ರೂಟ್ಸ್ ಪಭ್ಲಿಕ್ ಶಾಲಾ ಮಕ್ಕಳಿಂದವಿಶ್ವ ಪರಿಸರ ದಿನಾಚರಣೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.06: ನಗರದ ರೂಟ್ಸ್ ಪಬ್ಲಿಕ್ ಶಾಲೆ ಹಾಗೂ ಸಂಜೀವಿನಿ ಟ್ರಸ್ಟ್ ನಿಂದ ನಿನ್ನೆ  ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ  ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.
ಶಾಲೆಯ ವಿವಿಧ ತರಗತಿಯ ವಿದ್ಯಾರ್ಥಿಗಳು ಘೋಷಣಾ ಫಲಕಗಳನ್ನು ಹಿಡಿದುಕೊಂಡು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು.
ಹಸಿರೇ ಉಸಿರು-ಉಸಿರೇ ಜೀವನ, ಸೇವ್ ಟ್ರೀ ಸೇವ್ ಲೈಫ್, ಒನ್ ಲೈಫ್ ಒನ್ ಅರ್ಥ್ ಮೊದಲಾದ ಘೋಷಣೆಗಳನ್ನು ಕೂಗುತ್ತ ಜನರಲ್ಲಿ ಮರ, ಗಿಡಗಳನ್ನು ಬೆಳೆಸುವ ಮಹತ್ವದ ಬಗ್ಗೆ ಅರಿವು ಮೂಡಿಸಿದರು.
ಸಂಜೀವಿನಿ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಎಂ.ಪ್ರಭಂಜನಕುಮಾರ್, ರೂಟ್ಸ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಎಂ.ನಿರುಪಮ, ಉಪ ಪ್ರಾಂಶುಪಾಲೆ ಸುಮಾ ಸೇರಿದಂತೆ ಶಾಲೆಯ  ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.