ನಿಷಾಜ್ಞೆಯಿದ್ದರೂ ಕಾರ್ಯಕರ್ತರಿಂದ ವಿಜಯೋತ್ಸವ
ಕೋಲಾರ, ಜೂ. ೫- ನಗರದ ಸರ್ಕಾರಿ ಬಾಲಕರ ಪದವಿ ಕಾಲೇಜಿನಲ್ಲಿ ಮಂಗಳವಾರ ಲೋಕಸಭಾ ಚುನಾವಣೆಯ ಮತಎಣಿಕೆ ಕಾರ್ಯ ನಡೆಯಿತು. ಕಾಲೇಜಿನ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಕಾಲೇಜು ಮುಂಭಾಗದ ರಸ್ತೆ ಹಿಂಭಾಗದ ರಸ್ತೆಗಳು ಸುತ್ತಮುತ್ತಲಿನ ನಾಲ್ಕೈದು ರಸ್ತೆಗಳನ್ನು ಬ್ಯಾರಿಕೆಟ್‌ಗಳನ್ನಿಟ್ಟು ಸಾರ್ವಜನಿಕರು ಒಳಗೆ ಪ್ರವೇಶ ಇಲ್ಲದ್ದಂತೆ ಬಿಗಿ ಬಂದೋಬಸ್ತ್ ಏರ್ಪಪಡಿಸಲಾಗಿತ್ತು. ಮತಎಣಿಕೆ ಬರುವ ಏಜೆಂಟರಿಗೆ ಹಾಗೂ ಮಾಧ್ಯದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು.
ಕಾಲೇಜು ಮುಂಭಾಗದ ರಸ್ತೆಗೆ ಸಾರ್ವಜನಿಕರು ಪ್ರವೇಶವಿಲ್ಲದ್ದಂತೆ ಚನ್ನಯ್ಯ ರಂಗಮಂದಿರ ಮುಂಭಾಗದ ಭದ್ರಪಡಿಸಲಾಗಿತ್ತು, ಅದೇ ರೀತಿಯ ಕಾಲೇಜು ಮುಂಬಾಗದ ಕುರುಬರಪೇಟೆಯ ಬಳಿ ಬ್ಯಾರಿಕೇಟ್‌ಗಳನ್ನು ಅಳವಡಿಸಲಾಗಿತ್ತು, ಸಾರ್ವಜನಿಕರು ಮತಎಣಿಕೆ ಬಂದ ಕಾರ್ಯಕರ್ತರನ್ನ ತಡೆಯಲಾಗಿತ್ತು.
ವಿಧಾನಸಭಾ ಚುನಾವಣೆಯ ಮತಎಣಿಕೆ ಪ್ರಾರಂಭದಿಂದಲೂ ಸದರಿ ರಸ್ತೆಯಲ್ಲಿ ಕಾರ್ಯಕರ್ತರು ಮತ್ತು ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದರು, ಮಂಗಳವಾರ ನಡೆದ ಲೋಕಸಭಾ ಮತಎಣಿಕೆ ಕೇಂದ್ರದ ಬಳಿ ಬೆಳಗ್ಗೆ ೧೦ ಗಂಟೆಯಾದರೂ ಜನ ಜಮಾಯಿಸಿರಲಿಲ್ಲ.
ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಲ್ಲೇಶ್‌ಬಾಬು ಮುನ್ನಡೆ ಸಾಧಿಸುತ್ತಿರುವ ವಿಷಯ ತಿಳಿದು ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಮಾತ್ರ ರಸ್ತೆ ಇಳಿದರು, ಉಳಿದಂತೆ ಕಾಂಗ್ರೆಸ್ ಕಾರ್ಯಕರ್ತರು ಮತಎಣಿಕೆ ಕೇಂದ್ರದ ಕಡೆ ಸುಳಿವೇ ಇಲ್ಲದಂತೆ ನಾಪತ್ತೆಯಾಗಿದ್ದರು,
೬ ಮತ್ತು ೭ನೇ ಸುತ್ತು ಮತಎಣಿಕೆಯ ನಂತರ ನಾಲ್ಕು ಸುತ್ತುಗಳಲ್ಲಿ ಮಲ್ಲೇಶ್‌ಬಾಬು ೭೫ ಸಾವಿರ ದಾಟಿದ ನಂತರ ಎರಡೂವರೆ ಸಾವಿರಕ್ಕೆ ಇಳಿಯುತ್ತಿದ್ದಂತೆ ಜೆಡಿಎಸ್-ಬಿಜೆಪಿ ಕಾರ್ಯಕರ್ತರಲ್ಲಿ ನಿರಾಸೆ ಮೂಡಿತು, ರಸ್ತೆಗಳಲ್ಲಿ ನಿಂತಿದ್ದವರು ಚದುರುವಂತೆ ಆಯ್ತು. ಎಸ್‌ಪಿ ಎಂ.ನಾರಾಯಣ ನೇತೃತ್ವದಲ್ಲಿ ಮತಎಣಿಕೆ ಕೇಂದ್ರಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.