ಬುದ್ಧ, ಬಸವ, ಅಂಬೇಡ್ಕರ್ ರವರ ಜಯಂತೋತ್ಸವ
ಕಲಬುರಗಿ:ಜೂ.4: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸರ್ವರಿಗೂ ಸಾಮಾಜಿಕ ನ್ಯಾಯ, ಮಹಿಳಾ ಸಮಾನತೆ ಮತ್ತು ಸಮಾನ ನಾಗರಿಕ ಹಕ್ಕುಗಳನ್ನು ಸಂವಿಧಾನದ ಮೂಲಕ ನೀಡಿ ಭಾರತದ ಐಕ್ಯತೆಯನ್ನು ಕಾಪಾಡಿದ್ದಾರೆ. ಡಾ. ಅಂಬೇಡ್ಕರ್ ತತ್ವದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಸದೃಢ ಭಾರತ ನಿರ್ಮಿಸಬೇಕೆಂದು ದಕ್ಷಿಣ ಮತಕ್ಷೇತ್ರ ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.
ನಗರದ ಎಂಎಸ್‍ಕೆ ಮಿಲ್ ಜಿಡಿಎ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ ಬುದ್ಧ, ಬಸವ, ಅಂಬೇಡ್ಕರ್ ರವರ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಡಾ. ಅಂಬೇಡ್ಕರ್ ಭಾರತ ದೇಶದ ಸಮಾನತೆಯ ಹರಿಕಾರ ಎಂದರು.
ಮುಖ್ಯ ಭಾಷಣಕಾರರಾದ ಚಂದ್ರಶೇಖರ್ ಕಟ್ಟಿಮನಿ ಮಾತನಾಡಿ ಅಂಬೇಡ್ಕರ್ ಚಿಂತನೆಗಳು ಯುವಕರಿಗೆ ಸದಾ ಸ್ಫೂರ್ತಿದಾಯಕ ಎಂದರು. ಡಾ. ರಾಜಶೇಖರ್ ಮಾಂಗ್ ಕ್ರಾಂತಿ ಗೀತೆಗಳನ್ನು ಹಾಡಿ ಜನರನ್ನು ಜಾಗೃತಿಗೊಳಿಸಿದರು.
ಪೂಜ್ಯ ಭಿಕ್ಕುಣಿ ಸುಮನ್ ಆರ್ಯಜಿ ಮತ್ತು ಪೂಜ್ಯ ಭಂತೆ ವರಜ್ಯೋತಿ ಸಾನಿಧ್ಯ ವಹಿಸಿದ್ದರು. ಜಗನ್ನಾಥ್ ತೇಲ್ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಮಹಾಪೌರ ಬಾಬು ಒಂಟಿ, ವಿಜಯಕುಮಾರ್ ಸಾತನೂರ್, ಮಲ್ಲಿಕಾರ್ಜುನ್ ಮದಾನಿ, ಅಶೋಕ್ ತಳಕೇರಿ, ಡಾ.ಚಂದ್ರಶೇಖರ್ ದೊಡ್ಡಮನಿ, ಎಚ್.ಎಸ್ ಬೇನಾಳ್, ಗಣಪತಿ ಬಬಲಾದ್,ಪ್ರವೀಣ್ ಧೂಳೆ ಮತ್ತು ಸತೀಶ್ ಸಜ್ಜನ್ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಎಂಬಿಬಿಎಸ್, ಐಐಟಿ, ಬಿಇ, ಬಿಸ್ಸಿ, ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಮುಂತಾದ ಪದವಿಗಳಲ್ಲಿ ಅತ್ತುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ರತ್ನಾ ಆಲೂಕರ್ ಮತ್ತು ವಿನ್ನಿ ನಾಡಗೇರಿ ಬುದ್ಧ ಗೀತೆ ಹಾಡಿದರು.