ಜಾಗತಿಕ ತಾಪಮಾನದಿಂದ ಜೀವ ಸಂಕುಲಗಳ ವಿನಾಶ : ಮಹಮದ್ ಸಿರಾಜ್
ಕಲಬುರಗಿ:ಜೂ.5: ಜಾಗತಿಕ ತಾಪಮಾನದ ದುಷ್ಪರಿಣಾಮದಿಂದಾಗಿ ಅಸಂಖ್ಯಾತ ಜೀವ ಸಂಕುಲಗಳು ಅಳಿವಿನ ಅಂಚಿನಲ್ಲಿವೆ ಎಂದು ಡಿಜಿಟಲ್ ಸಖಿ ಯೋಜನೆಯ, ಯೋಜನಾ ವ್ಯವಸ್ಥಾಪಕ ಮಹಮದ್ ಸಿರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.
ಡಿಜಿಟಲ್ ಸಖಿ ಯೋಜನೆ ಕಲಬುರಗಿ, ಮತ್ತು ಆನಂದ ಶಿಕ್ಷಣ ಟ್ರಸ್ಟ್ ಸಂಚಾಲಿತ, ಆನಂದ ಪ್ರೌಡ ಶಾಲೆ ಹಾಗು ಆನಂದ ಪದವಿ ಪೂರ್ವ ಕಾಲೇಜು ಇವರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಪರಿಸರ ದಿನದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಹಾಗು ಜಾಗತಿಕ ತಾಪಮಾನ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಜೀವ ಸಂಕುಲಗಳಾದ ಕ್ರಿಮಿ, ಕೀಟಗಳು, ಪಶು ಪಕ್ಷಿ, ಮಾನವನಾದಿಯಾಗಿ ಭೂಮಿಯಲ್ಲಿ ಜೀವಿಸಬೇಕಾದರೆ ಜೀವಿಸಲು ಪ್ರತಿಕೂಲ ವಾತಾವರಣದ ಅವಶ್ಯಕತೆ ಇದೆ, ಅಂತಹ ವಾತಾವರಣ ಭೂಮಿಯ ಮೇಲೆ ದಿನೇ ದಿನೇ ಹದಗೆಡುತ್ತಿದೆ, ಅದಕ್ಕೆ ಮುಖ್ಯ ಕಾರಣ ಎಂದರೆ, ಪರಿಸರ ನಾಶ. ಪರಿಸರದ ನಾಶದಿಂದಾಗಿ ಮಳೆ ಬೆಳೆಗಳು ಮರಿಚಿಕೆಯಾಗುತ್ತಿವೆ. ಅಷ್ಟೇ ಅಲ್ಲ ನಗರೀಕರಣ, ಅತಿಯಾದ ಪ್ಲಾಸ್ಟಿಕ್ ಬಳಕೆ, ಕಾರ್ಖಾನೆಗಳು ಉಗುಳುವ ಕಲುಷಿತ ಗಾಳಿ, ಅವೈಜ್ಞಾನಿಕ ಕಸ ವಿಲೇವಾರಿ ಹಾಗು ಅತಿಯಾದ ವಾಹನಗಳ ಬಳಕೆ. ಇವೆಲ್ಲದÀರಿಂದಾಗಿ ಜಾಗತಿಕ ಮಟ್ಟದಲ್ಲಿ ತಾಪಮಾನ ಹೆಚ್ಚಳವಾಗುತ್ತಿದೆ.
ಹಾಗಾಗಿ ಭೂಮಿಯಲ್ಲಿ ಅದೆಷ್ಟೋ ಜೀವ ಸಂಕುಲಗಳು ಜೀವಿಸಲು ಬೇಕಾದ ಪ್ರತಿಕೂಲ ವಾತಾವರಣ ದಿನೇ ದಿನೇ ಕ್ಷೀಣಿಸುತ್ತದ್ದು, ಇದರಿಂದ ಜೀವಿಗಳು ನಶಿಸಿ ಹೋಗುತ್ತಿವೆ, ಇದು ಹೀಗೆ ಮುಂದುವರೆದರೆ ಮನುಷ್ಯನೂ ಒಂದು ದಿನ ನಶಿಸಿ ಹೋಗುವ ಕಾಲ ತುಂಬಾ ದೂರ ಇಲ್ಲ ಎಂದು ಅವರು ತಿಳಿಸಿದರು.
ನಂತರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಆನಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಕಾಶ ಪಾಟೀಲ್ ಮಾತನಾಡಿ ಪರಿಸರ ಸಂರಕ್ಷಣೆಗಾಗಿ ಎಲ್ಲರೂ ಕಂಕಣಬದ್ಧರಾಗಬೇಕು, ಗಿಡ ಮರಗಳ ನಾಶದಿಂದ ಹಾಳಾಗುತ್ತಿರುವ ನಮ್ಮ ಸುತ್ತಮುತ್ತಲಿನ ವಾತವರಣವನ್ನು ಮತ್ತೆ ಮೊದಲಿನಂತೆ ಹಸಿರಾಗಿಸುವದು ನಮ್ಮ ಮುಂದಿನ ಆಧ್ಯ ಕರ್ತವ್ಯಾವಾಗಿದೆ. ಆದ್ದರಿಂದ ಇಂದಿನ ದಿನವನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂದು ಕರೆಕೊಟ್ಟರು.
ಈ ಸಂದರ್ಭದಲ್ಲಿ ಎಲ್.ಆಂಡ್ ಟಿ ಫೈನಾನ್ಸ್ ಕಮಲಾಪುರ ಶಾಖೆಯ ವ್ಯವಸ್ಥಾಪಕರಾದ ಬಸವರಾಜ ಗುತ್ತೇದಾರ, ಆನಂದ ಪ್ರೌಢಶಾಲೆಯ ಮುಖ್ಯ ಗುರುಗಲಾದ ಗೌತಮ್, ಈರಣ್ಣ ಬೆಡಸೂರ, ಶಿವಾನಂದ ಕೀಣಗೀಕರ್, ಡಿಜಿಟಲ್ ಸಖಿ ಯೋಜನೆ ಕ್ಲಸ್ಟರ್ ವ್ಯವಸ್ಥಾಪಕರಾದ ಗುರು ಪಿ.ಹೆಚ್, ಡಿಜಿಟಲ್ ಸಖಿಗಳಾದ ನಾಗವೇಣಿ, ಐಶ್ವರ್ಯ ಹಾಗು ಶಾಲೆಯ ಸಿಬ್ಬಂದಿಗಳು ಮತ್ತು ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.