ಬೀದರ ದಕ್ಷಿಣ ಕ್ಷೇತ್ರದಿಂದ ಸಾಗರ ಖಂಡ್ರೆಗೆ 36,820 ಲೀಡ್: ಅಶೋಕ ಖೇಣಿ
ಬೀದರ್:ಜೂ.5: ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕ್ಷೇತ್ರದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸರಿ ಸುಮಾರು 90, 776 ಮತ ನೀಡಿದ ಮತದಾರರು, ಬಿಜೆಪಿ ಗಿಂತ
ಸುಮಾರು 36,820 ಮತಗಳು ಕಾಂಗ್ರೆಸ್ ಪಕ್ಷಕ್ಕೆ ಮುನ್ನಡೆ ನೀಡಿದಕ್ಕಾಗಿ ಕಾರ್ಯಕರ್ತರು ಮತ್ತು ಬೆಂಬಲಗರಿಗೆ ಕೃತಜ್ಞತೆ ಸಲ್ಲಿಸುವುದಾಗಿ ದಕ್ಷಿಣ ಕ್ಷೇತ್ರದ ಮಾಜಿ ಶಾಸಕರಾದ ಅಶೋಕ ಖೇಣಿ ಅವರು ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕ್ಷೇತ್ರದ ಮತದಾರರು ಬೆಂಬಲ ನೀಡಿ ಮತ ಚಲಾಯಿಸಿದ್ದಾರೆ. ಸಾಕಷ್ಟು ಕಾರ್ಯಕರ್ತರು ಮುಖಂಡರು ಪಕ್ಷದ ಪರವಾಗಿ ಸುಡು ಬಿಸಿಲಿನಲ್ಲಿ ಹಗಲೂ ರಾತ್ರಿ ಶ್ರಮಿಸಿದ್ದಾರೆ. ಪ್ರಚಾರಕ್ಕೆ ಹೋದಾಗ ಜನ ಪ್ರೀತಿಯಿಂದ ಮಾತನಾಡಿಸಿ ವಿಶ್ವಾಸ ತೋರಿಸಿದ್ದಾರೆ. ದಕ್ಷಿಣ ಕ್ಷೇತ್ರದ ಮತದಾರರ ಪ್ರೀತಿ, ವಿಶ್ವಾಸ ಎಂದೂ ಮರೆಯುವುದಿಲ್ಲ ಎಂದು ಅಶೋಕ ಖೇಣಿ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.