ಸ್ವಚ್ಛತೆ ಕಾಪಾಡುವ ಮೂಲಕ ಆರೋಗ್ಯಕರ ಸುಸ್ಥಿರ ಪರಿಸರ ನಿರ್ಮಿಸೋಣ
ಸಂಜೆವಾಣಿ ವಾರ್ತೆ
ಚಿತ್ರದುರ್ಗ. ಜೂ.೬; ಸ್ವಚ್ಛತೆ ಕಾಪಾಡುವ ಮೂಲಕ ಆರೋಗ್ಯಕರ ಸುಸ್ಥಿರ ಪರಿಸರ ನಿರ್ಮಿಸೋಣ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಕಾಶಿ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಮುದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರ ವಿಶ್ವ ಪರಿಸರ ದಿನ ಮತ್ತು ಮಲೇರಿಯಾ ವಿರೋಧಿ ಮಾಸಾರಣೆ ಪ್ರಯುಕ್ತ ಜಾಗೃತಿ ಜಾಥಾ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಶುದ್ಧ ನೀರು, ಗಾಳಿ, ಬೆಳಕು ಎμÉ್ಟೂೀ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುತ್ತದೆ. ಕೀಟಜನ್ಯ ರೋಗಗಳಾದ ಡೆಂಗ್ಯೂ, ಚಿಕನ್‍ಗುನ್ಯಾ, ಮಲೇರಿಯಾ ಆನೆಕಾಲುರೋಗಗಳು ಕೀಟಗಳಿಂದ ಹರಡುತ್ತವೆ. ಪರಿಸರ ಮಾಲಿನ್ಯ ಸ್ವಚ್ಛತೆ ಇಲ್ಲದಿದ್ದರೆ ಕೀಟಗಳು ಉತ್ಪತ್ತಿಯಾಗಿ ಮನುಷ್ಯನ ಆರೋಗ್ಯದಲ್ಲಿ ಪರಿಣಾಮ ಬೀರುತ್ತದೆ. ಶುದ್ಧ ನೀರು ಸೇವಿಸದಿದ್ದಾಗ ವಾಂತಿಬೇದಿ ಕಾಲರ ರೋಗಗಳು ಹರಡುತ್ತವೆ. ಸರಿಯಾಗಿ ಕೈಗಳನ್ನು ತೊಳೆಯುವ ಅಭ್ಯಾಸ ನಿಮ್ಮದಾಗದಿದ್ದರೆ ಅನಾರೋಗ್ಯಕ್ಕೆ ತುತ್ತಾಗುತ್ತೀರಾ. ನೀರಿನ ಶುದ್ಧತೆ ಮತ್ತು ಸುತ್ತಮುತ್ತಲ ಪರಿಸರ ಸ್ವಚ್ಛತೆ ಕಾಪಾಡುವ ಮೂಲಕ ಆರೋಗ್ಯಕರ ಸುಸ್ಥಿರ ಪರಿಸರ ನಿರ್ಮಿಸೋಣ ಎಂದರು.ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಮಾತನಾಡಿ, ಪ್ರತಿ ವರ್ಷ ಜೂನ್ 5ರಂದು ವಿಶ್ವ ಪರಿಸರ ದಿನ ಜನ ಜಾಗೃತಿ ಮೂಡಿಸುವ ಸಲುವಾಗಿ, ಇದರಿಂದ ಸುಧಾರಿತ ಜೀವನಶೈಲಿ ರೂಪಿಸುವ ಸದುದ್ದೇಶವಿದೆ. ಈ ಬಾರಿಯ ವಿಶ್ವ ಪರಿಸರ ದಿನದ ಘೋಷವಾಕ್ಯ ಭೂಮಿ ಮರುಸ್ಥಾಪನೆ, ಮರುಭೂಮೀಕರಣ ಹಾಗೂ ಬರ ಸ್ಥಿತಿಸ್ಥಾಪಕತ್ವವಾಗಿದೆ ಎಂದರು.ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಆರೋಗ್ಯ ಕೇಂದ್ರಗಳಲ್ಲಿ ಸೋಲಾರ್ ಸೌಲಭ್ಯ ಅಳವಡಿಕೆ, ದ್ರವರೂಪದ ಜೈವಿಕ ವೈದ್ಯಕೀಯ ತ್ಯಾಜ್ಯಗಳ ಸಮರ್ಪಕ ನಿರ್ವಹಣೆ ಮತ್ತು ವಿಲೇವಾರಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆವರಣದಲ್ಲಿ ಪಾಳು ಭೂಮಿಯ ಸೂಕ್ತ ನಿರ್ವಹಣೆ ಮಾಡುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಗುವುದು ಎಂದರು.ಮುದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಸಿಗಳನ್ನು ನೆಟ್ಟು ನಂತರ ಸರ್ಕಾರಿ ಶಾಲೆ ಆವರಣದ ಸ್ವಚ್ಛತೆ ಮತ್ತು ಮಲೇರಿಯಾ ವಿರೋಧಿ ಮಾಸಾಚರಣೆ ಪ್ರಯುಕ್ತ ಗ್ರಾಮದಲ್ಲಿ ಮಕ್ಕಳಿಂದ ಜಾಗೃತಿ ಜಾಥಾ ನಡೆಸಲಾಯಿತು.
 ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿ ಸುರೇಶ್ ಬಾಬು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಭಿμÉೀಕ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ರಂಗಾರೆಡ್ಡಿ, ರಾಮಪ್ಪ, ಮಲ್ಲಿಕಾರ್ಜುನ, ನಾಗರಾಜ್, ರೇಣುಕಾಸ್ವಾಮಿ, ಮಂಜುನಾಥ, ಕಿರಣ್, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಹೆಚ್.ಡಿ.ಲತಾ, ಶಾಲಾ ಶಿಕ್ಷಕರಾದ ಲಲಿತಮ್ಮ, ಮನೋರಮ, ಆಶಾ ಕಾರ್ಯಕರ್ತೆಯರು ವಿದ್ಯಾರ್ಥಿಗಳು ಭಾಗವಹಿಸಿದ್ದರು.