ಮಣ್ಣಿನ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.06-ಪಟ್ಟಣಗಳಲ್ಲಿ ಪ್ಲಾಸ್ಟಿಕ್ ಸೇರಿದಂತೆ ನಿರುಪಯುಕ್ತ ವಸ್ತುಗಳು ಹೆಚ್ಚು ಸಂಗ್ರಹಣೆಯಾಗಿ ಭೂಮಿಯಲ್ಲಿ ಸೇರಿಕೊಂಡು ಮಣ್ಣು ಮಲಿನಗೊಳ್ಳುತ್ತಿದೆ. ಇದರಿಂದ ಹೊರಬರುವ ವಿಷಕಾರಿ ವಸ್ತುಗಳಿಂದ ಪಾದರಸ, ಸೀಸ, ಕ್ಯಾಡ್ಮಿಯಂ, ಕ್ರೋಮಿಯಂ ಮುಂತಾದವುಗಳು ಜೀವ ಸಂಕುಲ ಮತ್ತು ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುವುದರಿಂದ ಮಣ್ಣಿನ ಸಂರಕ್ಷಣೆ ಪ್ರತಿಯೊಬ್ಬರಕರ್ತವ್ಯವಾಗಿದೆಎಂದು ಸಹಾಯಕಅರಣ್ಯ ಸಂರಕ್ಷಣಾಧಿಕಾರಿ ಕೆ. ಸುರೇಶ್ ಹೇಳಿದರು.
ಚಾಮರಾಜನಗರ ಪಟ್ಟಣದಕರಿವರದರಾಯ ಬೆಟ್ಟದಲ್ಲಿಂದುಅರಣ್ಯ ಇಲಾಖೆ ಮತ್ತು ಸ್ಕೌಟ್ ಮತ್ತುಗೈಡ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜೂನ್ 5ರಂದು ಸಾರ್ವಜನಿಕರಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಪ್ರತಿ ವರ್ಷ ಒಂದೊಂದುಧ್ಯೇಯ ವಾಕ್ಯಗಳೊಂದಿಗೆ ಈ ದಿನ ಆಚರಣೆಗೊಳ್ಳುತ್ತದೆ. ಈ ಬಾರಿಯ ವಿಶ್ವ ಪರಿಸರ ದಿನಾಚರಣೆಯನ್ನು ‘ನಮ್ಮ ಭೂಮಿ : ನಮ್ಮ ಭವಿಷ್ಯ’ ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ ಎಂದರು.
ವಾತಾವರಣದಲ್ಲಿ ಹೆಚ್ಚುತ್ತಿರುವ ಬಿಸಿ, ನಿರಂತರ ವಾಯು ಮಾಲಿನ್ಯ, ಜಲಮಾಲಿನ್ಯ, ಭೂ ಮಾಲಿನ್ಯಎಲ್ಲದಕ್ಕೂ ಬೆಲೆ ಕಟ್ಟುವ ಕಾಲ ಬಹಳ ದೂರವಿಲ್ಲ. ಇರುವಒಂದೇಒಂದು ಭೂಗ್ರಹವನ್ನು ಉಳಿಸಿಕೊಳ್ಳಬೇಕಾಗಿದೆ. ಹವಾಮಾನ ಏರುಪೇರುಗಳಿಂದ ಇದೇ ಮಾನವ ಕುಲ ರೋಗರುಜಿನ ಮತ್ತುಆಹಾರಕೊರತೆಯಿಂದ ಬಳಲಿ ಮಾನವ ಸಂಕುಲ ನಾಶದ ಹಾದಿ ಹಿಡಿದಿದೆಎಂದರು.
ವಲಯಅರಣ್ಯಾಧಿಕಾರಿಉಮೇಶ್‍ಅವರು ಮಾತನಾಡಿ ಸಾಧ್ಯವಾದಾಗಲೆಲ್ಲಾರಾಸಾಯನಿಕ ಮುಕ್ತ, ಸಾವಯವ ಹಾಗೂ ಸಸ್ಯ ಮೂಲದಆಹಾರ ಪದಾರ್ಥಗಳನ್ನೇ ಬಳಸಬೇಕು. ಇದರಿಂದ ಪರಿಸರಕ್ಕೂ ನಿರಾಳ, ನಮ್ಮಆರೋಗ್ಯಕ್ಕೂ ವರದಾನಎಂದರು.
ಬಾಲ ನ್ಯಾಯ ಮಂಡಳಿ ಸದಸ್ಯಟಿ.ಜೆ. ಸುರೇಶ್ ಮಾತನಾಡಿ,ಜನರು ಸಂಘ ಸಂಸ್ಥೆಗಳೊಂದಿಗೆ ಕೈ ಜೋಡಿಸಿದಾಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ. ಸಾರ್ವಜನಿಕರನ್ನು ಪರಿಸರ ಪ್ರೇಮಿಗಳಾಗಬೇಕು. ಹವಾಮಾನ ಸಂರಕ್ಷಣೆ ಬಗ್ಗೆ ಜಾಗೃತರಾಗುವುದು ಮುಖ್ಯಎಂದು ತಿಳಿಸಿದರು. ಸ್ಕೌಟ್‍ಅಂಡ್‍ಗೈಡ್‍ಜಿಲ್ಲಾ ಸಂಘಟಕಕೆ.ಪಿ. ಅಶೋಕ್‍ಕುಮಾರ್. ಜೆ. ಶ್ರೀನಿಧಿ, ಅರಣ್ಯ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.