ನಿವೃತ್ತಿ ಜೀವನವನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಿ : ಅರವಿಂದ ಕುಲಕರ್ಣಿ
ಬೀದರ:ಜೂ.4:ವೃತ್ತಿ ಜೀವನದಲ್ಲಿ ಅನೇಕ ಜವಾಬ್ದಾರಿಗಳು ಮತ್ತು ಒತ್ತಡಗಳನ್ನು ಎದುರಿಸಬೇಕಾಗುತ್ತದೆ, ಅದರೊಂದಿಗೆ ಕೌಟುಂಬಿಕ ಜೀವನದ ಜವಾಬ್ದಾರಿಯು ಕೂಡ ಇರುವುದರಿಂದ, ಪ್ರತಿ ದಿವಸ ಒಂದೊಂದು ಸಮಸ್ಯೆಯನ್ನು ಎದುರಿಸುತ್ತಾ ಅವುಗಳಿಗೆ ಪರಿಹಾರ ಹುಡುಕ ಬೇಕಾಗುತ್ತದೆ. ನಿವೃತ್ತಿಯಾದ ನಂತರ ವ್ಯಕ್ತಿಯು ಯಾವುದೇ ಕೆಲಸವನ್ನು ಸ್ವತಂತ್ರವಾಗಿ ಮಾಡಬಹುದಾಗಿದೆ. ಇದುವರೆಗೆ ತಾವುಗಳು ಸಲ್ಲಿಸಿರುವ ಸೇವೆಯ ಫಲವನ್ನು ತಮ್ಮ ಜೀವಿತಾವಧಿಯವರೆಗೆ ಸರ್ಕಾರವು ಪಿಂಚಣಿಯ ರೂಪದಲ್ಲಿ ನೀಡುತ್ತದೆ. ಮುಂದಿನ ಜೀವನವನ್ನು ಸುಗಮವಾಗಿ ಸಾಗುವ ಸಲುವಾಗಿ ದೈನಂದಿನ ಜೀವನದಲ್ಲಿ ಯೋಗ ಪ್ರಾಣಾಯಾಮ ಧ್ಯಾನ ಮುಂತಾದವುಗಳನ್ನು ಪ್ರತಿನಿತ್ಯ ಅಳವಡಿಸಿ ಕೊಳ್ಳಬೇಕು. ಪ್ರತಿನಿತ್ಯ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಎಂದು ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಅರವಿಂದ ಕುಲಕರ್ಣಿ ಅವರು ಅಭಿಪ್ರಾಯಪಟ್ಟರು. ಅತಿಥಿಗಳಾದ ನಿವೃತ್ತ ಹಿರಿಯ ಶಿಕ್ಷಕರಾದ ಶ್ರೀ ಕಿಶನ್ ಸಿಂಗ್ ರವರು ಮಾತನಾಡಿ ನಿವೃತ್ತಿ ಹೊಂದಿದವರು ಸಮಯವನ್ನು ವ್ಯರ್ಥ ಮಾಡದೆ ಉಳಿದ ಸಮಯವನ್ನು ರಾಷ್ಟ್ರ ಹಿತಕ್ಕಾಗಿ ಸಮಾಜ ಸೇವೆಗೆ ಸಮರ್ಪಣೆ ಮಾಡಬೇಕು. ನಿರಂತರವಾಗಿ ಕಾರ್ಯ ಚಟುವಟಿಕೆಗಳಲ್ಲಿ ಇರುವುದರಿಂದ ಮುಪ್ಪು ಮತ್ತು ಸಾವಿನ ಭಯದಿಂದ ದೂರವಿರಬಹುದು. ಸದಾ ಲವಲವಿಕೆಯಿಂದ ಇರುವುದರಿಂದ ಮನುಷ್ಯನ ಆಯುಷ್ಯ ವೃದ್ಧಿಯಾಗುತ್ತದೆ ಎಂದು ತಿಳಿಸಿದರು ಅವರು ಬೀದರಿನ ಭವಾನಿ ಕಲ್ಯಾಣ ಮಂಟಪದಲ್ಲಿ ಜರುಗಿದ ರಾಮರಾವ ಕುಲಕರ್ಣಿ ಉಜನಿ, ನಿವೃತ್ತ ಶಿಕ್ಷಕರ ಬೀಳ್ಕೊಡುಗೆ ಸಮಾರಂಭ ದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಅತಿಥಿಗಳಾದ ರವೀಂದ್ರ ಕುಲಕರ್ಣಿ ಅವರು ಮಾತನಾಡಿ ನಿವೃತ್ತರಾದ ಪ್ರತಿಯೊಬ್ಬರು ಪರಿಸರ ಜಾಗೃತಿ ಅಭಿಯಾನ, ಸಸಿಗಳನ್ನು ನೆಡುವುದು ಅವುಗಳ ಪಾಲನೆ ಪೆÇೀಷಣೆಗಳನ್ನು ಮಾಡಬೇಕು ಎಂದು ಕರೆ ಕೊಟ್ಟರು. ತಮ್ಮ ಅನುಭವಿ ಜೀವನವನ್ನು ರಾಷ್ಟ್ರ ಅಭಿಮಾನಕ್ಕಾಗಿ ,ರಾಷ್ಟ್ರ ಸೇವೆಗಾಗಿ ಸಮರ್ಪಣೆ ಮಾಡಿದಲ್ಲಿ ತಮ್ಮ ಜೀವನದ ಮೌಲ್ಯವು ಇತರರಿಗೆ ಆದರ್ಶ ದಾಯಕವಾಗುತ್ತದೆ ಎಂದು ನುಡಿದರು. ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆ ಬೀದರ್ ವತಿಯಿಂದ ರಾಮ್ ಕುಲಕರ್ಣಿ ಯವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಮರಾವ ಕುಲಕರ್ಣಿ ಉಜನಿಯ ವರು, ಶಿಕ್ಷಕರ ವೃತ್ತಿಯು ಪವಿತ್ರವಾಗಿದೆ.ಪ್ರಾಮಾಣಿಕವಾಗಿ ಹಾಗೂ ನಿಷ್ಠೆಯಿಂದ ಕೆಲಸ ಮಾಡಿದಾಗ ಮಾತ್ರ ಆ ವೃತ್ತಿಗೆ ನ್ಯಾಯ ಒದಗಿಸಿ ಕೊಡಬಹುದೆಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ರಾಮರಾವ್ ರವರಿಗೆ ಸಸಿಯನ್ನು ಉಡುಗೊರೆ ಯಾಗಿ ನೀಡಿ, ಪರಿಸರ ಜಾಗೃತಿಯ ಸಂಕಲ್ಪವನ್ನು ಬೋಧಿಸಲಾಯಿತು. ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಅನಿಲ್ ಕುಲಕರ್ಣಿ, ವಿಠಲರಾವ್ ರಾಜಕುಮಾರ್ ಬಂಗೂರ ನಸಿರ್ಂಗ್ ಕುಲಕರ್ಣಿ ಶ್ರೀಮತಿ ಸುನಿತಾ ,ರೇಣುಕಾ, ಲತಾ , ಅಂಬಾದಾಸರಾವ, ಕಿಶನ್ ರಾವ್, ಗೋವಿಂದ ರೆಡ್ಡಿ, ರಾಘವೇಂದ್ರ ವೈಜಿನಾಥ್ ರಾವ್, ಉಪಸ್ಥಿತರಿದ್ದರು.