ದೇವದಾಸಿ ಮಹಿಳೆಯರ ಬೇಡಿಕೆಗಳ ಈಡೇರಿಸುವಂತೆ ಮನವಿ
ಸಂಜೆವಾಣಿ ವಾರ್ತೆ
ಬಳ್ಳಾರಿ, ಜೂ.05: ದೇವದಾಸಿ ಮಹಿಳೆಯರ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಬಳ್ಳಾರಿ ಜಿಲ್ಲಾ ಸಮಿತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಮನವಿ ಪತ್ರದಲ್ಲಿ ತಮ್ಮ ಪ್ರಮುಖ ಬೇಡಿಕೆಗಳನ್ನು ತಿಳಿಸಿದೆ.
ಮೂರ್ನಾಲ್ಕು ವರ್ಷಗಳಿಂದ ಪೆನ್ನನ್ ಬಾರದೇ ಇರುವ ಮಾಜಿ ದೇವದಾಸಿ ಮಹಿಳೆಯರಿಗೆ ಕೂಡಲೇ ಪೆನ್ನನ್ ನೀಡಬೇಕು. 2019-20 ನೇ ಸಾಲಿನ ಆದಾಯ ಉತ್ಪನ್ನ ಚಟುವಟಿಕೆಯಲ್ಲಿ ಒಂದು ಲಕ್ಷ ರೂ ಹಣ ಜಮಾ ಆಗದೇ ಇರುವ ಮತ್ತು 3000 ಸಾವಿರ ರೂ ಜಮಾ ಆಗದೇ ಇರುವ ಮಾಜಿ ದೇವದಾಸಿ ಮಹಿಳೆಯರಿಗೆ ಕೂಡಲೇ ಹಣ ಜಮಾ ಮಾಡಬೇಕು ಹಾಗೂ 2017 ರಿಂದ 2023ರವರೆಗೆ ಆಯ್ಕೆಯಾದ ಮನೆಗಳು ಮತ್ತು ಅರ್ಜಿ ಹಾಕಿದ ದೇವದಾಸಿ ಮಹಿಳೆಯರಿಗೆ ಮನೆಗಳನ್ನು ಕಟ್ಟಿಕೊಳ್ಳುವುದಕ್ಕೆ ಆದೇಶ ಪತ್ರ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ಬಂಡಿ ಗ್ರಾಮದಲ್ಲಿ ದೇವದಾಸಿ ಮಹಿಳೆಯರಿಗೆ ನಿವೇಶನಕ್ಕಾಗಿ ಸರ್ವೆ ನಂಬರ್ 378 ವಿಸ್ತೀರ್ಣ 3.10 ಭೂಮಿಯನ್ನು ಸಮತಟ್ಟ ಪ್ಲಾಟ್ ಗಳು ಮಾಡಿ ದೇವದಾಸಿ ಮಹಿಳೆಯರಿಗೆ ಹಕ್ಕು ಪತ್ರ ನೀಡಬೇಕು, 1993 ರಿಂದ 2008ರ ವರೆಗೆ ಸರ್ಕಾರವೇ ಸರ್ವೆ ಮಾಡಿ ಗುರುತಿಸಲ್ಪಟ್ಟ ದೇವದಾಸಿ ಮಹಿಳೆಯರಿಗೆ ದೇವದಾಸಿ ದೃಢೀಕರಣ ಪತ್ರ ನೀಡಬೇಕು ಎಂದು ಮನವಿ ಮಾಡಿದ್ದು, ದೇವದಾಸಿ ಮಹಿಳೆಯರು ಈಗಾಗಲೇ ಗಂಗಾ ಕಲ್ಯಾಣ ಯೋಜನೆಯಲ್ಲಿ ಅರ್ಜಿ ಹಾಕಿದ್ದು ಅವರಿಗೆ ಬೋರ್ ವೆಲ್ ಕೊರಿಸಬೇಕು 7.ಯೋಜನಾಧಿಕಾರಿ ದೇವದಾಸಿ ಪುನರ ವಸತಿ ಯೋಜನಾಧಿಕಾರಿ ಸುಧಾ ಚಿದ್ರಿ ಅಧಿಕಾರಿಯನ್ನು ಬದಲಾವಣೆ ಮಾಡಬೇಕು .ಪ್ರತಿ ತಿಂಗಳು ದೇವದಾಶಿ ಮಹಿಳೆಯರಿಗೆ ಪೇನ್‌ಷನ್‌ ನೀಡಬೇಕು ಎಂದು ವಿನಂತಿಸಿಕೊಂಡಿದ್ದಾರೆ.
ಮನವಿ ಪತ್ರ ಸಲ್ಲಿಸಿದ ಸಂದರ್ಭದಲ್ಲಿ ಸಂಘಟನೆಯ  ಜಿಲ್ಲಾಧ್ಯಕ್ಷರು ಈರಮ್ಮ,, ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ ಎಚ್.ದುರುಗಮ್ಮ ಸಂಡೂರು ತಾಲೂಕು ಕಾರ್ಯದರ್ಶಿ ದುರುಗಮ್ಮ, ಎಚ್.ಯಂಕಮ್ಮ ಬಳ್ಳಾರಿ ತಾಲೂಕು ಕಾರ್ಯದರ್ಶಿ ಹುಲಿಗಮ್ಮ, ಕುರುಗೋಡು ತಾಲೂಕು ಕಾರ್ಯದರ್ಶಿ ಕಂಪ್ಲಿ ತಾಲೂಕು ಕಾರ್ಯದರ್ಶಿ ಎಚ್.ವೀರೇಶ ಕುರುಗೋಡು ತಾಲೂಕು ಉಪಸ್ಥಿತರಿದ್ದರು.