ಸಾಗರ ಖಂಡ್ರೆ ಗೆಲುವು ಅಲಿಯಂಬರ್ ನಲ್ಲಿ ಸಂಭ್ರಮಾಚರಣೆ
ಬೀದರ್:ಜೂ.5: ತಾಲೂಕಿನ ಅಲಿಯಂಬರ್ ಗ್ರಾಮದಲ್ಲಿ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬೀಗಿದ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಜಯ ಸಾಧಿಸಿರುವ ಹಿನ್ನಲೆ ಮಂಗಳವಾರ ಗ್ರಾಮದಲ್ಹಿ ಸಿಹಿ ಹಂಚಿ ಸಂಭ್ರಮಿಸಲಾಯಿತು,
ಗ್ರಾಮದ ಯುವ ಮುಖಂಡರು ಹಾಗೂ ಕರ್ನಾಟಕ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ನಿಗ್ರಹ ಸಂಘಟನೆ ಜಿಲ್ಲಾಧ್ಯಕ್ಷ ಸಂಗಮೇಶ ಭಾವಿದೊಡ್ಡಿ ಈ ಸಂದರ್ಭದಲ್ಲಿ ಮಾತನಾಡಿ, ಈ ಜಯವು ಕಾಂಗ್ರೆಸ್ ಪಕ್ಷದ ಜಯವಲ್ಲ ಇಡೀ ನಮ್ಮ ಬೀದರ್ ಜಿಲ್ಲೆಯ ಅಭಿವೃದ್ದಿಗೆ ಜಯ ಸಿಕ್ಕಿದೆ. ಜಿಲ್ಲೆಯ ಅಭಿವೃದ್ಧಿಗೆ ಮಹತ್ವ ನೀಡುತ್ತಾರೆಂಬ ವಿಶ್ವಾಸ ನಮಗಿದೆ ಎಂದರು.
ಈ ಸಂದರ್ಭದಲ್ಲಿ ಅಲಿಯಂಬರ್ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ರಾಜಕುಮಾರ್ ಭಾವಿದೊಡ್ಡಿ, ಗ್ರಾಮದ ಮುಖಂಡರಾದ ಶೇರ್ ಅಲಿ ಮಚಕುರಿ, ಪ್ರಕಾಶ ಕೌಠಗೆ, ರಾಜೆಪ್ಪ ರಿಕ್ಕೆ, ರಾಜಕುಮಾರ ಜಮಗೆ, ಅಯೂಬ್ ಮಚಕುರಿ, ಬೀರಗೊಂಡ ಘೋಡಂಪಳ್ಳಿ, ಅಶೋಕ ಶೇರಿಕಾರ, ವೀರೇಶ ಸ್ವಾಮಿ, ದಿನೇಶ ಮುಗನೂರೆ, ವೀರಶೆಟ್ಟಿ ಕೌಠಗೆ, ಪಿ ರಾಜಕುಮಾರ ಹಾಲೇಪುರ್ಗೆ ಸೇರಿದಂತೆ ಹಲವರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು.