ಪೋಷಣೆ ಮಾಸಾಚರಣೆ ಕಾರ್ಯಕ್ರಮ
ಕಲಬುರಗಿ,ಸೆ 24: ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಶಿಶು ಅಭಿವೃದ್ಧಿ ಯೋಜನೆ ಅಡಿ ನಗರದ ಅಂಬಿಕಾ ನಗರ ಬಡಾವಣೆಯ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಯುಏಫ್‍ಡಬ್ಲ್ಯೂಸಿ ವಲಯದಿಂದ ಪೆÇೀಷಣೆ ಮಾಸಾಚರಣೆ ಕಾರ್ಯಕ್ರಮ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಮಹಾನಗರ ಪಾಲಿಕೆಯ ಸದಸ್ಯ ಮಲ್ಲಿಕಾರ್ಜುನ ಉದುನೂರ್ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸರೋಜಾ ಠಾಕೂರ್, ಡಾ. ರಿಯಾಜ್ ಲಕ್ಷ್ಮಣ್ ನಾಟಿಕರ್ ಸೋಮಶೇಖರ್ ಅಶ್ವಿನಿ ಭದ್ರ ಶೆಟ್ಟಿ ಗೀತಾ ಡಿ ಚವ್ಹಾಣ್ ಪಿಂಕು ಭೀಮರಾಯ ಕಣ್ಣೂರ್ ಪ್ರಭಾವತಿ ಸಾಲೋಟಗಿ ಅನ್ನಪೂರ್ಣ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಇತರರು ಉಪಸ್ಥಿತರಿದ್ದರು.