ವಿದ್ಯಾರ್ಥಿಗಳಿಂದ ನಾರಾಯಣ ಜೋಶಿ ಐತಿಹಾಸಿಕ ಛಾಯಾಚಿತ್ರ ವೀಕ್ಷಣೆ
ಕಲಬುರಗಿ,ಸೆ.24: ನಗರದ ರೋಟರಿ ಶಾಲೆಯ ಹ್ಯಾರಿಸ ಸಭಾಂಗಣದಲ್ಲಿ, ಕರ್ನಾಟಕ ಜಾನಪದ ಪರಿಷತ್ತು, ಕಲಬುರಗಿಯ ಹವ್ಯಾಸಿ ಪ್ರವಾಸಿ ಮಾರ್ಗದರ್ಶಿ ಸಮಿತಿ ಸಹಯೋಗದಲ್ಲಿ ಕಲಬುರಗಿ ಜಿಲ್ಲೆಯು ಐತಿಹಾಸಿಕ, ಕೋಟೆ, ಕೊತ್ತಲಗಳ, ಪ್ರವಾಸಿ ತಾಣಗಳ ಕುರಿತಾದ ನಾರಾಯಣ.ಎಂ.ಜೋಶಿ ಅವರ ಏಕವ್ಯಕ್ತಿ ಐತಿಹಾಸಿಕ ಛಾಯಚಿತ್ರಗಳನ್ನು ಕುರಿತು ಶಾಲಾ ಮಕ್ಕಳಿಗೆ ಮಾಹಿತಿ ನೀಡಲಾಯಿತು.
ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್.ಮಾಲಿಪಾಟೀಲ್ ಮಾತನಾಡಿ ಪಠ್ಯೇತರ ಚಟುವಟಿಕೆÀ ಮನೋವಿಕಾಸಕ್ಕೆ ಪ್ರವಾಸ ಅಗತ್ಯ .ಪ್ರಾಚೀನ ಸ್ಮಾರಕಗಳನ್ನು ನಾಶಪಡಿಸಿದರೆ ಇತಿಹಾಸವನ್ನೇ ನಾಶಪಡಿಸಿದಂತೆ ಅವುಗಳನ್ನು ರಕ್ಷಿಸುವ ಹೊಣೆ ನಮ್ಮೆಲ್ಲರದಾಗಿದೆ ಎಂದು ನುಡಿದರು.
ಸಂಪನ್ಮೂಲ ವ್ಯಕ್ತಿ ಬಿ.ಎಮ್.ರಾವೂರ ಮಾತನಾಡಿ ಈ ಭಾಗದ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕ.ಕ ಭಾಗದ ಐತಿಹಾಸಿಕ ಕೋಟೆ ಕೊತ್ತಲಗಳ, ಪ್ರವಾಸಿ ತಾಣಗಳ, ಸಾಂಸ್ಕøತಿಕ ಮತ್ತು ಪರಂಪರೆ, ಪ್ರಕೃತಿ ಮತ್ತು ವನ್ಯಜೀವಿ, ಸಾಹಸ, ಹಾಗೂ ಇತರೆ ತಾಣಗಳ ಭೇಟಿ ನೀಡಲು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು 100 ಕೋಟಿ ರೂಗಳ ವಿಶೇಷ ಅನುದಾನ ಕ್ರಿಯಾ ಯೋಜನೆ ರೂಪಿಸಿ ಬಿಡುಗಡೆ ಮಾಡಬೇಕು. ಮಾಜಿ ಮುಖ್ಯಮಂತ್ರಿ ಧರಂಸಿಂಗ ಅವರು ಕರ್ನಾಟಕ ದರ್ಶನ ಯೋಜನೆ ಜಾರಿ ಗೊಳಿಸಿದರು ಅಂತೆಯೆ ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ.ಅಜಯಸಿಂಗ ಅವರು ಕಲ್ಯಾಣ ಕರ್ನಾಟಕ ದರ್ಶನ ಯೋಜನೆ ಜಾರಿ ಗೊಳಿಸುವಂತೆ ಕೋರಿದರು.ರೋಟರಿ ಶಾಲೆಯ ಮಕ್ಕಳು, ನಾರಾಯಣ.ಎಂ.ಜೋಶಿ ಅವರ ಏಕವ್ಯಕ್ತಿ ಐತಿಹಾಸಿಕ ಛಾಯಚಿತ್ರಗಳು ಕುತೂಹಲದಿಂದ ವೀಕ್ಷಿಸಿದರು ನಂತರ ಮಕ್ಕಳ ಪ್ರಶ್ನೆಗಳಿಗೆ ಸಂಪನ್ಮೂಲ ವ್ಯಕ್ತಿಗಳು ಉತ್ತರಿಸಿದರು.ವಿಠ್ಠಲರಾವ ತುಕಾರಾಮ ಸುತ್ರಾವೆ ಸ್ಮಾರಕ-ರೋಟರಿ ಶಾಲೆ ಮುಖ್ಯೋಪಾಧ್ಯಾಯ ಪಾಂಡುರಂಗ ಕಟಕೆ ಅಧ್ಯಕ್ಷತೆ ವಹಿಸಿದ್ದರು. ನೂರಾರು ಶಾಲಾ ವಿದ್ಯಾರ್ಥಿಗಳು ಶಿಕ್ಷಕ-ಶಿಕ್ಷಕಕಿಯರು ಉಪಸ್ಥಿತರಿದ್ದರು.