ಕೋಬಾಳ್, ದೇವಮ್ಮಾಯಿ ಜಾತ್ರಾ ಮಹೋತ್ಸವ ಪ್ರವಚನ ಸಂಗೀತ ಕಾರ್ಯಕ್ರಮ
ಜೇವರ್ಗಿ :ಜೂ.5:ತಾಲೂಕಿನ ಸುಕ್ಷೇತ್ರ ಕೋಬಾಳ್ ಗ್ರಾಮದಲ್ಲಿ ಗ್ರಾಮ ದೇವತೆಯಾದ ಶ್ರೀ ದೇವಮ್ಮಾಯಿ ಜಾತ್ರಾ ಮಹೋತ್ಸವ ಪ್ರತಿ ವರ್ಷದಂತೆ ಈ ವರ್ಷವೂ ಬಹು ವಿಜೃಂಭಣೆಯಿಂದ ನಡೆಯಲಿದೆ.
ದಿನಾಂಕ 05 .06.2024 ರಂದು ರಾತ್ರಿ 9:00ಗಂಟೆಗೆ ಪ್ರವಚನ ಹಾಗೂ ಆಕಾಶವಾಣಿ ದೂರದರ್ಶನ ಕಲಾವಿದರಿಂದ ಆಹೋರಾತ್ರಿ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ದಿನಾಂಕ,6-06-2024ರಂದು ಬೆಳಿಗ್ಗೆ ದೇವಿಯ ವಿಶೇಷ ಪೂಜೆ ನಂತರ ಪಲ್ಲಕ್ಕಿ ಉತ್ಸವ ವಿವಿಧ ವಾದ್ಯ ಮೇಳದೊಂದಿಗೆ ಮೆರವಣಿಗೆ ನಡೆಯಲಿದ್ದು ಸುತ್ತಮುತ್ತಲಿನ ಗ್ರಾಮಸ್ಥರು ಗಣ್ಯಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸದ್ಭಕ್ತರು ಭಾಗವಹಿಸಿ ತಾಯಿ ದೇವಮ್ಮಾಯಿ ತಾಯಿಯ ಆಶೀರ್ವಾದ ಪಡೆದು ಪುನೀತರಾಗಬೇಕೆಂದು ಸದ್ಭಕ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.