ದಲಿತ ಮಹಿಳೆ ಹಾಗೂ ಮಕ್ಕಳ ಅಪಹರಣ ಹಿಂದೂಪರ ಸಂಘಟನೆಯ ಮುಖಂಡರ ಭೇಟಿ
ಕೊಲ್ಹಾರ:ಜೂ.4: ಪಟ್ಟಣದ ವಿವಾಹಿತ ದಲಿತ ಮಹಿಳೆ ಚಂದ್ರಭಾಗ ಹುಗ್ಗೆನವರ ಹಾಗೂ ಅವಳ ಮೂವರು ಮಕ್ಕಳನ್ನು ಮುಸ್ಲಿಂ ಸಮಾಜದ ಅಬ್ದುಲಗಫಾರ ಕಲಾದಗಿ ಎಂಬ ಯುವಕನೂರ್ವ ಅಪಹರಿಸಿರುವುದರ ಹಿಂದೆ ಲವ್ ಜಿಹಾದ್ ಷಡ್ಯಂತ್ರ ಎದ್ದು ಕಾಣುತ್ತಿದೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಹಿಂದೂಪರ ಸಂಘಟನೆಯ ಮುಖಂಡರ ನಿಯೋಗದೊಂದಿಗೆ ಅಪಹೃತ ಮಹಿಳೆಯ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಪಟ್ಟಣದ ಹಿಂದೂ ಸಮುದಾಯದ ಚಂದ್ರಭಾಗ ವಿಠ್ಠಲ ಹುಗ್ಗೆನವರ, ಆಕೆಯ ಮಕ್ಕಳಾದ ಪ್ರಥಮ, ಸಜನಿ, ಸಾನ್ವಿ ಎನ್ನುವವರ ಅಪಹರಣವಾಗಿದೆ. ಅಪಹೃತರನ್ನು ಪತ್ತೆ ಮಾಡುವಲ್ಲಿ ಪೆÇಲೀಸ ಇಲಾಖೆ ವಿಫಲವಾಗಿದೆ. ಅಪಹರಣ ಕೃತ್ಯದ ಹಿಂದಿರುವ ಶಕ್ತಿಗಳನ್ನ ಪತ್ತೆ ಹಚ್ಚಬೇಕಾಗಿದೆ ಎಂದರು.
ಈ ಕೃತ್ಯದ ಹಿಂದೆ ಪಟ್ಟಣದ ಎಂ.ಆರ್ ಕಲಾದಗಿ ಎನ್ನುವ ವ್ಯಕ್ತಿ ಹಾಗೂ ಇನ್ನು ಕೆಲವರು ಪ್ರಚೋದನೆ ನೀಡಿರುವ ಮಾಹಿತಿ ದೊರಕಿದ್ದು ಎಂ.ಆರ್ ಕಲಾದಗಿ ಎನ್ನುವ ವ್ಯಕ್ತಿ ಪದೇ ಪದೇ ಹಿಂದೂ ಸಮಾಜವನ್ನ ಕೆಣಕುವ ಕೆಲಸ ಮಾಡುತ್ತಿದ್ದು ಹಿಂದೂ ಸಮಾಜ ಆತನಿಗೆ ಪ್ರತ್ಯುತ್ತರ ನೀಡಲಿದೆ ಎಂದು ಅವರು ಎಚ್ಚರಿಕೆ ನೀಡಿದರು.
ಅಪಹೃತ ಚಂದ್ರಭಾಗ ಹುಗ್ಗೆನವರ ಚಿಕ್ಕಪ್ಪ ಸಿಂಧೂರ ಬ್ಯಾಲ್ಯಾಳ ಮಾತನಾಡಿ ನಮ್ಮ ಅಣ್ಣನ ಮಗಳ ಹಾಗೂ ಮೊಮ್ಮಕ್ಕಳ ಅಪಹರಣವಾಗಿದೆ ಮುಸ್ಲಿಂ ಸಮುದಾಯದ ಅಬ್ದುಲಗಫಾರ ಕಲಾದಗಿ ಎನ್ನುವ ಯುವಕ ಅಪಹರಿಸಿದ್ದು. ಈ ಬಗ್ಗೆ ದೂರ ನೀಡಲಾಗಿಯು ಕೂಡ ಪ್ರಯೋಜನವಾಗಿಲ್ಲ. ಪೆÇಲೀಸ ಅಧಿಕಾರಿಗಳು ಯುವಕನ ಸಂಬಂಧಿ ಎಂ.ಆರ್ ಕಲಾದಗಿ ಅವರಿಂದ ದುಡ್ಡು ಕೊಡಿಸುತ್ತೆವೆ ಎಂದು ಹೇಳುತ್ತಿದ್ದಾರೆ ನಮಗೆ ದುಡ್ಡು ಬೇಡ, ನಮ್ಮ ಮಗಳು ಹಾಗೂ ಮೊಮ್ಮಕ್ಕಳು ಬೇಕು ಎಂದ ಅಳಲು ತೋಡಿಕೊಂಡರು.