ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮತಮುದ್ರೆ
ಸಂಜೆವಾಣಿ ನ್ಯೂಸ್
ಮೈಸೂರು, ಜೂನ್ 4:- ದಕ್ಷಿಣ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮೈಸೂರು, ಚಾಮರಾಜನಗರ, ಹಾಸನ ಹಾಗೂ ಮಂಡ್ಯ ಜಿಲ್ಲೆಯ ಮತಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಗಳವರೆಗೆ ಶೇ.88.07ರಷ್ಟು ಮತದಾನ ನಡೆಯಿತು.
ಈ ನಾಲ್ಕು ಜಿಲ್ಲೆಗಳಿಂದ 11,988 ಪುರುಷ, 9,550 ಮಹಿಳಾ ಹಾಗೂ ತೃತೀಯ ಲಿಂಗಿ ಶಿಕ್ಷಕ ಮತದಾರರು ಸೇರಿ 21,549 ಶಿಕ್ಷಕ ಮತದಾರರು ಮತದಾನದ ಹಕ್ಕು ಹೊಂದಿದ್ದರು.
ದಕ್ಷಿಣ ಶಿಕ್ಷಕ ಕ್ಷೇತ್ರದ ಚುನಾವಣಾ ಕಣದಲ್ಲಿ 11 ಅಭ್ರ?ಥಿಗಳಿದ್ದು, ಕಾಂಗ್ರೆಸ್?ನಿಂದ ಮರಿತಿಬ್ಬೇಗೌಡ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿವೇಕಾನಂದ ನಡುವೆ ನೇರ ಪೈಪೆÇೀಟಿ ಇದ್ದು, ಈ ಹಿನ್ನೆಲೆಯಲ್ಲಿ ಇಬ್ಬರೂ ಅಭ್ಯರ್ಥಿಗಳು ವಿವಿಧ ಮತಕೇಂದ್ರಗಳಿಗೆ ತೆರಳಿ ಕೊನೆಯ ಹಂತದ ಮನವಿ ಮಾಡಿದರು.
ಮತ ಎಣಿಕೆ ಜೂನ್ 6ರಂದು ನಡೆಯಲಿದೆ. ಇಂದು ಬೆಳಗ್ಗೆ 8 ಗಂಟೆಯಿಂದ ಮೈಸೂರು ಜಿಲ್ಲೆಯ 20, ಚಾಮರಾಜನಗರದ 5, ಮಂಡ್ಯದ 9 ಹಾಗೂ ಹಾಸನ ಜಿಲ್ಲೆಯ 10 ಮತ ಕೇಂದ್ರಗಳಲ್ಲಿ ಮತದಾನ ಬಿರುಸಿನಿಂದ ನಡೆಯುತ್ತಿದ್ದು, ಮೈಸೂರು, ಮಂಡ್ಯ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳ ಒಳಗೊಂಡ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 21549 ಮತದಾರರ ಪೈಕಿ 18979 ಮತದಾರರು ತಮ್ಮ ಹಕ್ಕು ಚಲಾ ಯಿಸಿದ್ದಾರೆ. ಚಾಮರಾಜನಗರ 2181 ಮತದಾರರಿದ್ದು, 2012 ಮತದಾನ ಮಾಡಿದ್ದು ಶೇ. 92.25, ಹಾಸನದಲ್ಲಿ 3526 ಮತದಾರರಿದ್ದು 3242 ಮತದಾನವಾಗಿ ಶೇ. 91.95 , ಮಂಡ್ಯದಲ್ಲಿ 5403 ಮತದಾರರಲ್ಲಿ 4949 ಮತದಾನವಾಗಿ ಶೇ.91.06, ಮೈಸೂರಲ್ಲಿ 10439 ಮತದಾರರಿದ್ದು, 8776 ಮತದಾರರು ಮತದಾನ ಮಾಡಿದ್ದು, ಶೇ. 84.07 ಮತದಾನವಾಗಿದೆ.
ಆರಂಭದಲ್ಲಿ ಶಿಕ್ಷಕರು ಮತದಾನದಲ್ಲಿ ಭಾಗಿಯಾಗಲು ಬಹಳಷ್ಟು ಉತ್ಸಾಹ ತೋರಲಿಲ್ಲ. ಇದರಿಂದಾಗಿ ಮತದಾನ ಮಂದಗತಿಯಲ್ಲಿ ಸಾಗಿತು. ಜಿಲ್ಲೆಯ ಕೆಲ ತುಂತುರು ಮಳೆ ಸುರಿಯುತು. ಇದು ಮತದಾನಕ್ಕೆ ಅಡ್ಡಿ ಉಂಟು ಮಾಡಲಿಲ್ಲ. ಮತದಾರರಿಗೆ ಬಲಗೈ ತೋರುಬೆರಳಿಗೆ ಅಳಿಸಲಾಗದ ಶಾಯಿ ಹಾಕಲಾಯಿತು
ಈ ಚುನಾವಣೆಗೆ ಬ್ಯಾಲೇಟ್ ಪೇಪರ್ ಬಳಕೆ ಮಾಡಲಾಯಿತು. ಮತದಾರರು ಅಭ್ಯರ್ಥಿಗಳಿಗೆ ಪ್ರಾಶಸ್ತ್ಯದ ಮತಗಳನ್ನು ನೀಡಿದರು. ಈ ಚುನಾವಣೆಯಲ್ಲಿ ನೋಟಾ(ಮೇಲಿನ ಯಾರಿಗೂ ಮತವಿಲ್ಲ) ಚಲಾವಣೆಗೆ ಅವಕಾಶ ನೀಡಿರಲಿಲ್ಲ. ಕಳೆದ ಬಾರಿ ನೋಟಕ್ಕೆ ಅವಕಾಶ ನೀಡಲಾಗಿತ್ತು.
ಮತದಾನದ ವೇಳೆ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಇದರಿಂದಾಗಿ ಭಧ್ರತೆಯ ನಡುವೆ ಮತದಾನ ಶಾಂತಯುತವಾಗಿ ಸಾಗಿತು. ಮತಗಟ್ಟೆಗಳಿಗೆ ಹೆಚ್ಚಿನ ಭದ್ರತೆಯನ್ನು ಕಲ್ಪಿಸಲಾಗಿತ್ತು.
ಜಿಲ್ಲೆಯಲ್ಲಿ 20 ಮತಗಟ್ಟೆಗಳನ್ನು ತೆರೆಯಲಾಗಿತ್ತು. ಈ ಪೈಕಿ ಮೈಸೂರು ನಗರ ವ್ಯಾಪ್ತಿಯಲ್ಲೇ 12 ಮತಗಟ್ಟೆಗಳಿದ್ದವು. ನಗರದಲ್ಲಿರುವ ವಲಯವಾರು ಮತಗಟ್ಟೆಯನ್ನು ತೆರೆದಿದ್ದರಿಂದ ನಗರವಾಸಿ ಮತದಾರರಿಗೆ ಮತಚಲಾಯಿಸಲು ಹೆಚ್ಚಿನ ಅನುಕೂಲವಾಯಿತು.
ರಾಮಕೃಷ್ಣ ವಿದ್ಯಾಕೇಂದ್ರದ ಮತಗಟ್ಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ, ಜೆಡಿಎಸ್‍ಬಿಜೆಪಿ ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದ ಮತಯಾಚಿಸಿದರು. ಎಲ್ಲ ಮತಗಟ್ಟೆ ಕೇಂದ್ರದ ಸಮೀಪ ಜೆಡಿಎಸ್- ಬಿಜೆಪಿ ಮೈತ್ರಿ ಪಕ್ಷದ ಕಾರ್ಯಕರ್ತರು, ಪಕ್ಷದ ಅಭ್ಯರ್ಥಿ ಪ್ರಾಶಸ್ತ್ಯದ ಮತ ನೀಡುವಂತೆ ಕೈ ಮುಗಿದರೆ, ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಅಭ್ಯರ್ಥಿಗೆ ನೀಡುವಂತೆ ಕೋರಿದರು. ಪೆಂಡಾಲ್‍ಗಳನ್ನು ಹಾಕಿಕೊಂಡು, ಮತದಾರರಿಗೆ ಮತಗಟ್ಟೆ ಸಂಖ್ಯೆ ಮಾಹಿತಿ ಬರೆದುಕೊಟ್ಟರು.