ಜೂಜಾಟ: 6 ಜನರ ಬಂಧನ
ಕಲಬುರಗಿ,ಜೂ.4-ಪಾಣೆಗಾಂವ ತಾಂಡಾದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಫರಹತಾಬಾದ ಪೊಲೀಸ್ ಠಾಣೆ ಪಿಐ ಬಾಲಚಂದ್ರ ಲಕ್ಕಂ, ಸಿಬ್ಬಂದಿಗಳಾದ ರಾಜಕುಮಾರ, ಕಲ್ಯಾಣಕುಮಾರ, ಆನಂದ ಮತ್ತು ಮಂಜುನಾಥ ಅವರು ದಾಳಿ ನಡೆಸಿ 6 ಜನರನ್ನು ಬಂಧಿಸಿದ್ದಾರೆ.
ಸಿದ್ದು ಹೂಗಾರ, ಶಕ್ತಿ ಚವ್ಹಾಣ್, ಅಂಬ್ರೇಶ್ ಹೂಗಾರ, ಮಹೇಶ ಎಳೆಮೆಲೆ, ನಾಗರಾಜ ಹೂಗಾರ, ಸಿದ್ದಯ್ಯ ಮಠಪತಿ ಎಂಬುವವರನ್ನು ಬಂಧಿಸಿ 7,500 ರೂ.ನಗದು ಮತ್ತು 52 ಇಸ್ಪಿಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ. ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.