ಗುರು ನಾನಕ ಶಾಲೆಯಲ್ಲಿ ಪ್ರತಿಭಾವಂತ ಮಕ್ಕಳಿಗೆ ಸನ್ಮಾನ
ಬೀದರ:ಜೂ.4:10ನೇ ಸಿಬಿಎಸ್‍ಇ ಪರೀಕ್ಷೆಯಲ್ಲಿ ಶಾಲೆಗೆ ಟಾಪರ್ ಆಗಿ ಹೊರಹೊಮ್ಮಿದ ಪ್ರತಿಭಾವಂತ ಮಕ್ಕಳಿಗೆ ಶಾಲೆಯ ಅಧ್ಯಕ್ಷ ಡಾ|| ಎಸ್. ಬಲಬೀರ ಸಿಂಗ್ ಮತ್ತು ಉಪಾಧ್ಯಕ್ಷೆಯರಾದ ಶ್ರೀಮತಿ ರೇಷ್ಮಾ ಕೌರ ಅವರು ಆತ್ಮೀಯವಾಗಿ ಸನ್ಮಾನಿಸಿ ಶುಭಹಾರೈಸಿದರು.
ಶಾಲೆಯಲ್ಲಿ ಟಾಪರ್ ಎನಿಸಿಕೊಂಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆÀ ಇಂದು ಸೋಮುವಾರÀದಂದು ಸನ್ಮಾನಿಸಿ ಮಾತನಾಡಿದ ಡಾ|| ರೇಷ್ಮಾ ಕೌರ ಅವರು ವಿದ್ಯಾರ್ಥಿಗಳ ಈ ಅದ್ಭುತ ಸಾಧನೆಗೆ ಅವರ ಸತತವಾದ ಕಠಿಣ ಪರಿಶ್ರಮ, ಪೋಷಕರ ಸಹಕಾರ ಹಾಗೂ ಶಿಕ್ಷಕರ ಪರಿಣಾಮಕಾರಿ ಬೋಧನೆ ಮತ್ತು ಆಡಳಿತ ಮಂಡಳಿಯ ಸುವ್ಯವಸ್ಥಿತ ಮಾರ್ಗದರ್ಶನದಿಂದ ಸಾಧ್ಯವಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಮಕ್ಕಳು ಈ ಸಾಧನೆ ಒಂದೆ ದಿನದಲ್ಲಿ ಕಷ್ಟಪಟ್ಟು ಮಾಡಿದಲ್ಲ. ಇದು ನಿರಂತರವಾದ ಅವರ ಪರಿಶ್ರಮ ಹಾಗೂ ತಂದೆ-ತಾಯಿಗಳ, ಶಿಕ್ಷಕ ವೃಂದದವರ ಸತತÀ ಸಹಕಾರ, ಬೋಧನೆಗಳ ಪರಿಣಾಮವಾಗಿ ಸಾಧ್ಯವಾಗಿದೆ. ನಮ್ಮ ಶಾಲೆ ಬುನಾದಿಯಿಂದಲೇ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದಲೇ ಈ ರೀತಿಯ ಪ್ರತಿಭಾವಂತ ಮಕ್ಕಳು ಹೊರ ಹೊಮ್ಮುವುದಕ್ಕೆ ಸಾಧ್ಯವಾಗುತ್ತಿದೆ. ನಮ್ಮ ಆಡಳಿತ ಮಂಡಳಿಯ ಗುರಿಯು ಇದೇ ಆಗಿದೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಇಂತಹ ಪ್ರತಿಭಾವಂತ ಮಕ್ಕಳನ್ನು ಹುಟ್ಟು ಹಾಕಿ ದೇಶ ಸೇವೆಗೆ ಕಳುಹಿಸುವ ಸಂಕಲ್ಪ ನಮ್ಮದಾಗಿದೆ ಎಂದು ತಮ್ಮ ಕನಸ್ಸನ್ನು ಬಿಚ್ಚಿಟ್ಟ ಅವರು ಸನ್ಮಾನಿತ ಮಕ್ಕಳು ಮುಂದಿನ ಜೀವನವನ್ನು ಉಜ್ವಲಗೊಳಿಸುವದರತ್ತ ಗಮನ ಹರಿಸಿ ಯಶಸ್ಸು ಸಾಧಿಸಿ, ತಂದೆ ತಾಯಿಗಳಿಗೆ, ಶಾಲೆಗೆ ಕೀರ್ತಿ ತರುವಂತೆ ಶುಭಹಾರೈಸಿದರು.
ತಮ್ಮ ಮುಂದಿನ ಭವಿಷ್ಯ ರೂಪಿಸಿಕೊಳ್ಳುವ ದಿನಗಳು ಇದೀಗ ಪ್ರಾರಂಭವಾಗಿದ್ದು, ತಾವು ಸರಿಯಾದ ದಿಕ್ಕಿನಲ್ಲಿ ಯೋಚಿಸಿ ಹೆಚ್ಚೆ ಇಡುವಂತೆ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ತಿಳಿಹೇಳಿದರು. ಮುಂದು ಎರಡು ವರ್ಷಗಳು ತಮ್ಮ ಭವಿಷ್ಯ ರೂಪಿಸುವ ವರ್ಷಗಳಾಗಿದ್ದು ಬಹು ಎಚ್ಚರಿಕೆಯಿಂದ ಅದನ್ನು ನಿಭಾಯಿಸಿಕೊಂಡು ಆಕಾಶದ ಎತ್ತರಕ್ಕೆ ಬೆಳೆಯುವಂತೆ ಕರೆಕೊಟ್ಟರು.
ವಿದ್ಯಾರ್ಥಿ ವರ್ಷಾ ಹಾಗೂ ವೈಷ್ಣವಿ ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತ ಈ ಸಾಧನೆಗೆ ಪೋಷಕರ, ಶಿಕ್ಷಕರ ಹಾಗೂ ತನ್ನ ಕಠಿಣ ಪರಿಶ್ರಮ ಕಾರಣವಾಗಿದೆ. ತಮ್ಮ ಈ ಸಾಧನೆಗೆ ಸನ್ಮಾನಿಸಿ ಗೌರವಿಸುತ್ತಿರುವುದು ನಮಗೆ ಮತ್ತಷ್ಟು ಪ್ರೇರಣೆ ನೀಡಿದಂತಾಗಿದೆ. ಈ ಶಾಲೆಯಲ್ಲಿ ಶಿಕ್ಷಕರು ನೀಡುತ್ತಿರುವ ಗುಣಮಟ್ಟದ ಶಿಕ್ಷಣವೆ ಇದಕ್ಕೆ ಸಾಕ್ಷಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ನಾಲಿನಿ ಡಿ.ಜಿ., ಮುಖೋಪಾಧ್ಯಯರಾದ ಶ್ರೀಮತಿ ಆರೀಫ್ ಹಾದಿ, ಡೀನರಾದ ಹನುಮಾನ, ಅಮಜದ ಅಲಿ ಹಾಗೂ ಪ್ರತಿಭಾವಂತ ಮಕ್ಕಳ ಪೋಷಕರು ಹಾಗೂ ಶಿಕ್ಷಕರ ವೃಂದ ಉಪಸ್ಥಿತರಿದ್ದರು.