ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ: ಮತಗಳ ಎಣಿಕೆ ಪ್ರಾರಂಭ  ರಾತ್ರಿ ವೇಳೆಗೆ ಫಲಿತಾಂಶ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.06: ವಿಧಾನ ಪರಿಷತ್ತಿನ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಗೆ  ಜೂ.03 ಸೋಮವಾರದಂದು ಮತದಾನ ನಡೆದಿತ್ತು.‌ಮತಗಳ ಎಣಿಕೆ ಇಂದು ಬೆಳಿಗ್ಗೆ  ಗುಲ್ಬರ್ಗಾ ವಿಶ್ವವಿದ್ಯಾಲಯ ಆವರಣದ, ಸಾದ್ವಿ ಶಿರೋಮಣಿ ಹೇಮರೆಡ್ಡಿ ಮಲ್ಲಮ್ಮ ಅಧ್ಯಯನ ಪೀಠ ಹಾಗೂ ಸಂಶೋಧನಾ ಕೇಂದ್ರದಲ್ಲಿ  ನಡೆದಿದೆ
ಚುನಾವಣಾಧಿಕಾರಿಗಳು ಹಾಗೂ ರಾಜಕೀಯ ಮುಖಂಡರ ಸಮ್ಮುಖದಲ್ಲಿ ಭದ್ರತಾ ಕೊಠಡಿ (ಸ್ಟ್ರಾಂಗ್ ರೂಮ್) ತೆರೆದು ಮತಗಳ ಎಣಿಕೆಗೆ ಆರಂಭ ಮಾಡಿತು.
ಚುನಾವಣಾ ಅಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತರಾದ  ಕೃಷ್ಣ ಭಾಜಪೇಯಿ, ಚುನಾವಣೆ ವೀಕ್ಷಕರಾದ ಎಂ ಮಹೇಶ್ವರ ರಾವ್, ಬೀದರ್ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಯಾದಗಿರಿ ಜಿಲ್ಲಾಧಿಕಾರಿ ಸುಶೀಲಾ, ಡಿಸಿಪಿ ಕನ್ನಿಕಾ ಸಿಕ್ರಿವಾಲ್ ಕಲಬುರಗಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಪ್ರಾದೇಶಿಕ ಆಯುಕ್ತ ಇಲಿಯಾಸ್ ಅಹ್ಮದ್ ಇಸಾಮದಿ ಮುಂತಾದವರು
ಹಾಜರಿದ್ದರು.
ಮತಪತ್ರಗಳನ್ನು ಬಂಡಲ್ ಮಾಡಿ. ಪ್ರಾಶಸ್ತ್ಯದ ಆಧಾರದಲ್ಲಿ ಮತಗಳ ಎಣಿಕೆ  ನಡೆಯುವುದರಿಂದ ಬಹುತೇಕ ಫಲಿತಾಂಶ ಬರಲು ರಾತ್ರಿಯಾಗುವ ಸಾಧ್ಯತೆ ಇದೆ.
ಈ ಚುನಾವಣೆಯಲ್ಲಿ ನಾರಾ ಪ್ರತಾಪ್ ರೆಡ್ಡಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಎರಡನೇ ಬಾರಿಗೆ ಸ್ಪರ್ಧೆ ಮಾಡಿದ್ದಾರೆ.  ಈ ಬಾರಿಗೆಲ್ಲುವ ವಿಶ್ವಾಸ ಹೊಂದಿದ್ದಾರೆ.
ಇವರಿಗೆ ತೀವ್ರ ಸ್ಪರ್ಧೆ ಒಡ್ಡಿರುವುದು ಈ ಬಾರಿ ಬಿಜೆಪಿಯ ಅಮರನಾಥ ಪಾಟೀಲರಾಗಿದ್ದಾರೆ. ಇನ್ನು ಕಾಂಗ್ರೆಸ್ ನ‌ ಹಾಲಿ ಸದಸ್ಯ ಚಂದ್ರಶೇಖರ್ ಪಾಟೀಲ್ ಸೇರಿದಂತೆ ಒಟ್ಟು 19 ಜನ ಕಣದಲ್ಲಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಶೇ.67.78 ರಷ್ಟು ಮತದಾನವಾಗಿತ್ತಯ.
ಕಂಪ್ಲಿ, ಸಿರುಗುಪ್ಪ, ಬಳ್ಳಾರಿ ಗ್ರಾಮೀಣ, ಬಳ್ಳಾರಿ ನಗರ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರ ಒಳಗೊಂಡಂತೆ 14,981 ಪುರುಷರು, 9,198 ಮಹಿಳೆಯರು ಮತ್ತು 4 ಜನ ಇತರೆ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 24,183 ಪದವೀಧರ ಮತದಾರರು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 10,555 ಪುರುಷರು, 5,837 ಮಹಿಳೆಯರು ಸೇರಿದಂತೆ 16,392 ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಿದ್ದರು. ಇದರಲ್ಲಿ ಎಷ್ಟು ಜನರ ಮತಗಳು ತಿರಸ್ಕೃತ ಆಗಿವೆಯೋ ಮತ ಎಣಿಕೆ ನಂತರ ತಿಳಿದು ಬರಲಿದೆ.