ಶ್ರೀರಾಮುಲು ಸೋಲಿಗೆ ಅನುಕಂಪವಿದೆ ಎಂದ ನಾಗೇಂದ್ರ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು ಅವರ ಸೋಲಿಗೆ ನನ್ನ ಅನುಕಂಪವಿದೆ ಎಂದು ಸಚಿವ ನಾಗೇಂದ್ರ ಹೇಳಿದ್ದಾರೆ.
ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿನ ರೂವಾರಿ ಸಚಿವ ನಾಗೇಂದ್ರ ಎಣಿಕೆ ಕೇಂದ್ರದ ಬಳಿ ಮಾತನಾಡಿ. ಈ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದ ನಾಗೇಂದ್ರ. ನಾನು ಅಂದೇ ಹೇಳಿದ್ದೆ ಬಳ್ಳಾರಿ ಗೆದ್ದು ಸೋನಿಯಾಗಾಂಧಿಗೆ ಗಿಫ್ಟ್ ಕೊಡ್ತೇವೆ ಎಂದು ಈಗ ಗಿಫ್ಟ್ ಕೊಟ್ಟಿದ್ದೇವೆಂದರು.
ಬಿಜೆಪಿ ದುರಾಡಳಿತವೇ ಈ ಸೋಲಿಗೆ ಕಾರಣ. ಆದರೆ ಶ್ರೀರಾಮುಲು ಬಗ್ಗೆ ನನಗೆ ಅನುಕಂಪವಿದೆ. ಶ್ರೀರಾಮುಲು ನಾವು ಜೊತೆಗಿದ್ದೆವು. ಸ್ನೇಹಿತರು ಅಣ್ಣತಮ್ಮಂದಿರು ಆದರೆ ರಾಜಕೀಯವಾಗಿ ವಿರೋಧಿಗಳೆಂದರು.
ಈ ಗೆಲುವಿಗೆ ಪಕ್ಷದ ಮುಖಂಡರುಗಳಾದ ಮಲ್ಲಿಕಾರ್ಜುನ
ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಎಲ್ಲರು ಈ ಗೆಲುವಿಗೆ ಕಾರಣರಾಗಿದ್ದಾರೆಂದರು.
ರಾಜಿನಾಮೆ ಕೊಡೋ ಪ್ರಶ್ನೆಯೇ ಇಲ್ಲ:
ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ಪ್ರಕರಣದಲ್ಲಿ ನನಗೆ ರಾಜೀನಾಮೆ ಕೊಡುವಂತೆ ಒತ್ತಡವೇ ಇಲ್ಲ.ನಾನು ರಾಜಿನಾಮೆ ಕೊಡೋ ಪ್ರಶ್ನೆಯೇ ಇಲ್ಲ.
ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಲು ಈಗಾಗಲೇ ಎಸ್ ಐ ಟಿ ಗೆ ಕೊಡಲಾಗಿದೆ. ಎಸ್ ಐ ಟಿ ಗೆ ಕೊಡುವಂತೆ ಒತ್ತಾಯ ಮಾಡಿದ್ದೇ ನಾನು.
ಭ್ರಷ್ಟಾಚಾರಿಗಳನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದರು.