ಹುಮನಾಬಾದ್ ನಲ್ಲಿ ವಿಜಯೋತ್ಸವ
ಹುಮನಾಬಾದ್:ಜೂ.5:ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸಾಗರ ಖಂಡ್ರೆ ಅವರ ಗೆಲುವಿನ ನಿಮಿತ್ತ ಹುಲಸೂರನಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಮಂಗಳವಾರ ವಿಜಯೋತ್ಸವ ಆಚರಿಸಿದರು.
ಲೋಕ ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದ್ದಂತೆ ಪಕ್ಷದ ಪ್ರಮುಖರು ಒಂದೆಡೆ ಸೇರಿ ಪಟ್ಟಣದ ಡಾ ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಪಟಾಕಿ ಸಿಡಿಸಿ ಪರಸ್ಪರ ಸಿಹಿ ತಿನ್ನಿಸುವ ಮೂಲಕ ಸಂಭ್ರಮಿಸಿದರು.
ಮಾಜಿ ಸಚಿವ ರಾಜಶೇಖರ ಪಾಟೀಲ್ ಅವರ ಗೃಹ ಕಚೇರಿ ಎದುರು ಪಟಾಕಿ, ಸಿಡಿಸಿ ಕಾಲ್ನಡಿಗೆಯೊಂದಿಗೆ ಪಟ್ಟಣದ ಅಂಬೇಡ್ಕರ್, ಸರ್ದಾರ ವಲ್ಲಭಭಾಯಿ ಪಟೇಲ್, ಬಸವೇಶ್ವರ, ಶಿವಾಜಿ ಮತ್ತಿತರ ವೃತ್ತಗಳಿಗೆ ತೆರಳಿಗೆ ಮಹಾತ್ಮರ ಪುತ್ಥಳಿಗಳಿಗೆ ಪುಷ್ಪಮಾಲೆ ಮೂಲಕ ಗೌರವಾರ್ಪಣೆ ಮಾಡಿದರು.
ಈ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಗಲುವಿನ ನಗೆ ಬಾರಿಸಿದ ಸಾಗರ ಖಂಡ್ರೆ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರ ಪರವಾಗಿ ಜೈಘೋಷಗಳು ಮೊಳಗಿದವು.
ಈ ವೇಳೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರಣ್ಣ ಪಾಟೀಲ್ ಮಾತನಾಡಿ, ಬೀದರ ಜಿಲ್ಲೆ ಬಿಜೆಪಿಯ ಭದ್ರ ಕೋಟೆಯಾಗಿತ್ತು. ಆದರೆ ಕಿರಿಯ ವಯಸ್ಸಿನ ಅಭ್ಯರ್ಥಿ ಸಾಗರ ಖಂಡ್ರೆ ಸ್ಪರ್ಧಿಸಿ ಹಾಟ್ರಿಕ್ ಬಾರಿಸುವ ಕನಸು ಕಂಡಿದ್ದ ಭಗವಂತ ಖೂಬಾ ಗೆಲುವಿಗೆ ಬ್ರೇಕ್ ಹಾಕಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಫಸರಮಿಯ್ಯ, ಗ್ರಾಮೀಣ ಘಟಕ ಅಧ್ಯಕ್ಷ ಓಂಕಾರ ತುಂಬಾ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ ಪಾಟೀಲ್, ಅಕ್ಷಯ್ ಪಾಟೀಲ್, ಬಾಬು ಟೈಗರ್, ಸುರೇಶ ಫಾಂಗ್ರೆ, ದತ್ತಕುಮಾರ ಚಿದ್ರಿ, ಬಾಬು ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.