ಜೂ.8ಕ್ಕೆ  ಸಿನಿಮಾಸಿರಿಯಿಂದ ದಿ.ದ್ವಾರಕೀಶ್ ಗೆ ಗಾನ ನಮನ

ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.೬; ಚಲನಚಿತ್ರ ಅಭಿಮಾನಿಗಳ ಕ್ರಿಯಾತ್ಮಕ ಸಂಸ್ಥೆ ಸಿನಿಮಾ ಸಿರಿಯಿಂದ ಜೂನ್ 8ರ  ಸಂಜೆ 6ಕ್ಕೆ  ನಗರದ ಎಂ.ಸಿ.ಮೋದಿ ವೃತ್ತದಲ್ಲಿನ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಇತ್ತೀಚಿಗೆ ಸ್ವರ್ಗಸ್ತರಾದ ನಾಡಿನ ಖ್ಯಾತ ಹಾಸ್ಯ ಚಲನಚಿತ್ರ ನಟ, ನಿರ್ಮಾಪಕ ನಿರ್ದೇಶಕರ ಕೀರ್ತಿಶೇಷ ದ್ವಾರಕೀಶ್ ಅವರಿಗೆ ಅವರದ್ದೇ ಚಲನಚಿತ್ರದ ಗಾಯನದೊಂದಿಗೆ ಗಾನನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಅಂದನೂರು ಮುಪ್ಪಣ್ಣ ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಲವನ್ನು ತಡೆಯೋರು ಯಾರೂ ಇಲ್ಲ ಶೀರ್ಷಿಕೆಯೊಂದಿಗೆ ನಡೆಯುವ ಸಮಾರಂಭವನ್ನು  ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಂಗಳೂರು ಖ್ಯಾತ ಚಲನಚಿತ್ರದ ನಿರ್ಮಾಪಕರು, ನಿರ್ದೇಶಕರಾದ ಹೆಚ್.ಆರ್.ಭಾರ್ಗವ ಆಗಮಿಸಲಿದ್ದು ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ನೂತನ ಅಧ್ಯಕ್ಷ ಅಂದನೂರು ಮುಪ್ಪಣ್ಣ ವಹಿಸಿಕೊಳ್ಳಲಿದ್ದಾರೆ ಎಂದು ಮಾಹಿತಿ  ನೀಡಿದರು.ಸಂಸ್ಥೆಯ ಪ್ರಧಾನ ಕಾರ್ಯದರ್ಶಿ, ಗಾಯಕ ಆರ್.ಟಿ.ಮೃತುಂಜಯ ಕಾರ್ಯಕ್ರಮದ ವಿವರ ನೀಡಿ, ನಾಡಿನ ಖ್ಯಾತ ನಟರಾದ ಡಾರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ತನ್ನ ಜೀವನವನ್ನೇ ಚಲನಚಿತ್ರ ರಂಗಕ್ಕೆ ನಟಿಸಿದ ದ್ವಾರಕೀಶ್ರವರ ಚಲನಚಿತ್ರ ರಂಗದಲ್ಲಿ ಸಾಧನೆ ಅವಿಸ್ಮರಣೀಯ. ಈ ಹಂತದಲ್ಲಿ ತನ್ನ ಜೀವನವನ್ನೇ ತ್ಯಾಗ ಮಾಡಿದ ಇವರು ಪ್ರಚಂಡ ಕುಳ್ಳ ಎಂದೇ ಖ್ಯಾತರಾಗಿದ್ದಾರೆ ಎಂದು  ಹೇಳಿದರು.ಸಂಸ್ಥೆಯ ಪರಿಕಲ್ಪನಾ ನಿರ್ದೇಶಕರಾದ ಸುರಭಿ ಶಿವಮೂರ್ತಿ ಮಾತನಾಡಿ, ಉಚಿತ ಪ್ರವೇಶಾವಕಾಶವಿದ್ದು, ಕನ್ನಡ ಚಲನಚಿತ್ರ ಇಂಪಾದ ಹಾಡುಗಳನ್ನು ಆಲಿಸುವ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಗಾನ ನಮನ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.ಸುದ್ದಿಗೋಷ್ಟಿಯಲ್ಲಿ ಎನ್.ವಿ.ಬಂಡಿವಾಡ, ಹೆಚ್.ವಿ.ಮಂಜುನಾಥಸ್ವಾಮಿ, ಸಾಲಿಗ್ರಾಮ ಗಣೇಶ್ ಶೆಣೈ, ಎಂ.ಜಿ.ಜಗದೀಶ್, ಮಲ್ಲಿಕಾರ್ಜುನ, ಆರ್.ಟಿ. ಮೃತ್ಯುಂಜಯ, ಡಾ.ಬಿ.ಎಸ್. ನಾಗಪ್ರಕಾಶ್ ಇತರರು ಇದ್ದರು.