ವಿಶ್ವ ಪರಿಸರ ದಿನ ಆಚರಣೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.05: ಉಸಿರಿಗಾಗಿ ಉಳಿಸಿ ಪರಿಸರ, ಇಲ್ಲದಿದ್ದರೆ ಈ ಬದುಕು ನಶ್ವರ, ಎಂಬ ಮಾತಿನಂತೆ ಗಿಡ ಮರಗಳ ಮಹತ್ವವನ್ನು ಸಾರಲು ಇಂದು  ಜಿ.ಚೆಂಗಾರೆಡ್ಡಿ ಸ್ಮಾರಕ ಮಾನಸಿಕ ವಿಶೇಷ ಚೇತನರ ವಸತಿಯುತ ವಿಶೇಷ ಶಾಲೆಯಲ್ಲಿ, ವಿವಿಧ ಬಗೆಯ ಗಿಡಗಳನ್ನು ನೆಡುವುದರ ಮೂಲಕ ಪರಿಸರ ದಿನಾಚರಣೆಗೆ ಚಾಲನೆಯನ್ನು ನೀಡಲಾಯಿತು.
ಬಳ್ಳಾರಿ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಗೋವಿಂದಪ್ಪ ಹಾಗೂ ಕರ್ನಾಟಕ ರಾಜ್ಯ ರೆಡ್ಡಿ ಜನ ಮಹಾಸಂಘದ ನಿರ್ದೇಶಕ ಹಾಗೂ ಸಮಾಜ ಸೇವಕ ಗಣಪಾಲ ಐನಾಥ್ ರೆಡ್ಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳಿಗೆ ಪರಿಸರದ ಉಳಿವಿಗಾಗಿ, ಬೆಳವಣಿಗೆಗಾಗಿ ಅನೇಕ ಉಪಯುಕ್ತ ಮಾಹಿತಿಯನ್ನು ನೀಡಿದರು. ವಿವಿಧ ಸಸಿಗಳನ್ನು ನೆಟ್ಟು, ನೀರೂಣಿಸಿ, ಪೋಷಣೆಯ ಬಗ್ಗೆ ವಿವರಣೆ ನೀಡಿದರು.
ಸಂಸ್ಥೆಯ ಆಡಳಿತ ಅಧಿಕಾರಿ ಹೆಚ್ ಗುರುಮೂರ್ತಿ, ಗೌರವ ಸಲಹೆಗಾರ ವಿ. ಸುಬ್ಬಾರೆಡ್ಡಿ, ವಿಶೇಷ ಶಾಲೆಯ ಮುಖ್ಯೋಪಾಧ್ಯಾಯ ಚಂದ್ರಶೇಖರ, ಶ್ರೀಧರೆಡ್ಡಿಯವರು, ಹಾಗೂ ಸಂಸ್ಥೆಯ  ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಸೋಮನಾಥ್ ನಿರೂಪಿಸಿ ವಂದಿಸಿದರು.
One attachment • Scanned by Gmail