ರಾಜೇಶ್ವರಿ ವಿದ್ಯಾಸಂಸ್ಥೆಯಲ್ಲಿ ಪರಿಸರ ದಿನಾಚರಣೆ

ಸಂಜೆವಾಣಿ ವಾರ್ತೆ
ಮಲೇಬೆನ್ನೂರು.ಜೂ.೬; ಪಟ್ಟಣದ ಜಿಗಳಿ ರಸ್ತೆಯ ಒಡೆಯರ ಬಸಾಪುರ ಗ್ರಾಪಂ ವ್ಯಾಪ್ತಿಯ ಪಟೇಲ್ ಬಸಪ್ಪ ಎಜುಕೇಶನ್ ಅಸೋಸಿಯೇಶನ್ ನ ರಾಜ ರಾಜೇಶ್ವರಿ ಪ್ರೌಢಶಾಲೆಯಲ್ಲಿ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ  ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಪರಿಸರದ ಮಹತ್ವ ತಿಳಿಸಿಕೊಡಲಾಯಿತು. ಮೊದಲಿಗೆ  ಸಂಸ್ಥೆಯ ಕಾರ್ಯದರ್ಶಿ ಜಿ ಬಿ ಶಿವಾನಂದಪ್ಪ , ಪ್ರಾಂಶುಪಾಲರಾದ ಶ್ರೀಮತಿ ಸುಜಾತ ಶಿವಾನಂದಪ್ಪ ಹಾಗೂ ಶಿಕ್ಷಕರ  ಸಮ್ಮುಖದಲ್ಲಿ ವಿದ್ಯಾರ್ಥಿಗಳು ಹತ್ತಾರು ತೆಂಗಿನ ಸಸಿ,  ಹೂವಿನ ಗಿಡ, ಔಷಧಿ ಸಸ್ಯಗಳನ್ನು ನೆಟ್ಟರು.  8, 9 ಮತ್ತು 10 ನೇ ತರಗತಿ ವಿದ್ಯಾರ್ಥಿನಿಯರು ಪರಿಸರ ಗೀತೆಗಳನ್ನು ಹಾಡಿದರು. 9 ನೇ ತರಗತಿ ಬಾಲಕರು ಮಾನವನಿಗೆ ಪರಿಸರದ ಉಪಕಾರ,  ಪರಿಸರ ಸಂರಕ್ಷಣೆಯ ಪ್ರಸ್ತುತತೆ ಇತ್ಯಾದಿ ತಿಳಿಸುವ ಕಿರು ನಾಟಕ ಪ್ರದರ್ಶಿಸಿದರು.