ಮಾಲವಿ ಜಲಾಶಯದ ಸುತ್ತಮುತ್ತ ಮುಳ್ಳುಗಂಟೆ ಸ್ವಚ್ಛತೆಗೆ ಮನವಿ
ಸಂಜೆವಾಣಿ ವಾರ್ತೆ 
ಹಗರಿಬೊಮ್ಮನಹಳ್ಳಿ. ಜೂ.06  ತಾಲೂಕಿನ ಜೀವನಾಡಿ ಮಾಲವಿ ಜಲಾಶಯದಲ್ಲಿ ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರಿಗೆ ಮಳೆ ಬಂದ ಹಿನ್ನೆಲೆಯಲ್ಲಿ ಮಾಲವಿ ಜಲಾಶಯದಲ್ಲಿ ಹೂಳೆತ್ತುವ ಕಾರ್ಯ ಬದಲಾಗಿ ಕಾಲುವೆ ಸ್ವಚ್ಛತಾ ಕಾರ್ಯಕ್ಕೆ ಹಾಗೂ ಜಲಾಶಯದ ಏರಿಯ ಮೇಲೆ ಬೆಳೆದಿರುವ ಮುಳ್ಳುಗಂಟಿಗಳ ಸ್ವಚ್ಛತೆ ಕೆಲಸ ನೀಡುವಂತೆ ಮತ್ತು ಮಾಲವಿ ಜಲಾಶಯದ ಕ್ರಸ್ಟ್ ಗೇಟ್ ಇದುವರೆಗೂ ದುರಸ್ತಿ ಕಾರ್ಯ ನೆಡೆದಿಲ್ಲ.ಕೊಟ್ಟೂರು ಭಾಗದಲ್ಲಿ ಮಳೆ ಹೆಚ್ಚಾದಲ್ಲಿ ಜಲಾಶಯಕ್ಕೆ ನೀರು ಬರುವ ಸಾಧ್ಯತೆ ಇದೆ.ಜಲಾಶಯದಲ್ಲಿ ನೀರು ಪೋಲಾಗದಂತೆ ದುರಸ್ತಿ ಇರುವ ಗೇಟ್ ಗಳನ್ನು ಸರಿ ಪಡಿಸುವವರೆಗೆ ಗೇಟ್ ಗಳಿಗೆ ಅಡ್ಡಲಾಗಿ ತಾತ್ಕಾಲಿಕವಾಗಿ ಮರಳಿನ ಚೀಲದಿಂದ ತಡೆಗೋಡೆ ನಿರ್ಮಾಣ ಮಾಡಿ ನೀರು ಪೋಲ್ ಆಗುವುದನ್ನು ತಡೆಯಲು ಒತ್ತಾಯಿಸಿ ಮಾಲವಿ ಗ್ರಾಮದ ನಾಗರಿಕರು ಗ್ರಾಮ ಪಂಚಾಯತಿ ಪಿಡಿಒ ಶ್ರೀ ಕಾಂತ್ ನಾಯ್ಕ್ ಅವರಿಗೆ ಮನವಿ ಸಲ್ಲಿಸಿದರು.  
ಈ ವೇಳೆ ಕೆಎಂ ಆನಂದ್, ಅಕ್ಷಲಿ ಶ್ರೀನಿವಾಸ, ಬೆಣಕಲ್ ಶಿವು, ಬುಡೇನಸಾಬ್ ,ಡೋಕ್ಕಿ ಶಿವಪ್ಪ, ಉಪ್ಪಾರ್ ಕರಿಬಸಪ್ಪ, ಕುಂಬಾರ್ ಕೊಟ್ರೇಶ್, ಕಾತ್ರಿಕಿ ಬಕ್ಕಜ್ಜ, ಹನುಮಂತ ಸೇರಿದಂತೆ ಇತರರು ಇದ್ದರು.