ಅ. 4 ಕ್ಕೆ ಬಳ್ಳಾರಿಯಲ್ಲಿ ಸ್ಟೀಲ್ ಸಿಟಿ ರನ್
* ಬಳ್ಳಾರಿ ಸೈಕ್ಲಿಸ್ಟ್ ಮತ್ತು ರನ್ನರ್ಸ್ ಫೌಂಡೇಶನ್ ನಿಂದ ಆಯೋಜನೆ
* 3 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ
* ಆನ್ ಲೈನ್ ಮೂಲಕ ನೋಂದಣಿ
* 3 ಕಿ.ಮೀ.ಮಜಾ ರನ್
* 10, 5, ಕಿ.ಮೀ.ಸ್ಪರ್ಧಾ ಓಟ
* ಎಲ್ಲಾ ವರ್ಗದವರಿಗೆ ವಿಭಾಗದಲ್ಲಿ ಸ್ಪರ್ಧೆ
* 4 ಮತ್ತು 5 ನೇ ಬಹುಮಾನ ಬಳ್ಳಾರಿ ಜಿಲ್ಲೆಯವರಿಗೆ ಮಾತ್ರ
* ವಿಸ್ಡಂ ಲ್ಯಾಂಡ್ ಶಾಲೆಯಿಂದ ಆರಂಭ
* ದೇಶದ ವಿವಿಧ ರಾಜ್ಯಗಳಿಂದ ಸ್ಪರ್ಧಿಗಳು
* 3 ಲಕ್ಷ ಮೌಲ್ಯದ ಬಹುಮಾನ
 (ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.05:  ಇಲ್ಲಿನ ಬಳ್ಳಾರಿ ಸೈಕ್ಲಿಸ್ಟ್ ಮತ್ತು ರನ್ನರ್ಸ್ ಫೌಂಡೇಶನ್  ಬರುವ ಅ 4 ರಂದು  ಜಿಂದಾಲ್,  ಕಿಷ್ಕಿಂದಾ ವಿಶ್ವವಿದ್ಯಾಲಯ, ಮೋದಿ ಫೌಂಡೇಶನ್, ಎಸ್.ಬಿ.ಐ ಬ್ಯಾಂಕ್, ಬಿ.ಕೆ.ಎಸ್ ಫೌಂಡೇಶನ್ ಮತ್ತು ಶ್ರೀ ನಂದಿ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್ ಸೇರಿದಂತೆ ಇತರೇ ಸಂಸ್ಥೆಗಳ ಸಹಕಾರದಿಂದ ಸ್ಪೀಲ್ ಸಿಟಿ ರನ್ ಹಮ್ಮಿಕೊಂಡಿದೆ. ಇದು ಮೂರನೇ ವರ್ಷದ್ದಾಗಿದೆ.
ಈ ಬಗ್ಗೆ ಇಂದು ಬಳ್ಳಾರಿ ಸೈಕ್ಲಿಸ್ಟ್ ಮತ್ತು ರನ್ನರ್ಸ್ ಫೌಂಡೇಶನ್ ಅಧ್ಯಕ್ಷ ಡಾ.ರವಿಶಂಕರ್ ಮತ್ತು ಡಾ.ಬಿ.ಕೆ.ಸುಂದರ್ ಅವರು ನಗರದಲ್ಲಿ ಸುದ್ದಿಗೋಷ್ಡಿ ನಡೆಸಿ ಮಾಹಿತಿ ನೀಡಿದರು.
ಸ್ಪೀಲ್ ಸಿಟಿ ರನ್ನನ್ನು ಮೊದಲ ಬಾರಿಗೆ 2022 ರಲ್ಲಿ ಹಮ್ನಿಕೊಂಡಿದ್ದಾಗ 1500 ಜನರು, ಕಳೆದ ವರ್ಷ 2500 ಜನ ಪಾಲ್ಗೊಂಡಿದ್ದರು. ಈ ಬಾರಿ ಮೂರು ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ಸಾಧ್ಯತೆ ಇದೆ‌
ಬಳ್ಳಾರಿ ಸೈಕ್ಲಿಸ್ಟ್ ಮತ್ತು ರನ್ನರ್ಸ್ ಫೌಂಡೇಶನ್
2015 ರಲ್ಲಿ ಆರಂಬಗೊಂಡು,  ಆರೋಗ್ಯಕ್ಕೆ ಸಂಬಂಧಿಸಿದ ಚಟುವಟಿಕೆ ಕೈಗೊಳ್ಳುತ್ತಾ ಬಂದಿದೆ.
ವಿಶ್ವ ಮಧುಮೇಹ ದಿನ, ವಿಶ್ವ ಹೃದಯ ದಿನ, ಮತ್ತು ವಿಶ್ವ ಏಡ್ತಾ ದಿನದ ಬಗ್ಗೆ, ಜಾಗೃತಿ ಮೂಡಿಸುವವರೆಗೆ ವೈವಿಧ್ಯಮಯ ಚಟುವಟಿಕೆಗಳಿಂದ  ನಾಗರೀಕರಲ್ಲಿ ಆರೋಗ್ಯದ ಬಗ್ಗೆ ಆರಿವು ಮೂಡಿಸುವ ಕೆಲಸ ಮಾಡಿದೆ.
10  ಮತ್ತು 5 ಕಿ.ಮೀ  ಟೈಮ್ಸ್ ರನ್: ಸ್ಪರ್ಧಾತ್ಮಕ ಸವಾಲನ್ನು ಬಯಸುವ ಅನುಭವಿ ಓಟಗಾರರಿಗೆ.
3 ಕಿ.ಮೀ ಮಜಾ ಓಟವು ಹೊಸಬರಿಗೆ ಅಥವಾ  ಅನುಭವಕ್ಕಾಗಿ ನೋಡುತ್ತಿರುವವರಿಗೆ ಹಮ್ಮಿಕೊಂಡಿದೆ.
ನೋಂದಣಿಗೆ 10 ಕಿಲೋ ಮೀಟರ್ ಗೆ 500 ರೂ, 5 ಕಿ.ಮೀ ಗೆ 400 ರೂ ಮತ್ತು ಮಜಾ ಓಟಕ್ಕೆ 350 ರೂ ಶುಲ್ಕ ನಿಗಧಿಪಡಿಸಿದೆ‌ ಆನ್ ಲೈನ್ ಮೂಲಕ‌ನೋಂದಣಿ ನಡೆಯಲಿದೆ.
ನಿಖರವಾದ ಸಮಯ ಮತ್ತು ವೈಯಕ್ಷಿಕಗೊಳಿಸಿದ ಪ್ರಮಾಣಪತ್ರಗಳಿಗಾಗಿ ಆರ್ ಎಫ್ ಐ ಡಿ   ಟ್ಯಾಗ್ ಮಾಡಲಾದ ಬಿಟ್‌ಗಳು ನೀಡಲಿದೆ.
ಮೋಕಾ ರಸ್ತೆಯಲ್ಲಿರುವ ವಿಜಡಂ ಲ್ಯಾಂಡ್ ಶಾಲೆಯ ಮೈದಾನದಲ್ಲಿ   ಓಟ ಪ್ರಾರಂಭವಾಗಲಿದೆ. ಈ ಓಟಕ್ಕೆ  ರಾಯಭಾರಿಗಳಾಗಿ  ಟೆಕ್ ಉದ್ಯಮ ಮತ್ತು ಓಟಗಾರರ ಸಮುದಾಯದಿಂದ  ಮೈಂಡ್‌ಟ್ರೀಯ ಸಹ-ಸಂಸ್ಥಾಪಕ ಪಾರ್ಥಸಾರಥಿ ಮತ್ತು ಅಶ್ವ ಫಿಟ್‌ನೆಸ್ ಕ್ಲಬ್‌ನ ಸಿಇಒ ಮತ್ತು ಫಿಟ್‌ನೆಸ್ ತರಬೇತುದಾ ಮೂರ್ತಿ ಆರ್ ಕೆ ಆಗಮಿಸುತ್ತಿದ್ದಾರೆ.
ನಡಿಗೆ, ವ್ಯಾಯಾಮ,ಓಟ, ಸೈಕ್ಲಿಂಗ್ ಇದ್ದರೆ ಆರೋಗ್ಯ ಇರುತ್ತೆ. ಆರೋಗ್ಯದ ಬಗ್ಗೆ ಅರಿವಿಗಾಗಿ ಈ ಓಟ ಎಂದರು.
ಸುದ್ದಿಗೋಷ್ಟಿಯಲ್ಲಿ ಫೌಂಡೇಶನ್ ನ ಉಪಾಧ್ಯಕ್ಷೆ ಶೃತಿ, ಕಾರ್ಯದರ್ಶಿ ಸಂದೀಪ್ ಶರ್ಮ, ಖಜಾಂಚಿ ಪ್ರಶಾಂತ್ ನೀರಜ್, ವಿಕಾಶ್ ಜೈನ್, ಡಾ.ತಿಪ್ಪಾರೆಡ್ಡಿ ಮೊದಲಾದವರು ಇದ್ದರು.