ಜೂಜಾಟ: 8 ಜನರ ಬಂಧನಬೈಕ್, ಮೊಬೈಲ್ ಪಣಕ್ಕಿಟ್ಟು ಜೂಜಾಟ !
ಕಲಬುರಗಿ,ಸೆ.24-ನಗರದ ಸಾಯಿಮಂದಿರ ಹಿಂದುಗಡೆಯ ಅಪಾರ್ಟ್‍ಮೆಂಟ್ ಒಂದರಲ್ಲಿ ಜೂಜಾಟ ನಡೆಯುತ್ತಿದೆ ಎಂಬ ಮಾಹಿತಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ 8 ಜನರನ್ನು ಬಂಧಿಸಿದ್ದಾರೆ.
ಸಂತೋಷ ಪಟ್ಟಣಕರ, ಸುನೀಲ ರಾಠೋಡ್, ಅಣ್ಣಾರಾವ ಪೊಲೀಸ್ ಪಾಟೀಲ, ಮಹಾದೇವಪ್ಪ ವಾಲೀಕಾರ, ಶಿವಕುಮಾರ ಬಿರಾದಾರ, ರಾಜು ಪೂಜಾರಿ, ಅಂಬಾರಾಯ ಪಾಟೀಲ, ಶಿವಪುತ್ರಯ್ಯ ಹಿರೇಮಠ ಎಂಬುವವರನ್ನು ಬಂಧಿಸಿ 5,110 ರೂ.ನಗದು, 52 ಇಸ್ಪಿಟ್ ಎಲೆ ಮತ್ತು ಮೊಬೈಲ್‍ಗಳನ್ನು ಜಪ್ತಿ ಮಾಡಿದ್ದಾರೆ.
ಇವರು ಜೂಜಾಟವಾಡುವಾಗ ಹಣ ಕಡಿಮೆ ಬಿದ್ದಲ್ಲಿ ಮೊಬೈಲ್ ಮತ್ತು ಬೈಕ್ ಪಣಕ್ಕೆ ಇಟ್ಟು ಜೂಜಾಡುತ್ತಿದ್ದರು ಎಂದು ತಿಳಿದುಬಂದಿದೆ.
ಸಿಸಿಬಿ ಘಟಕದ ಪಿಐ ದಿಲೀಪಕುಮಾರ ಬಿ.ಸಾಗರ ಅವರ ನೇತೃತ್ವದಲ್ಲಿ ಪಿಎಸ್‍ಐ ರವೀಂದ್ರಕುಮಾರ, ಯಲ್ಲಪ್ಪ, ಅಶೋಕ ಕಟಕೆ, ಶ್ರೀಶೈಲ, ಮೃತ್ಯುಂಜಯ, ಶಿವಕುಮಾರ, ನಾಗರಾಜ ಮತ್ತು ಸುನೀಲಕುಮಾರ ಅವರು ಈ ದಾಳಿ ನಡೆಸಿ ಜೂಜುಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.