ಉಚಿತ ಕಣ್ಣಿನ ಆರೋಗ್ಯ ತಪಾಸಣಾ ಶಿಬಿರ
ಬೀದರ:ಜೂ.6:”ನೇತ್ರದಾನ ಮಹಾದಾನ” ಆದ್ದರಿಂದ ಸತ್ತ ನಂತರ ಈ ಸುಂದರ ಕಣ್ಣುಗಳು ಮಣ್ಣಿನಲ್ಲಿ ಮಣ್ಣಾಗದೇ ನೇತ್ರದಾನ ಮಾಡುವುದರ ಮೂಲಕ ಅಂಧರ ಬಾಳಿನಲ್ಲಿ ಆಶಾಕಿರಣದ ಬೆಳಕಾಗೋಣ. ಎಲ್ಲರೂ ನೇತ್ರದಾನ ಮಾಡೋಣ” ಎಂದು ಈPಂI ಸಂಸ್ಥೆಯ ಅಧ್ಯಕ್ಷರಾದ ಡಾ. ನಾಗೇಶ ಪಾಟೀ¯ ಕರೆ
ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ (ಈPಂI) ಬೀದರ ಶಾಖೆ ಹಾಗೂ ಡಾ. ಎಸ್.ಎಸ್. ಸಿದ್ದಾರಡ್ಡಿ ಪೌಂಡೇಷನ್, ಬೀದರ ಇವರುಗಳ ಸಂಯುಕ್ತಾಶ್ರಯದಲ್ಲಿ ದಿನಾಂಕ: 28.05.2024 ರಂದು ಡಾ. ಎಸ್.ಎಸ್. ಸಿದ್ದಾರಡ್ಡಿ ನೇತ್ರ ಚಿಕಿತ್ಸಾಲಯದಲ್ಲಿ “ಮಹಿಳಾ ಲೈಂಗಿಕ ಕಾರ್ಯಕರ್ತೆಯರು, ಮಹಿಳಾ PಐಊIಗಿ ಗಳು ಹಾಗೂ ಮಂಗಳಮುಖಿಯರು ಇವರುಗಳಿಗಾಗೊ “ಕಣ್ಣಿನ ತಪಾಸಣಾ ಶಿಬಿರ” ಹಮ್ಮಿಕೊಳ್ಳಲಾಯಿತು.
ಈPಂI ಸಂಸ್ಥೆಯ ಅಧ್ಯಕ್ಷರಾದ ಡಾ. ನಾಗೇಶ ಪಾಟೀಲ್ ಇವರು ಕಾರ್ಯಕ್ರಮ ಉದ್ಘಾಟಿಸಿ, “ನಮ್ಮ ಈPಂI ಸಂಸ್ಥೆಯು 50 ವರ್ಷಗಳಿಂದ ಎಲ್ಲ ವರ್ಗದ ಜನರಿಗೆ ಆರೋಗ್ಯ ಸೇವೆ ನೀಡುತ್ತಿದೆ. ಮಾನವನ ಅಂಗಾಂಗಗಳಲ್ಲಿ ಕಣ್ಣು ಅತಿ ಮಹತ್ವದಾಗಿದೆ. ಕಣ್ಣಿನ ದೃಷ್ಟಿಯಿಂದಲೇ ನಮ್ಮ ದಿನನಿತ್ಯದ ಜೀವನ ಸಾಗಿಸಲು ಹಾಗೂ ನಮ್ಮ ಸುಂದರ ಜೀವನ ನೋಡಲು ಸಾದ್ಯ. “ನೇತ್ರದಾನ ಮಹಾದಾನ” ಆದ್ದರಿಂದ ನಾವು ಸತ್ತ ನಂತರ ಈ ಸುಂದರ ಕಣ್ಣುಗಳು ಮಣ್ಣಿನಲ್ಲಿ ಮಣ್ಣಾಗದೇ ನೇತ್ರದಾನ ಮಾಡುವುದರ ಮೂಲಕ ಅಂಧರ ಬಾಳಿನಲ್ಲಿ ಆಶಾಕಿರಣದ ಬೆಳಕಾಗೋಣ. ಎಲ್ಲರೂ ನೇತ್ರದಾನ ಮಾಡೋಣ” ಎಂದು ಕರೆ ನೀಡಿದರು.
ಡಾ. ಎಸ್.ಎಸ್. ಸಿದ್ದಾರಡ್ಡಿ ಪೌಂಡೇಷನ್, ಬೀದರ ಸಂಸ್ಥೆಯ ಮೇಲ್ವಿಚಾರಕರಾದ ಶ್ರೀ ಕಲ್ಯಾಣರಾವ ಚಳಕಾಪೂರೆ ಇವರು “ಡಾ. ಎಸ್.ಎಸ್. ಸಿದ್ದಾರಡ್ಡಿ ಹಾಗೂ ಡಾ. ಗುರಮ್ಮಾ ಸಿದ್ದಾರಡ್ಡಿ ಇವರುಗಳು ಬೀದರ ಜಿಲ್ಲೆಯ ಜನತೆಗಾಗಿ ಮಾಡಿದ ಆರೋಗ್ಯ ಕ್ರಾಂತಿಯ ಕುರಿತು, ಸಮಾಜಸೇವೆಯ ಕುರಿತು ಮಾಹಿತಿ ತಿಳಿಸಿದರು. ಹಾಗೂ ಈಗ ಡಾ. ಎಸ್. ಎಸ್. ಸಿದ್ದಾರಡ್ಡಿ ಪೌಂಡೇಷನ್ ಮೂಲಕ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ. ಅದರಲ್ಲಿ ಈ ನೇತ್ರ ಚಿಕಿತ್ಸಾಲಯ ಕೂಡ ಒಂದು. ಇಲ್ಲಿ ಎಲ್ಲ ವರ್ಗದ ಬಡಜನರಿಗೆ ಉಚಿತ ಕಣ್ಣಿನ ಆರೋಗ್ಯ ಸೇವೆ ನೀಡಲಾಗುತ್ತಿದೆ. ಆದ್ದರಿಂದ ಎಲ್ಲರೂ ಕಣ್ಣಿನ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಂಡು ಕಣ್ಣಿನ ಆರೈಕೆ ಮಾಡಿಕೊಳ್ಳಿ” ಎಂದು ತಿಳಿಸಿದರು.
ಡಾ. ಎಸ್. ಎಸ್. ಸಿದ್ದಾರಡ್ಡಿ ನೇತ್ರ ಚಿಕಿತ್ಸಾಲಯದ ನೇತ್ರತಜ್ಞರಾದ ಡಾ. ನೇಹಾ ಇವರು ಕಣ್ಣಿನ ಆರೈಕೆ ಕುರಿತು ಮಾಹಿತಿ ತಿಳಿಸಿದರು.
ಈPಂI- ಬೀದರ ಶಾಖೆಯ ಶಾಖಾ ವ್ಯವಸ್ಥಾಪಕರಾದ ಶ್ರೀನಿವಾಸ ಬಿರಾದಾರ ಇವರು ಸಂಸ್ಥೆಯ 50 ವರ್ಷಗಳ ಕಾರ್ಯಚಟುವಟಿಕೆಗಳ ಕುರಿತು ಹಾಗೂ ಕಣ್ಣಿನ ಆರೋಗ್ಯ ತಪಾಸಣಾ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲರಿಗೂ ಸ್ವಾಗತ ಕೋರಿದರು.
ಸಂಗಮ ಸೇವಾ ಸಂಸ್ಥೆಯ ಸಿಬ್ಬಂದಿಯಾದ ಮಹೇಶ ಇವರು ಕಾರ್ಯಕ್ರಮದ ನಿರೂಪಣೆ ಮಾಡಿದರು.
ಶರಣತತ್ವ ಪ್ರಸಾರ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆಯ ಸಿಬ್ಬಂದಿಯಾದ ಶಿವಕುಮಾರ ಬೆಲ್ಲೂರೆ ಇವರು ವಂದನಾರ್ಪಣೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಶರಣತತ್ವ ಪ್ರಸಾರ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಹಾಗೂ ಸಂಗಮ ಸಂಸ್ಥೆಗಳ ಸಿಬ್ಬಂದಿವರ್ಗದವರು ಹಾಗೂ 65 ಜನ ಮಹಿಳಾ ಲೈಂಗಿಕ ಕಾರ್ಯಕರ್ತೆಯರು, ಮಹಿಳಾ PಐಊIಗಿ ಗಳು, ಮಂಗಳಮುಖಿಯರು, ಭಾಗವಹಿಸಿ, ಕಣ್ಣಿನ ಆರೋಗ್ಯದ ಕುರಿತು ಅರಿವು/ಮಾಹಿತಿ ಪಡೆದುಕೊಂಡರು.
ಕಾರ್ಯಕ್ರಮದ ನಂತರ ಡಾ. ನೇಹಾ ಇವರು ಕಣ್ಣಿನ ಆರೋಗ್ಯ ತಪಾಸಣೆ ಮಾಡಿ ಸೂಕ್ತ ಚಿಕಿತ್ಸೆ ನೀಡಿದರು ಹಾಗೂ ನೇತ್ರ ಚಿಕಿತ್ಸಾಲಯದ ಸಿಬ್ಬಂದಿವರ್ಗದವರು ಸಹಕಾರ ನೀಡಿದರು.