ಪ್ರಕೃತಿಯನ್ನು ಪೂಜಿಸಿ, ಗಿಡ-ಮರ ಉಳಿಸಿ, ಪರಿಸರ ಪ್ರೇಮಿಗಳಾಗಿ: ವೀರಭದ್ರಪ್ಪ ಉಪ್ಪಿನ
ಬೀದರ್. ಜೂ. 05 : ಗಿಡ-ಮರ, ಮಣ್ಣು, ನೀರು- ಜಲಸಂಪನ್ಮೂಲ, ಬೆಟ್ಟ ಗುಡ್ಡ, ವನ್ಯಜೀವಿಗಳಂತಹ ಪ್ರಾಕೃತಿಕ ಸಂಪತ್ತನ್ನು ಉಳಿಸಿ, ಪರಿಸರ ಪ್ರೇಮಿಗಳಾಗಿ ಇನ್ನಿತರರಿಗೆ ಮಾದರಿಯಾಗಿ ಎಂದು ಪರಿಸರ ಪ್ರೇಮಿ ಮತ್ತು ಅಖಿಲ ಭಾರತ ವಿಶ್ವ ವಿದ್ಯಾಲಯಗಳ ನೌಕರರ ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯರಾದ ವೀರಭದ್ರಪ್ಪ ಉಪ್ಪಿನ ರವರು ಅಭಿಪ್ರಾಯ ಪಟ್ಟರು. ಅವರು ಇಂದು ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯಿಂದ, ಬೀದರ ನಗರದ ಗುಂಪಾ ಎದುರಿಗಿರುವ ಮಹೇಶ ನಗರ ಉದ್ಯಾನದಲ್ಲಿ “”ವಿಶ್ವ ಪರಿಸರ ದಿನಾಚರಣೆ”” ಅಂಗವಾಗಿ ಏರ್ಪಡಿಸಲಾಗಿದ್ದ , ಸಸಿ ವಿತರಣೆ, ಹಾಗೂ ಸಸಿ ನೆಡುವ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡುತ್ತಿದ್ದರು. ಮಣ್ಣಿನ ಸವಕಳಿಯನ್ನು ತಪ್ಪಿಸಿ ಮಣ್ಣಿನ ಫಲವತ್ತತೆಯನ್ನು ಕಾಪಾಡುವುದು, ನೀರು, ವನ್ಯಜೀವಿಗಳ ರಕ್ಷಣೆ ಮುಂತಾದ ಪ್ರಾಕೃತಿಕ ಸಂಪನ್ಮೂಲಗಳನ್ನು ನಾವು
ಮಿತವಾಗಿ ಬಳಸಿದರೆ ನಮ್ಮ ಪ್ರಕೃತಿಯು ಸಂಪತ್ಭರಿತವಾ ಗಿರುತ್ತದೆ, ಪರಿಸರವು ಸ್ವಚ್ಛ ವಾಗಿರುತ್ತದೆ. ತಾಪಮಾನದಲ್ಲಿ ಇಳಿಕೆಯಾಗಿ ನಾವೆಲ್ಲರೂ ಆರೋಗ್ಯವಂತರಾಗಿರಬಹುದು ಎಂದು ತಿಳಿಸಿದರು.ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅರವಿಂದ ಕುಲಕರ್ಣಿ ಅವರು ಮಾತನಾಡಿ, ಬರಲಿರುವ ಮಳೆಗಾಲದಲ್ಲಿ ಪ್ರತಿಯೊಬ್ಬರು ಮನೆಯ ಆವರಣದಲ್ಲಿ, ಪ್ರತಿ ವರ್ಷ, ಎರಡು ಸಸಿಗಳನ್ನು ನೆಟ್ಟು ಅವುಗಳ ಪಾಲನೆ ಪೆÇೀಷಣೆ ಮಾಡಬೇಕೆಂದು ಕರೆ ನೀಡಿದರು. ಇದರಿಂದ ಮನೆಯನ್ನು ಉದ್ಯಾನವನ ವನ್ನಾಗಿ ಮಾಡಲು ಅನುಕೂಲ ವಾಗುತ್ತದೆ. ಮನೆಯಲ್ಲಿರುವ ವರ ಆರೋಗ್ಯವನ್ನು ಕಾಯ್ದು ಕೊಳ್ಳಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯ ಪಟ್ಟರು. ಸಿದ್ದರಾಮಯ್ಯ ಸ್ವಾಮಿಯವರು ಪ್ರಾಕೃತಿಕ ಸಂಪತ್ತುಗಳಾದ ಮಣ್ಣು, ನೀರು, ಕಲ್ಲು ಹಾಗೂ ಸಸಿಗಳಿಗೆ ಪೂಜೆಯನ್ನು ನೆರವೇರಿಸಿದರು. ಕುಮಾರಿ ಸುಹಾಶಿನಿ ಸಂತೋಷ ಚೆಟ್ಟಿಯವರು ಸಸಿಗಳನ್ನು ನೆಟ್ಟರು. ನಿವೃತ್ತ ಮುಖ್ಯೋ ಪಾಧ್ಯಾಯರಾದ ರೇವಣಪ್ಪ ಮೂಲಗೆಯವರು ಪರಿಸರ ಗೀತೆಯನ್ನು ಹಾಡಿದರು. ಶಿವಪ್ಪ, ಬಿಚ್ಚಪ್ಪ ಪಾಟೀಲ, ಇಂದುಧರ್ ಚಟ್ಟಿ, ಪ್ರಹ್ಲಾದ, ಸಚಿನ್ ಶಕೆದಾರ್, ಪ್ರಮೋದ ಯಾದವ, ಸಂಗಮೇಶ್ವರ ನೆಳಗೆ ಮುಂತಾದವರು ಹಾಜ ರಾಗಿದ್ದರು.