ಕಾಯಕ ಜೀವಿಗಳನ್ನು ಮುಖ್ಯವಾಹಿನಿಗೆ ತರಬೇಕು

ಸಂಜೆವಾಣಿ ವಾರ್ತೆ
ಚಿತ್ರದುರ್ಗ, ಜೂ, 5; ಜಾತಿ ,ಮತ ಭೇದವಿಲ್ಲದೆ ಕಾಯಕ ಜೀವಿಗಳನ್ನು ಮುಖ್ಯವಾಹಿನಿಗೆ ತರಬೇಕೆಂಬ, ಸಾಮಾಜಿಕ, ಸಮಾನತೆಯ ಕಾಳಜಿ ಬಹುಷಃ ಬಸವಣ್ಣನವರಿಗೆ ಅಂದು ಬರದೇ ಹೋಗಿದ್ದರೆ, ಅನುಭವ ಮಂಟಪದ ಮೂಲಕ ಎಲ್ಲರನ್ನು ಒಗ್ಗೂಡಿಸಿದ ಹೋಗಿದ್ದರೆ, ನಾವಿಂದು ಕೆಳಹಂತದಲ್ಲೇ ಇರಬೇಕಾದ ಪರಿಸ್ಥಿತಿ ಇರುತ್ತಿತ್ತು. ಅಂತಹ ತಳ ಸಮುದಾಯಗಳ ಜನರಿಗೆ ಬಸವಾದಿ  ಶಿವಶರಣರ ಆಶಯಕ್ಕೆ ಮತ್ತೇ ಮರುಜೀವ ಬಂದದ್ದು, 21ನೇ ಶತಮಾನದಲ್ಲಿ ಅದು ಚಿತ್ರದುರ್ಗದ ಮುರುಘಾಮಠದ  ಮೂಲಕ ಎಂದು ಘಂಟಾಘೋಷವಾಗಿ ಹೇಳಬಹುದೆಂದು ಮೇದಾರ ಗುರುಪೀಠದ   ಇಮ್ಮಡಿ ಕೇತೇಶ್ವರ ಸ್ವಾಮೀಜಿ ಅವರು ನುಡಿದರು.ಶ್ರೀಗಳವರು ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್ ಜೆ ಎಂ ವಿದ್ಯಾಪೀಠದ ವತಿಯಿಂದ ಸಾಮಾಜಿಕ ಅರಣ್ಯ ಇಲಾಖೆಯ ಸಹಯೋಗದಲ್ಲಿ ವಿಶ್ವ ಪರಿಸರದ ದಿನದ ಅಂಗವಾಗಿ ಹಮ್ಮಿಕೊಂಡಿರುವ ಸಸಿ ನೆಡುವ ಸಪ್ತಾಹದ ಆರನೇ ದಿನದ ಕಾರ್ಯಕ್ರಮ  ಕೇತೇಶ್ವರ ಮಹಾಮಠದಲ್ಲಿ ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ನಾವು ನೆಲೆ ಕಂಡು ನೆಲೆ ನಿಂತಿರುವ ಈ ಪುಣ್ಯಭೂಮಿ ಜಗದ್ಗುರುಗಳ ಕರ್ಮಭೂಮಿ, ನನಗೆ ಲಾಂಛನ ಧಾರಣೆ ಹಾಗೂ ಸಮಾಜಸೇವೆ ಧ್ಯೀಕ್ಷೆ ದೊರೆತದ್ದು ಅದೇ ಜಯದೇವ ಗುರುಗಳ ಲಿಂಗೈಕ್ಯ ತಾಣ ದಾವಣಗೆರೆಯಲ್ಲಿ. ನಮ್ಮ ಸಮಾಜಕ್ಕೂ ಶ್ರೀ ಮುರುಘಾಮಠಕ್ಕು  ಅವಿನಾಭಾವ ಸಂಬಂಧವಿದೆ. ಅದನ್ನ ಮುಂದುವರೆಸಿಕೊಂಡು ,ಉಳಿಸಿಕೊಂಡು ಹೋಗುವುದಾಗಿ ಅವರು ಭರವಸೆ ನೀಡಿದ ಶ್ರೀಗಳವರು ನಮ್ಮ ಹಿಂದಿನ ಗುರುಗಳಾದ ಬಸವಪ್ರಭು ಕೇತೇಶ್ವರ ಶ್ರೀಗಳವರು ಮುರುಘಾಮಠದ ಮೇಲೆ  ಅಪರಮಿತ ಭಕ್ತಿ ವಿಶ್ವಾಸವಿಟ್ಟಿದ್ದರು . ಕಾರಣ ನಮಗೆ ನಮ್ಮ   ಕುಲಬಾಂಧವರಿಗೆ ಈ ಮೂಲಕ ಒಂದು ನೆಲೆ ಸಿಕ್ಕಿದೆ. ಶ್ರೀಮಠದ ಆಡಳಿತ ಮಂಡಳಿಯ ಸದಸ್ಯರಾಗಿರುವ ಡಾ. ಬಸವಕುಮಾರ ಸ್ವಾಮಿಗಳೂ ಸಹ ಮೇದಾರ ಗುರುಪೀಠದ ಮೇಲೆ ಎಲ್ಲಿಲ್ಲದ ಅಕ್ಕರೆ ತೋರುತ್ತಾ, ನಮ್ಮೊಂದಿಗೆ ನಮ್ಮ ಬೆಳವಣಿಗೆಗೆ ಸಹಕಾರಿಯಾಗಿದ್ದರೆ ಎಂದು ಸ್ಮರಿಸಿದರು.