ಪ್ರಗತಿ ಪರಿಶೀಲನಾ ಸಭೆ
ಧಾರವಾಡ,ಜೂ6: ಪ್ರಸಕ್ತ 2024-25 ನೇ ಸಾಲಿಗೆ ಜಿಲ್ಲೆಯ ವಾರ್ಷಿಕ ವಿತ್ತೀಯ ಯೋಜನಾ ಗುರಿಯನ್ನು ರೂ. 20,053.53 ಕೋಟಿ ನಿಗಧಿಪಡಿಸಿದ್ದು, ಜಿಲ್ಲೆಯ ಎಲ್ಲ ಬ್ಯಾಂಕುಗಳ ಪ್ರತಿ ಶಾಖೆಗೆ ಗುರಿ ನಿಗಧಿಪಡಿಸಲಾಗಿದ್ದು, ಕಾಲಮಿತಿಯಲ್ಲಿ ಪೂರ್ಣ ಪ್ರಗತಿ ಸಾಧಿಸಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ. ಅವರು ಹೇಳಿದರು.