ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮುಖಭಂಗ
ಕೋಲಾರ, ಜೂ. ೫- ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆ.ಡಿ.ಎಸ್. ಪಕ್ಷದ ಮೈತ್ರಿ ಅಭ್ಯರ್ಥಿ ಗೆಲವು ಬಹುತೇಕ ನಿರೀಕ್ಷಿತವಾಗಿತ್ತು.
ಕೇಂದ್ರದ ಆಡಳಿತದ ಪಕ್ಷವಾದ ಬಿಜೆಪಿ ಪಕ್ಷದ ಸಂಸದರು ಹಾಗೂ ಕೋಲಾರ ಲೋಕಸಭಾ ಕ್ಷೇತ್ರದ ೩ ಮಂದಿ ಜೆ.ಡಿ.ಎಸ್. ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ಬಲ ಹೊಂದಿರುವ ಜೂತೆಗೆ ಕಾಂಗ್ರೇಸ್ ಪಕ್ಷದಲ್ಲಿನ ಭಿನ್ನಮತದ ಲಾಭವನ್ನು ಪಡೆಯುವಲ್ಲಿ ಎನ್.ಡಿ.ಎ. ಯಶಸ್ವಿಯಾಗಿದೆ.
ಕಾಂಗ್ರೇಸ್ ಪಕ್ಷದಲ್ಲಿ ಲೋಕಸಭಾ ಕ್ಷೇತ್ರದ ೮ ವಿಧಾನ ಸಭಾ ಕ್ಷೇತ್ರದಲ್ಲಿ ೫ ಮಂದಿ ಕಾಂಗ್ರೇಸ್ ಶಾಸಕರು ಇದ್ದು ಓರ್ವ ವಿಧಾನ ಪರಿಷತ್ ಸದಸ್ಯರು ಇದ್ದರೂ ಸಹ ಒಗ್ಗಟ್ಟಿನಿಂದ ಕೆಲಸ ಮಾಡುವಲ್ಲಿ ವಿಫಲರಾದರು. ಎಲ್ಲರೂ ಪ್ರಾರಂಭದಿಂದಲೇ ಯಾರನ್ನು ನಿರ್ಲಕ್ಷಿಸದೆ ಒಗ್ಗಟ್ಟಿನಿಂದ ಕೆಲಸ ನಿರ್ವಹಿಸಿದ್ದರೆ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಇತ್ತು ಎಂಬುವುದು ಕಾಂಗ್ರೇಸ್ ಪಕ್ಷದ ಅಂಗಳದಲ್ಲಿ ಕೇಳಿ ಬರುತ್ತಿದೆ.
ಕೋಲಾರ ಲೋಕಸಭಾ ಮಾಜಿ ಸಂಸದ ಹಾಗೂ ಹಾಲಿ ರಾಜ್ಯ ಆಹಾರ ಖಾತೆ ಸಚಿವ ಕೆ.ಹೆಚ್.ಮುನಿಯಪ್ಪ ಅವರನ್ನು ಬೇರೆ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಬೇರೆ ಜಿಲ್ಲೆಯ ಉಸ್ತುವಾರಿ ನೀಡಿದ್ದಾರೆಂದು ನಿರ್ಲಕ್ಷಿಸದೆ ಘಟಬಂಧನ್ ಜಿಲ್ಲಾ ಮುಖಂಡರು ಅವರನ್ನು ವಿಶ್ವಾಸಕ್ಕೆ ಪಡೆದು ಕೊಂಡು, ಚುನಾವಣಾ ಪ್ರಚಾರ ಕಾರ್ಯದಲ್ಲಿ ಜೊತೆಗೊಡಿಸಿ ಕೊಳ್ಳದೆ ದೊರವೇ ಇಟ್ಟು ತಾವೇ ಗೆಲ್ಲಿಸಿ ಕೊಳ್ಳುವ ಮೂಲಕ ಪ್ರತಿಷ್ಟೆ ಹೆಚ್ಚಿಸಿ ಕೊಳ್ಳಲು ಹೋಗಿ ಮುಖ ಭಂಗಕ್ಕೆ ಒಳಗಾಗಿದ್ದಾರೆ.
ಕಳೆದ ಚುನಾವಣೆಯಲ್ಲಿ ಸ್ವಯಂ ಪ್ರತಿಷ್ಠೆಗಾಗಿ ಘಟಬಂದನ್ ರಚಿಸಿ ಕೊಂಡು ಕಾಂಗ್ರೇಸ್ ಪಕ್ಷದ ಸಂಘಟನೆಯನ್ನು ನುಚ್ಚು ನೊರು ಮಾಡಿದ್ದಾರೆ. ಚುನಾವಣೆಯಲ್ಲಿ ಪರಸ್ಸರ ಕಾಲೆಳೆಯುವ ಆಟದಲ್ಲಿ ತೊಡಗಿಸಿ ಕೊಂಡು ಕಾಂಗ್ರೇಸ್ ಪಾಲಿಗೆ ಭಸ್ಮಸೂರರಾಗಿದ್ದರು.
ಕಾಂಗ್ರೇಸ್ ಪಕ್ಷದ ೫ ಶಾಸಕರಲ್ಲಿ ಹಾಗೂ ಮುಖಂಡರಲ್ಲಿ ಚುನಾವಣೆಯಲ್ಲಿ ಭಾರಿ ನಿರುತ್ಸಾಹ ಕಂಡು ಬರುತ್ತಿತ್ತು. ಅಲ್ಲದೆ ಕಾಂಗ್ರೇಸ್ ಅಭ್ಯರ್ಥಿಗೆ ಕೋಲಾರ ಕ್ಷೇತ್ರವು ಹೊಸದಾಗಿದ್ದು ಮುಖಂಡರುಗಳ ಪರಿಚಯವೇ ಇಲ್ಲವಾಗಿತ್ತು. ಕೋಲಾರದ ಕಾಂಗ್ರೇಸ್ ಇತಿಹಾಸವೇ ಅರಿಯದೆ, ಒಂದಿಬ್ಬರ ಶಾಸಕರ ಹಿಂದೆ ಮಾತ್ರ ತಿರುಗಾಡುತ್ತಿದ್ದರು. ಸಮರ್ಪಕವಾಗಿ ಕಾಂಗ್ರೇಸ್ ಕಾರ್ಯಕರ್ತರೊಂದಿಗೆ ಬೆರೆಯದೆ ಹೋದ ಹಿನ್ನಲೆಯಲ್ಲಿ ಬೇಕಾ ಬಿಟ್ಟಿ ಚುನಾವಣಾ ಪ್ರಚಾರವನ್ನು ಕಾಂಗೇಸ್ ಮಾಡಲಾಯಿತು,
ಅದರೆ ಎನ್.ಡಿ.ಎ. ಮೈತ್ರಿಯಲ್ಲಿ ಜೆ.ಡಿ.ಎಸ್. ಪಕ್ಷಕ್ಕೆ ಬಿಜೆಪಿ ಪಕ್ಷದ ಬೆಂಬಲವು ಆನೆಯ ಬಲ ತಂದು ಕೊಟ್ಟಿತು, ಅದೇ ರೀತಿ ಬಿಜೆಪಿ ಮತ್ತು ಜೆ.ಡಿ.ಎಸ್. ಮುಖಂಡರುಗಳು ಒಗ್ಗಟ್ಟು ಬಲವಾಗಿತ್ತು, ಒಮ್ಮತದಿಂದ ಕೆಲಸ ನಿರ್ವಹಿಸಿದರು, ಬಿಜೆಪಿ ಮತ್ತು ಜೆ.ಡಿ.ಎಸ್. ಪಕ್ಷದಲ್ಲಿ ಭಿನ್ನಮತ ಇದ್ದರು ಸಹ ಎನ್.ಡಿ.ಎ. ಮೈತ್ರಿಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿ, ಒಂದು ಸವಾಲ್ ಅಗಿ ಸ್ವೀಕರಿಸಿದ್ದರು, ಎಲ್ಲಾ ಭಿನ್ನಮತ, ಸ್ವಯಂ ಪ್ರತಿಷ್ಠೆಗಳನ್ನು ಬದಿಗೆ ಸರಿಸಿ ಮೋದಿಯ ಆಲೆಯಲ್ಲಿ ಮಾಜಿ ಸಂಸದ ನೇತ್ರತ್ವದಲ್ಲಿ ಎಲ್ಲಾ ಮಾಜಿ ಶಾಸಕರು ಶ್ರಮದಿಂದ ಪ್ರಚಾರ ಮಾಡಿದ ಹಿನ್ನಲೆಯಲ್ಲಿ ಎಲ್ಲರೂ ಸೇರಿ ಬಂಗಾರಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಎರಡು ಭಾರಿ ಜೆ.ಡಿ.ಎಸ್.ನಿಂದ ಸ್ವರ್ಧಿಸಿ ಸೋಲನ್ನಾಪ್ಪಿದ್ದರೂ ಸಹ ಈ ಭಾರ ಬಿಜೆಪಿ ಜೊತೆಗೆ ಮೈತ್ರಿಯಾದ ಹಿನ್ನಲೆಯಲ್ಲಿ ಎನ್.ಡಿ.ಎ. ಅಭ್ಯರ್ಥಿ ಮಲ್ಲೇಶ್ ಅವರನ್ನು ದಡ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.