ಸಮಾಜಕ್ಕೆ ಜೈನ ಸಮುದಾಯದ ಕೊಡುಗೆ ಅಪಾರ
ಕಲಬುರಗಿ,ಸೆ.24-ಸಮಾಜಕ್ಕೆ ಜೈನ ಸಮುದಾಯದ ಕೊಡುಗೆ ಅಪಾರವಾಗಿದ್ದು, ರಾಷ್ಟ್ರ ಮತ್ತು ನಾಡಿನ ಕಲೆ, ಸಾಹಿತ್ಯ, ಸಂಗೀತ, ವಾಸ್ತುಶಿಲ್ಪ ಮತ್ತು ವಾಣಿಜ್ಯ ಕ್ಷೇತ್ರ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಜೈನ ಸಮುದಾಯವು ಪೂರ್ವದಿಂದಲೂ ತನ್ನ ಮಹತ್ವದ ಕೊಡುಗೆಯನ್ನು ಸಮಾಜಕ್ಕೆ ದಾರೆ ಎರೆಯುತ್ತ ಬರುತ್ತಿರುವುದು ನಾವುಗಳು ಎಂದಿಗೂ ಮರೆಯುವಂತಿಲ್ಲ ಎಂದು ರಾಜ್ಯದ ಯೋಜನಾ ಮತ್ತು ಸಾಂಖ್ಯಿಕ ಸಚಿವÀ ಡಿ.ಸುಧಾಕರ ರವರು ನುಡಿದರು.
ನಗರದಲ್ಲಿ ಕರ್ನಾಟಕ ಪುರಾತತ್ವ ಮತ್ತು ಸಾಹಿತ್ಯ ಪರಿಷತ್ತು ಜಿಲ್ಲಾ ಶಾಖೆ ವತಿಯಿಂದ ಆಯೋಜಿಸಲಾದ ಜೈನ ಜನಗಣತಿ ಮುಖಪತ್ರವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಜೈನ ಸಮುದಾಯದ ಅಹಿಂಸೆ, ತ್ಯಾಗ, ನಿಷ್ಠೆ ಮತ್ತು ಪರೋಪಕಾರದ ಸೇವಾ ಮನೋಭಾವವನ್ನು ಸಮಾಜದ ಎಲ್ಲಾ ವರ್ಗದವರು ಗೌರವಿಸುತ್ತ, ಪ್ರೀತಿಸುತ್ತ ಬರುವುದನ್ನು ನಾವು ಇಂದಿಗೂ ಕಾಣುತ್ತೇವೆ. ಧಾರ್ಮಿಕವಾಗಿ ಮತ್ತು ಸಾಂಸ್ಕøತಿವಾಗಿ ಜೈನ ಸಮುದಾಯ ಎತ್ತರದಲ್ಲಿದ್ದರೂ ಸಹ ಸಂಘಟನೆ, ಒಗ್ಗಟ್ಟಿನಲ್ಲಿ ಬಲಿಷ್ಠಗೊಳ್ಳುವುದು ಇಂದಿನ ಅಗತ್ಯವಾಗಿದ್ದು, ಜೈನ ಸಮುದಾಯದ ಜನಗಣತಿ ಮಾಡುವುದರ ಮೂಲಕ ರಾಜ್ಯದಲ್ಲಿರುವ ಜೈನ ಬಾಂಧವರ
ಸಂಖ್ಯೆ ಎಷ್ಟಿರುವುದು ಎಂದು ನಿಖರವಾಗಿ ತಿಳಿಯಲಿದ್ದು ಇದರಿಂದ ಸರ್ಕಾರದ ಯೋಜನೆಗಳು ಅರ್ಹರಿಗೆ ತಲುಪಿಸಲು ಸಹಾಯವಾಗಲಿದ್ದು ಈ ದಿಸೆಯಲ್ಲಿ ಪುರಾತತ್ವ ಪರಿಷತ್ ವತಿಯಿಂದ ಆಯೋಜಿಸಲಾದ ಜೈನ ಜಾತಿ ಜನಗಣತಿ ಯಶಸ್ವಿಯಾಗಲೆಂದು ಶುಭ ಹಾರೈಸಿದರು.
ಜೈನ ಸಮುದಾಯದಲ್ಲಿಯೂ ಸಹ ಮಧ್ಯಮ, ಬಡವರು, ಗ್ರಾಮಾಂತರ ಭಾಗದಲ್ಲಿ ವಾಸಿಸುವ ಅನೇಕರು ಬಡವರಾಗಿದ್ದು ಹೀಗಾಗಿ ಅವರ ಜೀವನಮಟ್ಟ ಸುಧಾರಿಸಲು ಜಾತಿ ಗಣತಿ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನೇಕ ಸೌಲಭ್ಯಗಳು ಅವರಿಗೆ ತಲುಪಿಸಿ ಅವರ ಜೀವನಮಟ್ಟವನ್ನು ಸುಧಾರಿಸಲು ಸಹಕಾರಿಯಾಗುತ್ತದೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ನಿಕಟಪೂರ್ವ ನಿರ್ದೇಶಕರಾದ ಸುರೇಶ ತಂಗಾ ಹೇಳಿದರು.
ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅನೇಕ ಯೋಜನೆಗಳು ಜೈನ ಸಮುದಯದವರಿಗಾಗಿದ್ದು ಆದರೆ ನಿರೀಕ್ಷಿತ ಮಟ್ಟದಲ್ಲಿ ಸಮುದಯದವರಿಗೆ ತಲುಪದೇ ಇರುವುದು ಅತ್ಯಂತ ನೋವಿನ ಸಂಗತಿಯಾಗಿದ್ದು ಸಂಘಟನೆಯಲ್ಲಿ ಬಲವಿದ್ದು ಮುಕ್ತ ಮನಸ್ಸಿನಿಂದ ಸಂಘಟನೆ ಮಾಡುವುದರ ಮೂಲಕ ನ್ಯಾಯಯುತವಾಗಿ ನಮಗೆ ಸಿಗಬೇಕಾದ ಸೌಲಭ್ಯಗಳನ್ನು ಪಡೆಯಲು ಮುಂದಾಗುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಶ್ರೀ ಮನೋಜಕುಮಾರ ಜೈನ, ಹಿರಿಯರಾದ ಪ್ರಕಾಶ ಜೈನ ಮಾಲಗತ್ತಿ, ಶ್ರೀ ಕ್ಷೇತ್ರ ಶ್ರವಣ ಬೆಳಗೊಳದ ರಾಜೇಶ ಖನ್ನಾ ವೇದಿಕೆ ಮೇಲೆ ಉಪಸ್ಥಿತರಿದ್ದರು. ಪುರಾತತ್ವ ಪರಿಷತ್‍ನ ಅಧ್ಯಕ್ಷರಾದ ಅಜೀತ ಮುರಗುಂಡೆ ಅಧ್ಯಕ್ಷತೆ ವಹಿಸಿದ್ದರು. ಧರಣೇಂದ್ರ ಸಂಗಮಿ ನಿರೂಪಿಸಿದರು, ರಾಜೇಂದ್ರ ಕುಣಚಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಜೈನ ಸಮಾಜದ ಶ್ರಾವಕ ಶ್ರಾವಕಿಯರು ಭಾಗವಹಿಸಿದ್ದರು.