ನಿಮ್ಮ ಜೀವನದ ಶಿಲ್ಪಿಗಳು ನೀವೇ,: ವೆಂಕಟೇಶ ಬಾಬು

ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.೪ : ನಿರ್ದಿಷ್ಟವಾದ ದೊಡ್ಡ ಗುರಿ, ಗುರಿ ಮುಟ್ಟಲು ಸತತ ಪ್ರಯತ್ನ ಜೊತೆಗೆ ಒಂದಿಷ್ಟು ಆತ್ಮವಿಶ್ವಾಸ ಹಾಗೂ ನಂಬಿಕೆ ಮತ್ತು ಛಲ ಇವುಗಳನ್ನು ಒಟ್ಟಾಗಿ ಸೇರಿಸಿ ಪ್ರಯತ್ನಪಟ್ಟರೆ ಸದಾ ನಿಮ್ಮ ಸುಂದರವಾದ ಜೀವನ ನಿಮ್ಮ ಕೈಯಲ್ಲಿದೆ  ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ ವೆಂಕಟೇಶ್ ಬಾಬು  ಹೇಳಿದರು..  ನಗರದ ಸಮೃದ್ಧಿ ಕೋಚಿಂಗ್ ಅಕಾಡೆಮಿ   ವತಿಯಿಂದ   2023-24 ಸಾಲಿನ  ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಉಚಿತ ತರಬೆತಿಗೆ ಆಯ್ಕೆಯಾದ ಸ್ಪರ್ಧಿಗಳಿಗೆ ತರಬೇತಿಯ ಉದ್ಘಾಟನ  ಸಮಾರಂಭದಲ್ಲಿ  ಮಾತನಾಡಿದರು..ಇದು ಜ್ಞಾನ ಹಾಗೂ ಸ್ಪರ್ಧೆಯ ಯುಗ ಈ ಸ್ಪರ್ಧಾತ್ಮಕ.  ಯುಗದಲ್ಲಿ ಜ್ಞಾನದ ಹಸಿವಿರುವವರು ಜ್ಞಾನಗಳಿಸಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಿದಾಗ ಸಾಧನೆ ಮಾಡಲು ಸಾಧ್ಯ. ಪ್ರತಿಯೊಬ್ಬರಿಗೂ  ತಮ್ಮ ಜೀವನ ಗುರಿ ದೊಡ್ಡದಿರಬೇಕು ಆಗ ಮಾತ್ರ ಅದನ್ನು ತಲುಪಲು ಸಾಧ್ಯವಾಗುತ್ತದೆ. ಮೊದಲು ತಾನು ಏನಾಗಬೇಕು ಎಂಬುದನ್ನು ನಿರ್ಧರಿಸಿಕೊಂಡು ನಂತರ ಪ್ರಯತ್ನಿಸಿದರೆ ಆಗ ಯಶಸ್ಸು ಸಾಧ್ಯ ಇಲ್ಲದಿದ್ದರೆ ಜೀವನದಲ್ಲಿ ಯಾವುದನ್ನು ಗಳಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.