ಬೀದರ ಲೋಕಸಭಾ ಸಾರ್ವತ್ರಿಕ ಚುನಾವಣೆ:ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಾಗರ್ ಖಂಡ್ರೆ 128875 ಮತಗಳ ಅಂತರದಿಂದ ಗೆಲವು
ಬೀದರ:ಜೂ.5: ಬೀದರ ಲೋಕಸಭಾ ಸಾರ್ವತ್ರಿಕ ಚುನಾವಣೆ-2024, ಜೂನ್.4 ರಂದು ಬೀದರ ನಗರದ ಬಿ.ವ್ಹಿ.ಕಾಲೇಜಿನಲ್ಲಿ ನಡೆದ ಲೋಕಸಭಾ ಚುನಾವಣೆ ಮತ ಎಣಿಕೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಭಗವಂತ ಖೂಬಾ ಇವರ ವಿರುದ್ಧ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಾಗರ್ ಈಶ್ವರ ಖಂಡ್ರೆ ಅವರು 128875 ಮತಗಳ ಅಂತರದಿಂದ ಗೆಲವು ಸಾಧಿಸಿರುತ್ತಾರೆ.
ಬೀದರ ಲೋಕಸಭಾ ಕ್ಷೇತ್ರದಲ್ಲಿ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಪಡೆದ ಒಟ್ಟು ಮತಗಳ ವಿವರ: ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯಾದ ಪುಟರಾಜ ಇವರು 4554 ಮತಗಳನ್ನು ಪಡೆದಿರುತ್ತಾರೆ. ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಭಗವಂತ ಖೂಬಾ ಇವರು 537442 ಮತಗಳು ಪಡೆದಿರುತ್ತಾರೆ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಾಗರ ತಂದೆ ಈಶ್ವರ ಖಂಡ್ರೆ ಇವರು 666317 ಮತಗಳು ಪಡೆದಿರುತ್ತಾರೆ. ಬಹುಜನ ಭಾರತ ಪಕ್ಷದ ಅಭ್ಯರ್ಥಿಯಾದ ಅಂಬಾದಾಸ್ ಸೋಪಾನವರ ಹುಲಸೂರ ಇವರು 5302 ಮತಗಳು ಪಡೆದಿರುತ್ತಾರೆ. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಎ) ಮಹೇಶ ಗೋರನಾಳಕರ್ ಇವರು 981 ಮತಗಳು ಪಡೆದಿರುತ್ತಾರೆ. ಆಲ್ ಇಂಡಿಯಾ ಉಲಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಮಹಮ್ಮದ್ ಶಫೀಕ್ ಊರ್ ರೆಹಮಾನ್ ಇವರು 1694 ಮತಗಳು ಪಡೆದಿರುತ್ತಾರೆ. ಕರ್ನಾಟಕ ರಾಷ್ಟ್ರ ಸಮಿತಿಯ ಅಭ್ಯರ್ಥಿಯಾದ ರಮೇಶ ಜೆ.ಚವ್ಹಾಣ ಇವರು 472 ಮತಗಳು ಪಡೆದಿರುತ್ತಾರೆ. ಕ್ರಾಂತಿಕಾರಿ ಜೈ ಹಿಂದ್ ಸೇನಾ ಅಭ್ಯರ್ಥಿಯಾದ ರಾಮಚಂದ್ರ ನಾರಾಯಣ ಕಚವೆ ಇವರು 472 ಮತಗಳು ಪಡೆದಿರುತ್ತಾರೆ. ಸ್ವತಂತ್ರ ಅಭ್ಯರ್ಥಿಯಾದ ಗೋಪಾಲ ಎಂ.ಪಿ ಗಾರಂಪಳ್ಳಿ ಇವರು 767 ಮತಗಳು ಪಡೆದಿರುತ್ತಾರೆ. ಸ್ವತಂತ್ರ ಅಭ್ಯರ್ಥಿಯಾದ ಜೈರಾಮ ಕಾಶಪ್ಪ ಬುಕ್ಕ ವಕೀಲರು ಇವರು 1493 ಮತಗಳು ಪಡೆದಿರುತ್ತಾರೆ. ಸ್ವತಂತ್ರ ಅಭ್ಯರ್ಥಿಯಾದ ಡಾ.ದಿನಕರ ಮೋರೆ ಇವರು 4116 ಮತಗಳು ಪಡೆದಿರುತ್ತಾರೆ. ಸ್ವತಂತ್ರ ಅಭ್ಯರ್ಥಿಯಾದ ದಿಲೀಪ ಕಾಡವಾದ ಇವರು 798 ಮತಗಳು ಪಡೆದಿರುತ್ತಾರೆ. ಸ್ವತಂತ್ರ ಅಭ್ಯರ್ಥಿಯಾದ ಬಲಭೀಮ ಉಣ್ಣೆ ಇವರು 1470 ಮತಗಳು ಪಡೆದಿರುತ್ತಾರೆ. ಸ್ವತಂತ್ರ ಅಭ್ಯರ್ಥಿಯಾದ ರಾಮವಿಲಾಸ ರಾಮುಲಾಲಜಿ ನಾವಂದರ ಇವರು 2694 ಮತಗಳು ಪಡೆದಿರುತ್ತಾರೆ. ಸ್ವತಂತ್ರ ಅಭ್ಯರ್ಥಿಯಾದ ರಿಯಾಜ ಅಹ್ಮದ ಇವರು 1711 ಮತಗಳು ಪಡೆದಿರುತ್ತಾರೆ. ಸ್ವತಂತ್ರ ಅಭ್ಯರ್ಥಿಯಾದ ರೋಫ ಅಬ್ದುಲ್ ಗನಿ ಇವರು 3104 ಮತಗಳು ಪಡೆದಿರುತ್ತಾರೆ. ಸ್ವತಂತ್ರ ಅಭ್ಯರ್ಥಿಯಾದ ವಸೀಮೊದ್ದಿನ್ ಇವರು 1170 ಮತಗಳು ಪಡೆದಿರುತ್ತಾರೆ. ಸ್ವತಂತ್ರ ಅಭ್ಯರ್ಥಿಯಾದ ಶಿವರಾಜ ಅಡಿವೆಪ್ಪ ಸತವಾರ ಇವರು 3079 ಮತಗಳು ಪಡೆದಿರುತ್ತಾರೆ.
ಬೀದರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಾಗರ ತಂದೆ ಈಶ್ವರ ಖಂಡ್ರೆ ಇವರು ಗೆಲುವು ಸಾಧಿಸಿದಕ್ಕೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಅವರು ಫಾರಂ ನಂ. 22 ಪ್ರಮಾಣ ಪತ್ರವನ್ನು ನೀಡಿದರು.
ಬೀದರ ಲೋಕಸಭಾ ಸಾರ್ವತ್ರಿಕ ಲೋಕಸಭಾ ಚುನಾವಣೆ ಮತ ಎಣಿಕೆ ಕಾರ್ಯವು ಬೀದರ ನಗರದ ಬಿ.ವ್ಹಿ.ಭಮರೆಡ್ಡಿ ಕಾಲೇಜಿನಲ್ಲಿ ಶಾಂತಿಯುತವಾಗಿ ನಡೆದಿದ್ದು, ಈ ಚುನಾವಣೆಯಲ್ಲಿ ಸ್ಪರ್ಧಿಸಿದ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಪಡೆದ ಒಟ್ಟು ಮತಗಳು ಈ ಮೇಲಿನಂತೆ ಇರುತ್ತವೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.