ದೇವರ ತಾಣ ಹಲಕರ್ಟಿ ಗ್ರಾಮ
ವಾಡಿ,ಸೆ.24-ಚಿತ್ತಾಪುರ ತಾಲ್ಲೂಕಿನ ಹಲಕರ್ಟಿ ಗ್ರಾಮ ದೇವರ ಊರು ಎಂದು ಕಲರ್ಸ್ ಕನ್ನಡ ವಾಹಿನಿಯ ಮಹರ್ಷಿ ದರ್ಶನ್ ಕಾರ್ಯಕ್ರಮದ ರೂವಾರಿ ವಿದ್ಯಾಶಂಕರಾನಂದ್ ಗುರೂಜಿ ಹೇಳಿದರು.
ಹಲಕರ್ಟಿಯ ವೀರಭದ್ರೇಶ್ವರ ಪವಾಡ ಹಾಗೂ ಕಟ್ಟಿಮನಿ ಹಿರೇಮಠ್‍ದ ಇತಿಹಾಸ ಪ್ರಸಾರ ಮಾಡಲು ಆಗಮಿಸಿದ್ದ ಅವರು, ಈ ಊರು ಬಹಳ ಪುರಾತನ ಹಾಗೂ ಇತಿಹಾಸ ಪ್ರಸಿದ್ಧವಾಗಿದೆ. ಇಲ್ಲಿ ಹಿಂದೆ ದೇವರ ವಾಸ ಮಾಡಿದ್ದಾರೆ ಇದು ಸಾಕ್ಷಾತ್ ದೇವರ ನೆಲಿಸಿರುವ ಗ್ರಾಮ. ಹಿಂದೆ ಇಲ್ಲಿನ ಜನರು, ರೈತರು ತಮ್ಮ ತಮ್ಮ ಕೆಲಸ ಮಾಡಿಕೊಂಡು ಉಪಜೀವನ ಮಾಡುತಿದ್ದರು. ಆದರೆ ನೇಮದಿ ಮಾತ್ರ ಇರಲಿಲ್ಲ. ಯಾಕೆಂದರೆ ರಾಕ್ಷಸರ ಕಾಟ ವಿಪರೀತವಾಗಿತ್ತು. ಅವರು ಬಡವರ ದವಸ ಧಾನ್ಯಗಳನ್ನು ಕಸಿದು ಕೊಂಡು ಹೋಗುತಿದ್ದರು ಯಾರ ಭಯ ಇಲದಂತೆ ಇರುತಿದ್ದರು. ದೇವರಿಗೂ ಸಹ ಮಣಿಯದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಸಂದರ್ಭದಲ್ಲಿ ಲೋಕ ಕಲ್ಯಾಣಕಾಗಿ ಉಗ್ರಹ ರೂಪಿತಾಳಿದ ವೀರಭದ್ರೇಶ್ವರ ರಾಕ್ಷಸರನ್ನು ಸಂಹಾರ ಮಾಡಿ ರಾಕ್ಷಸರ ಹಲ್ಲು ಕಿತ್ತಿ ಹಾರ ಮಾಡಿ ಅಗಸಿಯಲ್ಲಿ ಕಟ್ಟಿ ಬಿಡುತ್ತಾರೆ ಅದಕ್ಕೆ ಈ ಗ್ರಾಮಕ್ಕೆ ಹಲಕರ್ಟಿ ಎಂದು ಹೆಸರು ಬಂದಿದೆ ಎಂದು ಹೇಳಿದರು.
ಅಂದು ವೀರಭದ್ರೇಶ್ವರ ಪವಾಡ ಮಾಡಿದರೆ ಇಂದು ಕಟ್ಟಿಮನಿ ಹಿರೇಮಠದ ಪೀಠಾಧಿಪತಿ ಅಭಿನವ ಮುನಿಂದ್ರ ಶಿವಾಚಾರ್ಯರು ಭಕ್ತರ ಆರಾಧ್ಯ ದೇವರಾಗಿ ಬಂದ ಭಕ್ತರ ಕಷ್ಟ ಪರಿಹರಿಸುತ್ತಿದ್ದಾರೆ. ಇಂತಹ ಊರಿನಲ್ಲಿ ಜನಿಸಿದ ತಾವು ಪುಣ್ಯವಂತರು ಎಂದು ಹೇಳಿದರು.
ಕಟ್ಟಿಮನಿ ಹಿರೇಮಠದ ಪೀಠಾಧಿಪತಿ ಅಭಿನವ ಮುನಿಂದ್ರ ಶಿವಾಚಾರ್ಯರು ಮಾತನಾಡಿ, ಹಲಕರ್ಟಿ ಗ್ರಾಮ ಇತಿಹಾಸ ಉಳ್ಳ ಗ್ರಾಮ. ಇಲ್ಲಿ ಸುಮಾರು ಅರವತ್ತುಕ್ಕಿಂತ ಹೆಚ್ಚು ದೇವಾಲಯಗಳ್ಳಿವೆ ಇದು ಹಿಂದು-ಮುಸ್ಲಿಂ ಭಾವೈಕ್ಯತೆಯ. ಗ್ರಾಮದಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಜಾತಿ, ಮತ, ಪಂಥ ಎನ್ನದೆ ಎಲ್ಲರೂ ಒಗ್ಗಟ್ಟಿನಿಂದ ಕೂಡಿ ಕೆಲಸ ಮಾಡುತ್ತಾರೆ. ಇಲ್ಲಿನ ಪ್ರತಿಯೊಂದು ದೇವಾಲಯಕ್ಕೂ ಒಂದೊಂದು ಇತುಹಾಸವಿದೆ. ಆದರೆ ಜಿಲ್ಲೆಯಲ್ಲಿ ವಿಶ್ವವಿದ್ಯಾಲಯ ಇದ್ದರು ಹಲಕರ್ಟಿಯ ಗ್ರಾಮ ಬಗ್ಗೆ ಅಧ್ಯಯನವಾಗಿಲ್ಲ ಎಂದು ವಿಷಾದಿಸಿದರು.
ಪ್ರಾರಂಭದಲ್ಲಿ ಕಟ್ಟಿಮನಿ ಸಂಸ್ಥಾನ ಹಿರೇಮಠದ ಲಿಂಗೈಕ್ಯ ದೊಡ್ಡೇಶ್ವರ ಶಿವಾಚಾರ್ಯರ ಲಿಂಗೈಕ್ಯ ಮುನಿಂದ್ರ ಮಹಾಶಿವಯೋಗಿಗಳವರ ಹಾಗೂ ಲಿಂಗೈಕ್ಯ ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳವರ ಕರ್ತೃಗದ್ದುಗೆಗೆÉ ಭೇಟಿ ನೀಡಿ ಮಹಾಮಂಗಳಾರತಿ ಮಾಡಿ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಹಾಗೂ ಅಭಿನವ ಮುನಿಂದ್ರ ಶಿವಾಚಾರ್ಯರು ನಮನ ಸಲ್ಲಿಸಿದರು. ನಂತರ ಅಲಕಟ್ಟಿ ಗ್ರಾಮಸ್ಥರ ವತಿಯಿಂದ ಹಾಗೂ ಕಟ್ಟಿಮನಿ ಸಂಸ್ಥಾನ ಹಿರೇಮಠದ ವತಿಯಿಂದ ವಿದ್ಯಾಶಂಕರನಂದ ಸರಸ್ವತಿ ಗುರೂಜಿ ಅವರಿಗೆ ಗೌರವ ಸತ್ಕರಿಸಲಾಯಿತು.
ಕ್ಷೇತ್ರನಾಥ ವೀರಭದ್ರೇಶ್ವರ ಮಹಾಸ್ವಾಮಿಯ ಸನ್ನಿಧಿಗೆ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿಯವರು ಹಾಗೂ ಅಭಿನವ ಮುನೀಂದ್ರ ಶಿವಾಚಾರ್ಯ ಮಹಾಸ್ವಾಮಿಗಳವರು ವೀರಭದ್ರೇಶ್ವರ ಮಹಾಸ್ವಾಮಿಯ ಮೂಲ ಮೂರ್ತಿಗೆ ಮಹಾ ಮಂಗಳಾರತಿಯನ್ನು ಸಲ್ಲಿಸಿ ಮಹರ್ಷಿ ದರ್ಶನ ಸಂದರ್ಶನ ಕಾರ್ಯಕ್ರಮವನ್ನು ನೆರವೇರಿಸಿದರು.
ದೇವಸ್ಥಾನದ ಕಮಿಟಿ ವತಿಯಿಂದ ಹಾಗೂ ಅರ್ಚಕರ ವತಿಯಿಂದ ವಿದ್ಯಾ ಶಂಕರಾನಂದ ಸರಸ್ವತಿ ಗುರೂಜಿಯವರಿಗೆ ಗೌರವ ಸನ್ಮಾನವನ್ನು ನೀಡಿ ಆಶೀರ್ವಾದ ಪಡೆದರು. ಮಹರ್ಷಿ ದರ್ಶನ ಕಾರ್ಯಕ್ರಮವನ್ನು ಕುರಿತು ಅಭಿನವ ಮುನೀಂದ್ರ ಶಿವಾಚಾರ್ಯ ಮಹಾಸ್ವಾಮಿಗಳವರು ಆಶೀರ್ವಚನ ದಯಪಾಲಿಸಿದರು ನಂತರ ಕಾರ್ಯಕ್ರಮದ ಹಾಗೂ ವೀರಭದ್ರೇಶ್ವರ ಸ್ವಾಮಿಯ ಕುರಿತು ವಿದ್ಯಾಶಂಕರಾನಂದ ಸರಸ್ವತಿ ಗುರೂಜಿಯವರು ಆಶೀರ್ವಚನ ದಯಪಾಲಿಸಿದರು. ಮಹರ್ಷಿ ದರ್ಶನ ಕಾರ್ಯಕ್ರಮಕ್ಕೆ ಗ್ರಾಮದ ನೂರಾರು ಭಕ್ತರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ರಾಜುಗೌಡ ಕಾಂತು, ಸಾಹುಕಾರ ರವಿ ಸಾಹು, ಸಂಗಶೆಟ್ಟಿ ಮಲ್ಲಣ್ಣ ಪೂಜಾರಿ ಬಾವಿಕಟ್ಟಿ ಮಲ್ಲು ಪೂಜಾರಿ, ಶಿವಶರಣ ಪೂಜಾರಿ, ನಾಗರಾಜ್ ಪೂಜಾರಿ, ಚೌಡಪ್ಪ ಗಂಜಿ, ಬಸ್ಸಣ್ಣ ಜೈನಪುರ್, ಸಾಬಣ್ಣ ಇಟ್ಟೀನ್ ಮಹಮ್ಮದ್ ಚಿತ್ತಾವಲಿ ಶೇಖಪ್ಪ ಸಾಹು ಸಂಗಶೆಟ್ಟಿ ಮಹದೇವಯ್ಯ ಸ್ವಾಮಿ ಸಿದ್ದು ಗೌಡ ಮಲ್ಲಿಕಾರ್ಜುನ ಅಣಿಕೇರಿ ದೇವಪ್ಪ ಸುಣಗಾರ ಅಭಿಷೇಕ ಅಂಗಡಿ ಪ್ರಕಾಶ ಜೋಷಿ ನಾಗಣ್ಣ ಪೂಜಾರಿ ಇರಗೊಂಡ ಸಿದ್ದು ಮುಗ್ಗಟಿ ಶರಣಪ್ಪ ಕೋಲಕುಂದಿ ಇತರರು ಇದ್ದರು ಕಾರ್ಯಕ್ರಮ ನಿರೋಪಣೆಯನ್ನು ರಾಚಯಾ ಶಾಸ್ತ್ರಿ ಅವರು ನಡೆಸಿ ಕೊಟ್ಟರು.