ಶೋರಾಪೂರ ವಿಧಾನಸಭಾ ಉಪಚುನಾವಣೆಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಗೆಲುವು
ಯಾದಗಿರಿ : ಜೂ.5 :ಶೋರಾಪೂರ ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ರಾಜಾ ವೇಣುಗೋಪಾಲ ನಾಯಕ ಅವರು ಗೆಲುವು ಸಾಧಿಸಿದ್ದು, ತಮ್ಮ ಪ್ರತಿ ಸ್ಪರ್ಧಿ ಬಿಜೆಪಿ ಪಕ್ಷದ ಅಭ್ಯರ್ಥಿ ನರಸಿಂಹನಾಯಕ (ರಾಜುಗೌಡ) ಅವರನ್ನು ಪರಾಭವಗೊಳಿಸಿದ್ದಾರೆ.
ಈ ಉಪಚುನಾವಣೆಯಲ್ಲಿ ಒಟ್ಟು 2,14,183 ಮತಗಳು ಚಲಾವಣೆಗೊಂಡಿದ್ದು, ಒಟ್ಟು 1332 ಅಂಚೆ ಮತಗಳು ಚಲಾವಣೆಗೊಂಡಿದ್ದು, ಇದರಲ್ಲಿ 216 ಪೆÇೀಸ್ಟಲ್ ಮತಗಳು ತಿರಸ್ಕೃತಗೊಂಡಿವೆ.