ಸಂಗ್ವಾರ:ಸಾಲ ಬಾಧೆಯಿಂದ ರೈತ ಆತ್ಮಹತ್ಯೆ
ಸೈದಾಪುರ:ಜೂ.4:ಸಮೀಪದ ಸಂಗ್ವಾರ ಗ್ರಾಮದಲ್ಲಿ ನಿನ್ನೆ ತಡ ರಾತ್ರಿ ನಂಜುಂಡ ಬಸವರಾಜ ನಾಗಣ್ಣೋರ (25) ಯುವಕ ಸಾಲ ಬಾಧೆಯಿಂದ ನೇಣಿಗೆ ಶರಣಾದ ಘಟನೆ ನೆಡದಿದೆ.
ಮೃತ ರೈತನು 2.5 ಎಕರೆ ಜಮೀನು ಹೊಂದಿದ್ದೂ ನಾಲ್ಕು ಜನ ಮಕ್ಕಳಿದ್ದಾರೆ. ಕೃಷಿ ಚಟುವಟಿಕೆ ಮತ್ತು ಕುಟುಂಬ ನಿರ್ವಹಣೆಗೆ ಬ್ಯಾಂಕ ಹಾಗೂ ಸ್ನೇಹಿತರು, ಸಂಬಂದಿಕರ ಹತ್ತಿರ ಕೈಗಡದಿಂದಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದ. ಬೆಳೆ ಸರಿಯಾಗಿ ಬಾರದೆ ಸಾಕಷ್ಟು ನಷ್ಟ ಅನುಭವಿಸಿದ್ದನು. ಪ್ರಸ್ತುತ ಬಿತ್ತನೆಗಾಗಿ ಅವರಿವರ ಹತ್ತಿರ ಸಾಲ ಕೇಳಿದಾಗ ಯಾರು ಹಣ ನೀಡದಿದ್ದಾಗ ಮಾನಾಸಿಕವಾಗಿ ಕುಗ್ಗಿ ಸಾಲದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತ ರೈತನ ಹೆಂಡತಿ ತಾಯಮ್ಮ ತಮ್ಮ ಅಳಲನ್ನು ತೋಡಿಕೊಂಡಳು. ಘಟನಾ ಸ್ಥಳಕ್ಕೆ ಪಿಐ ಸುರೇಶ.ಎಸ್.ತಳವಾರ, ಅಪರಾಧ ವಿಭಾಗದ ಪಿಎಸ್‍ಐ ಅಲ್ಲಾಭಕ್ಷಾ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದೂ, ಪ್ರಕರಣ ಸೈದಾಪುರ ಪೊಲೀಸ ಠಾಣೆಯಲ್ಲಿ ದಾಖಲಾಗಿದೆ.