಂಸ್ಥಾನದ ಕಾರ್ಯದರ್ಶಿ ಬಸವರಾಜ್ ದೇಶಮುಖ್ ಅವರು ವಹಿಸುವರು. ಉದ್ಘಾಟನೆಯನ್ನು ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಶ್ರೀ ಬಂಧು ಪ್ರಿಂಟರ್ಸ್‍ನ ರಮೇಶ್ ಜಿ. ತಿಪ್ಪನೂರ್, ರಂಗಾಯಣದ ನಿರ್ದೇಶಕಿ ಡಾ. ಸುಜಾತಾ ಜಂಗಮಶೆಟ್ಟಿ, ದಾವಣಗೆರೆ ವೃತ್ತಿರಂಗಭೂಮಿ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ್ ಕಡಕೋಳ್ ಅವರು ಆಗಮಿಸುವರು ಎಂದು ಅವರು ಹೇಳಿದರು.
ಪಂ. ಬಸವರಾಜ್ ಬಂಟನೂರ್ ಗವಾಯಿಗಳು, ಸಿದ್ಧರಾಮ್ ಪೋಲಿಸ್ ಪಾಟೀಲ್ ಕುಕನೂರ್ ಗವಾಯಿಗಳು, ಕುಮಾರ್ ಸಮೀರ್ ಬಿ. ಶೇಖ್ ಹಾಗೂ ಸಂಗಡಿಗರು ರಂಗಗೀತೆಗಳನ್ನು ಪ್ರಸ್ತುತಪಡಿಸುವರು. ಬಸವರಾಜ್ ಹೂಗಾರ್, ಪ್ರಭು ಗುಡ್ಡದ್, ಶಂಕರ್ ಹೂಗಾರ್ ಅವರು ಸಂಗೀತ ಸೇವೆ ಸಲ್ಲಿಸುವರು ಎಂದು ಅವರು ತಿಳಿಸಿದರು.
ಬಳ್ಳಾರಿಯ ಆರ್. ಭೀಮಸೇನ್, ಕಲಬುರ್ಗಿಯ ಸ್ವಾಮಿರಾವ್ ಕುಲಕರ್ಣಿ, ಪ್ರಭುದೇವ್ ಕಪಗಲ್, ರಾಜಣ್ಣ ಜೇವರ್ಗಿ, ಡಾ. ವಿಶ್ವನಾಥ್ ವಂಶಾಕೃತಮಠ್, ಮಹಾಂತೇಶ್ ಗಜೇಂದ್ರಗಡ, ಮಲ್ಲಿಕಾರ್ಜುನ್ ಮಡ್ಡೆ ಮೈಂದರ್ಗಿ, ಸಿದ್ದು ನಾಲತವಾಡ್, ಬಸವರಾಜ್ ಪಂಚಗಲ್, ಮಂಜುನಾಥ್ ಸಂಗನಾಳ್, ಮಂಟೇಶ್ ಬಿ. ದಂಡಿನ್, ಶ್ರೀಮತಿ ಪ್ರೇಮಾ ಬಿ. ಗುಳೇದಗುಡ್ಡ, ಶ್ರೀಮತಿ ಜ್ಯೋತಿಲಕ್ಷ್ಮೀ ಕಲ್ಲೂರ್, ಕುಮಾರ್ ಅರಳಿಹಳ್ಳಿ, ಬಸವರಾಜ್ ಯಾಳವಾರ್, ಅಷ್ಪಾಕ್ ಜಹಾಗೀರದಾರ್, ಶ್ರೀಮತಿ ರಾಜಮ್ಮ ಶ್ರೀಧರ್, ಶ್ರೀಮತಿ ಉಮಾ ರಾಣೆಬೆನ್ನೂರ್, ಮಹಾದೇವಪ್ಪ ಹುಣಶ್ಯಾಳ್, ಪ್ರಭು ಗುಡ್ಡದ ಗೊಳಸಂಗಿ, ಶ್ರೀಮತಿ ಉಮಾ ಬಾರಿಗಿಡದ, ಬಸವರಾಜ್ ಹೂಗಾರ್ ನರಸಲಗಿ, ದಯಾನಂದ್ ಹಾಸು ಹಿರೋಳಿ, ಬಸವರಾಜ್ ಭಂಟನೂರ್, ಸಿದ್ದಣ್ಣ ಹೂಗಾರ್ ದೇಸಾಯಿ ಕಲ್ಲೂರ್, ಸಿದ್ರಾಮಪ್ಪ ಪೋಲಿಸ್ ಪಾಟೀಲ್, ಬಸಣ್ಣ ಪೂಜಾರಿ ಕಲಬುರ್ಗಿ, ಶಂಕರ್ ಹೂಗಾರ್ ದೇಸಾಯಿ ಕಲ್ಲೂರ್, ರಾಯಚೂರಿನ ಶ್ರೀಮತಿ ಶಾಂತಾ ಕುಲಕರ್ಣಿ, ಶ್ರೀಮತಿ ಶಿವಲಿಂಗಮ್ಮ ಬಿ. ಪೂಜಾರಿ, ಸಿರಸಪ್ಪಯ್ಯ ಮಹಾಸ್ವಾಮಿಗಳು ಅಳ್ಳಳ್ಳಿ, ಶಂಕರಜೀ ಹಿಪ್ಪರಗಿ ಕವಿಗಳು, ಸಿದ್ದಲಿಂಗಯ್ಯಸ್ವಾಮಿ ಮಲಕೂಡ್, ಪ್ರಭಾಕರ್ ಜೋಶಿ, ಬಿ.ಹೆಚ್. ನಿರಗುಡಿ, ಗುರಪ್ಪ ಪಾಟೀಲ್, ಶಾಮರಾವ್ ಕೊರವಿ, ಬಸವರಾಜ್ ಪಾಟೀಲ್, ವಿಶ್ವನಾಥ್ ಪಾಟೀಲ್, ರಾಮರಾವ್ ಪಾಟೀಲ್, ಶಿವರಾಜ್ ಪಾಟೀಲ್, ಚಂದ್ರಶೇಖರ್ ಹೊಸಮನಿ, ಗುಂಡಣ್ಣ ಡಿಗ್ಗಿ, ಪ್ರಕಾಶ್ ವಿಭೂತಿ, ಮಲ್ಲಿನಾಥ್ ಆಲೇಗಾಂವ್, ಶ್ರೀನಿವಾಸ್ ಚಿಂಚೋಳಿಕರ್, ಬಾಬು ಗೋಪಾನ್, ಬಾಬುರಾವ್ ಸಾಹುಕಾರ್, ಚಂದು ಬನ್ನಟ್ಟಿ ಅಫಜಲಪುರ, ಕಾಶಿನಾಥ್ ಬಿರಾದಾರ್, ದತ್ತಾತ್ರೇಯ್ ಬುಕ್ಕಾ, ಶ್ರೀಮಂತ್ ಹದಗಲ್ಲಕರ್, ಚಂದ್ರಶೇಖರ್ ಲಕ್ಕಶೆಟ್ಟಿ, ಗೈಬಣ್ಣಾ ವಾಲೀಕಾರ್, ಗೋಪಾಲ್ ಬಾಜೇಪಳ್ಳಿ, ಶೇಖರ್ ದೇವರಗುಡಿ, ಸಂತೋಷ್ ಖನ್ನಾ, ಸಂಗಣ್ಣ ಅಲ್ದಿ, ನಾಗರಾಜ್ ಕಲ್ಲಾ, ಶ್ರೀಮತಿ ಶಾಂತಾ ಭೀಮಸೇನರಾವ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ವಿವರಿಸಿದರು.
ಕಳೆದ 2003ರ ಆಗಸ್ಟ್ 22ರಲ್ಲಿ ಕಲ್ಯಾಣ ಕರ್ನಾಟಕದ ಕಲಬುರ್ಗಿ ನಗರದಲ್ಲಿ ಕೆ.ಎನ್. ಸಾಳುಂಕೆ ವಿರಚಿತ ಕಿವುಡ ಮಾಡಿದ ಕಿತಾಪತಿ ನಾಟಕ ಪ್ರದರ್ಶನದೊಂದಿಗೆ ದಾಪುಗಾಲು ಹಾಕುತ್ತ ಸತತ 13 ವರ್ಷಗಳ ಕಾಲ ಒಂದೇ ಸ್ಥಳದಲ್ಲಿ ಸುಮಾರು 24 ನಾಟಕಕಾರರ 60 ನಾಟಕಗಳು, 9 ಸಾವಿರಕ್ಕೂ ಹೆಚ್ಚು ಪ್ರದರ್ಶನವನ್ನು ಕಂಪೆನಿ ನೀಡಿದೆ. ಆ ಮೂಲಕ ರಂಗಭೂಮಿಯ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ ಎಂದು ಅವರು ಹೇಳಿದರು.
ಸಂಘದ ಯಶಸ್ಸು ಗುರುತಿಸಿ ವಿಧಾನ ಪರಿಷತ್ ಸದಸ್ಯೆ ಹಾಗೂ ಚಿತ್ರನಟಿ ಶ್ರೀಮತಿ ಉಮಾಶ್ರೀ ಅವರ ಗೌರವಾಧ್ಯಕ್ಷತೆಯಲ್ಲಿ ಹಾಗೂ ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಶ್ರೀ ಗುರು ಕುಮಾರೇಶ್ವರ್ ನಾಟ್ಯ ಸಂಘದ ಅಭಿನಂದನಾ ಸಮಿತಿಯವರು ಡಾ. ಪಂ. ಪುಟ್ಟರಾಜ್ ಕವಿ ಗವಾಯಿಗಳು ಹಾಗೂ ಡಾ. ಚನ್ನವೀರ ಶಿವಾಚಾರ್ಯರ ದಿವ್ಯ ಸಾನಿಧ್ಯದಲ್ಲಿ, ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್, ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರ ಸಮ್ಮುಖದಲ್ಲಿ ಸಂಘದವರಿಗೆ ಹಾಗೂ ಕಲಾವಿದರಿಗೆ ಬೆಳ್ಳಿ ಜೋಡು ಸಮೆಯ ಕಾಣಿಕೆಯೊಂದಿಗೆ ಸನ್ಮಾನಿಸಿ ಗೌರವಿಸಿದ್ದು ಸ್ಮರಣೀಯ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶ್ರೀಧರ್ ಹೆಗಡೆ, ಶಂಕರಜೀ ಹಿಪ್ಪರಗಿ, ಸಿದ್ದಲಿಂಗಯ್ಯಸ್ವಾಮಿ, ಬಿ.ಎಚ್. ನಿರಗುಡಿ ಮುಂತಾದವರು ಉಪಸ್ಥಿತರಿದ್ದರು.