ಅಕ್ಷರ ಶಾಲೆ ವಿದ್ಯಾರ್ಥಿಗಳಿಂದ ಪರಿಸರ ದಿನಾಚರಣೆ
ಸಂಜೆವಾಣಿ ವಾರ್ತೆ
ಗಂಗಾವತಿ, ಜೂ.06 : ನಗರದ ಅಕ್ಷರ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳಿಂದ ಪರಿಸರ ಜಾಗೃತಿ ಜಾಥಾ ನಡೆಸುವ ಮೂಲಕ ಪರಿಸರ ದಿನಾಚರಣೆ ಆಚರಿಸಿದರು.
ನಗರದ ಶ್ರೀ ಕೃಷ್ಣದೇವರಾಯ ವೃತದಿಂದ ಹೊರಟ ಜಾಗೃತಿ ಜಾಥಾಗ ಶಾಲೆ ಅಧ್ಯಕ್ಷ ರವಿ ಚೈತನ್ಯ ರೆಡ್ಡಿ  ಚಾಲನೆ ನೀಡಿದರು. ನಂತರ ಅಂಬೇಡ್ಕರ್ ವೃತ್ತ ಬಸವಣ್ಣ ಸರ್ಕಲ್ ಗಾಂಧಿ ಸರ್ಕಲ್ ಮಹಾವೀರ ಸರ್ಕಲ್ ರಸ್ತೆಗಳಲ್ಲಿ ಜಾಗೃತಿ ಜಾಥಾ ಸಂಚರಿಸಿತು. ವಿದ್ಯಾರ್ಥಿಗಳು ಜಾಥದಲ್ಲಿ ‘ಪ್ಲಾಸ್ಟಿಕ್‌ ತ್ಯಜಿಸಿ ಪರಿಸರ ಸಂರಕ್ಷಿಸಿ, ಸ್ವಚ್ಚತೆ ಕಾಪಾಡಿ, ಡೆಂಗಿ ರೋಗದ ಬಗ್ಗೆ ಎಚ್ಚರವಹಿಸಿ, ಸೈಕಲ್‌ ಬಳಸಿ ವಾಯು ಮಾಲಿನ್ಯ ತಡೆಗಟ್ಟಿ ಸೇರಿ ವಿವಿಧ ಘೋಷಣೆ ಕೂಗಿ ಗಮನಸೆಳೆದರು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಕಾಡುಬೆಳೆಸಿ ನಾಡು ಉಳಿಸಿ, ದೇಶದ ಆಸ್ತಿ ಅರಣ್ಯ ಸಂಪತ್ತು, ಇಂತಹ ಹತ್ತು ಹಲವು ಪರಿಸರ ಅರಿವು ಮೂಡಿಸುವ ಘೋಷಣೆ ಕೂಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಈ ವೇಳೆ ರವಿ ಚೈತನ್ಯ ರೆಡ್ಡಿ ಮಾತನಾಡಿ ಇತ್ತಿಚೀನ ದಿನಗಳಲ್ಲಿ ಮರ ಗಿಡಗಳು ನಾಶ ಹೊಂದುವ ಪರಿಸ್ಥಿತಿ ಎದುರಾಗಿದೆ. ಸರಿಯಾದ ರೀತಿಯ ಗಾಳಿ ಇಲ್ಲದೆ ಆರೋಗ್ಯದ ಮೇಲೆ ಪ್ರಭಾವ ಬೀರ ತೊಡಗಿದೆ. ಅಲ್ಲದೇ ಮುಂಬರುವ ದಿನಗಳಲ್ಲಿ ನಮ್ಮ ಪರಿಸರವನ್ನು ನಾವೇಲ್ಲರು ಕಾಪಾಡಿಕೊಳ್ಳಬೇಕು. ಕೆಲವೊಮ್ಮೆ ತಂದೆ-ತಾಯಿ ಮಕ್ಕಳಲ್ಲಿ ಗಿಡಗಳನ್ನು ನೆಡುವ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.
ನಂತರ ಶಾಲೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸಸಿಗಳನ್ನು ವಿತರಿಸಲಾಯಿತು, ಈ ಸಂದರ್ಭದಲ್ಲಿ ಶಿಕ್ಷಕಿಯರು  ಶ್ವೇತಾ ಮಂಜುಳ,  ಶಿಲ್ಪ, ಸವಿತಾ, ಆಸ್ಮಾ, ರೂಪ, ಸೋಮಶೇಖರ್, ಮೋಜಸ್, ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
One attachment • Scanned by Gmail