ಅಷ್ಟಗಾ: ಮನೆ ಬೀಗ ಮುರಿದು ಚಿನ್ನಾಭರಣ ಕಳವು
ಕಲಬುರಗಿ,ಸೆ.24-ಮನೆ ಬೀಗ ಮುರಿದು 90 ಸಾವಿರ ರೂ.ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಸಬ್-ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯ ಅಷ್ಟಗಾ ಗ್ರಾಮದಲ್ಲಿ ನಡೆದಿದೆ.
ಮಹಾದೇವಪ್ಪ ಶಾಹಬಾದಿ ಎಂಬುವವರ ಮನೆ ಬೀಗ ಮುರಿದು 30 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ಬೋರಮಳ, 15 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ಕಿವಿಯೋಲೆ, 45 ಸಾವಿರ ರೂ.ಮೌಲ್ಯದ 15 ಗ್ರಾಂ.ಬಂಗಾರದ 3 ಸುತ್ತುಂಗುರ ಸೇರಿದಂತೆ 90 ಸಾವಿರ ರೂ.ಮೌಲ್ಯದ 30 ಗ್ರಾಂ.ಬಂಗಾರದ ಆಭರಣ ಕಳವು ಮಾಡಲಾಗಿದೆ.
ಈ ಸಂಬಂಧ ಮಹಾದೇವಪ್ಪ ಶಹಾಬಾದಿ ಅವರು ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.