ಅಕ್ರಮ ಮದ್ಯ ಮಾರಾಟ: ಬಂಧನ
ಕಲಬುರಗಿ,ಜೂ.4-ಡಬರಾಬಾದ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಬ್ ಅರ್ಬನ್ ಪೊಲೀಸ್ ಠಾಣೆಯ ಪಿಐ ಮೊಹಮ್ಮದ್ ಫಸಿಯೋದ್ದಿನ್, ಸಿಬ್ಬಂದಿಗಳಾದ ಸುಧೀರ, ಜಾವೀದ್, ವಿಶಾಲ ಅವರು ದಾಳಿ ನಡೆಸಿ ದರ್ಶನ ಡಾಬಾದ ಮಾಲಿಕ ಶರಣಸಿರಸಿಯ ವಿನೋದಕುಮಾರ ಉದಯಕುಮಾರ ಎಂಬಾತನನ್ನು ಬಂಧಿಸಿ 1365 ರೂ.ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆ. ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.