ನೀಟ್ ಫಲಿತಾಂಶ: ಆಕಾಶ ಕಪಟಕರಗೆ 584 ಅಂಕಚಿನ್ನು ಉಪ್ಪಲದ್ದಿನ್ನಿ ಕೆ.ಸಿ.ಇ.ಟಿ. ಅಗ್ರಿನಲಿ ್ಲರಾಜ್ಯಕ್ಕೆ 20ನೇ ರ್ಯಾಂಕ್, ಜಿಲ್ಲೆಗೆ ಪ್ರಥಮ
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.6:ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ ಈ ಬಾರಿ ನಡೆದ ಅಖಿಲ ಭಾರತ ಮಟ್ಟದ ನೀಟ್ ಪ್ರವೇಶ ಪರೀಕ್ಷೆಯಲ್ಲಿ ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಶಾಂತಿನಿಕೇತನ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ (ರೆಗ್ಯೂಲರ್ ಬ್ಯಾಚ್) ವಿದ್ಯಾರ್ಥಿಗಳಾದ ಆಕಾಶ ಕಪಟಕರ 720ಕ್ಕೆ 584 ಅಂಕ ಗಳಿಸಿದ್ದಾರೆ. ಪ್ರವೀಣ ಮಠಪತಿ 562 ಅಂಕ, ಮಯೂರಿ ಚಂಡಕಿ 530 ಅಂಕ, ದಾನೇಶ ಚಬರೆ 501 ಅಂಕ, ಸೃಷ್ಠಿ ನಿಡಗುಂದಿ 492 ಅಂಕ, ಸಾದಿಕ್ ಮುಲ್ಲಾ 483 ಅಂಕ, ರೋಹಿತ ರಾಠೋಡ 477ಅಂಕ, ದಿನೇಶ ಚವ್ಹಾಣ 467 ಅಂಕ, ಚನ್ನವೀರ 443 ಅಂಕ, ತೇಜಸ್ವಿನಿ ಭಜಂತ್ರಿ 439 ಅಂಕ ಗಳಿಸಿದ್ದಾರೆ.
ಕೆ.ಸಿ.ಇ.ಟಿ. ಫಲಿತಾಂಶ:
ಚಿನ್ನು ಉಪ್ಪಲದಿನ್ನಿ ಕೆಸಿಇಟಿ ಅಗ್ರಿಯಲ್ಲಿ ರಾಜ್ಯಕ್ಕೆ 20ನೇ ರ್ಯಾಂಕ್ ಹಾಗೂ ಜಿಲ್ಲೆಗೆ ಪ್ರಥಮ ರ್ಯಾಂಕ್, ವೆಟರ್ನರಿಯಲ್ಲಿ ರಾಜ್ಯಕ್ಕೆ 110ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಪ್ರಶಾಂತ ಬಿರಾದಾರ ಅಗ್ರಿಯಲ್ಲಿ ರಾಜ್ಯಕ್ಕೆ 68ನೇ ರ್ಯಾಂಕ್, ವೆಟರ್ನರಿಯಲ್ಲಿ 412ನೇ ರ್ಯಾಂಕ್, ಸಂಜನಾ ನಾಟೀಕಾರ ಅಗ್ರಿಯಲ್ಲಿ 148ನೇ ರ್ಯಾಂಕ್, ವೆಟರ್ನರಿಯಲ್ಲಿ 592ನೇ ರ್ಯಾಂಕ್, ಸೌಂದರ್ಯ ಭೈರಗೊಂಡ 336ನೇ ರ್ಯಾಂಕ್, ವೆಟರ್ನರಿಯಲ್ಲಿ 439ನೇ ರ್ಯಾಂಕ್, ಭಾಗ್ಯಾ ಹನಗಂಡಿ ಅಗ್ರಿಯಲ್ಲಿ 683ನೇ ರ್ಯಾಂಕ್, ಸಂಗನಬಸು ಪೂಜಾರಿ ಕೆ.ಸಿ.ಇ.ಟಿ. ಅಗ್ರಿಯಲ್ಲಿ 397ನೇ ರ್ಯಾಂಕ್ ವೆಟರ್ನರಿಯಲ್ಲಿ 1169ನೇ ರ್ಯಾಂಕ್, ಅಕ್ಷತಾ ಸಾಲಿ 974ನೇ ರ್ಯಾಂಕ್, ವೆಟರ್ನರಿಯಲ್ಲಿ 2685, ಸೃಷ್ಠಿ ನಿಡಗುಂದಿ 1234ನೇ ರ್ಯಾಂಕ್, ವೆಟರ್ನರಿಯಲ್ಲಿ 442ನೇ ರ್ಯಾಂಕ್, ಮಯೂರಿ ಚಂಡಕಿ ವೆಟರ್ನರಿಯಲ್ಲಿ 1199ನೇ ರ್ಯಾಂಕ್, ಆಕಾಶ ಕಪಟಕರ ಇಂಜನಿಯರಿಂಗ್‍ನಲ್ಲಿ 7038ನೇ ರ್ಯಾಂಕ್, ಅವಿನಾಶ ಜಮ್ಮಲದಿನ್ನಿ ಇಂಜಿನಿಯರಿಂಗ್‍ನಲ್ಲಿ 7458 ರ್ಯಾಂಕ್ ಗಳಿಸಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಈ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಚೇರಮನ್ ಸುರೇಶ ಬಿರಾದಾರ, ಸಂಸ್ಥೆಯ ಅಧ್ಯಕ್ಷೆ ಶೀಲಾ ಬಿರಾದಾರ, ನಿರ್ದೇಶಕÀ ಶರತ ಬಿರಾದಾರ, ಹಣಕಾಸು ಅಧಿಕಾರಿ ಭರತ ಬಿರಾದಾರ, ಪ್ರಾಚಾರ್ಯ ಪಿ. ಚರಣಕುಮಾರ ಅವರು ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.