ಕಾರ್ ರೇಸ್‌ನಲ್ಲಿ ಕನ್ನಡಿಗ ಯಶಸ್ ನಾಯಕ್‌ಗೆ ೩ನೇ ಸ್ಥಾನ
ಬೆಂಗಳೂರು, ಜೂ. ೪- ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದ ಕಾರ್ ರೇಸ್‌ನಲ್ಲಿ ಕರ್ನಾಟಕದಿಂದ ಯಶಸ್ ನಾಯಕ್‌ರವರು ಭಾಗವಹಿಸಿ, ಕಾರ್ ರೇಸ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಗಳಿಸಿ ಪ್ರಶಸ್ತಿ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಯಶಸ್ ನಾಯಕ್ ಕಾರ್ ರೇಸ್‌ನಲ್ಲಿ ಭಾಗವಹಿಸಲು ಮತ್ತು ಉತ್ತಮ ಚಾಲನೆ ಮಾಡಲು ತರಭೇತಿ ಮತ್ತು ಸುರಕ್ಷತೆ ಸಾಧನಗಳ ಆಳವಡಿಸಿಕೊಂಡು ರೇಸ್ ನಲ್ಲಿ ಭಾಗವಹಿಸಿಬೇಕು ಸತತ ಪರಿಶ್ರಮವಿದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.
ನಗರ ಪ್ರದೇಶದಲ್ಲಿ ಯುವಕರು ಅತಿವೇಗದಿಂದ ಯಾವುದೇ ತರಭೇತಿ ಇಲ್ಲದೇ ಚಾಲನೆ ಮಾಡುತ್ತಾರೆ, ಇದರಿಂದ ಅವರಿಗೂ ಮತ್ತು ಎದುರು ಬರುವ ವಾಹನಗಳಿಗೂ ಅಪಾಯ. ಕಾರ್ ರೇಸ್ ಸ್ಪರ್ಧೆ ಮಾಡುವ ಸ್ಥಳ ಅತ್ಯಂತ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ತಿಳಿಸಿದರು.
ದೇಶಾದ್ಯಂತ ೫೨ ಸ್ಪರ್ಧಿಗಳು ಭಾಗವಹಿಸಿದ್ದರು, ೩ನೇ ಸ್ಥಾನ ಸಿಕ್ಕಿದ್ದು ಗಳಿಸಿದೆ, ಸರಿಸುಮಾರು ೧೮೦ ಕಿಲೋಮೀಟರ್ ರೇಸ್ ಆಗಿತ್ತು, ವಿವಿಧ ಹಂತಗಳಲ್ಲಿ ಜರುಗಿತು. ಈ ಪ್ರಶಸ್ತಿಯಿಂದ ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದ ಸಂತಸವಿದೆ ಎಂದರು.
ಯುವಕರು ಸರಿಯಾದ ತರಬೇತಿ ಪಡೆಯಬೇಕು. ರೇಸ್‌ನಲ್ಲಿ ಕಾರ್ ಓಡಿಸಿದಂತೆ ರಸ್ತೆಯಲ್ಲಿ ಓಡಿಸಬೇಡಿ ಎಂದು ಕಿವಿಮಾತು ಹೇಳಿದ್ದಾರೆ.
ಕಾರ್ ಸ್ಪರ್ಧೆಯಲ್ಲಿ ಉತ್ತಮ ಭವಿಷ್ಯವಿದೆ, ಮಾಜಿ ಶಿಕ್ಷಣ ಸಚಿವರು, ಶಾಸಕರಾದ ಎಸ್.ಸುರೇಶ್ ಕುಮಾರ್‌ರವರು ನಮಗೆ ಸಹಕಾರ, ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಹೇಳಿದರು.
ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದ ಕಾರ್ ರೇಸ್‌ನಲ್ಲಿ ಭಾಗವಹಿಸಿದ್ದ ಕನ್ನಡಿಗ ಯಶಸ್ ನಾಯಕ್ ೩ನೇ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.