ಉಪನ್ಯಾಸ ಕಾರ್ಯಕ್ರಮ
ಧಾರವಾಡ,ಜೂ4: ಕನ್ನಡ ಸೃಜನಶೀಲತೆ ಕಡಿಮೆಯಾಗಿದ್ದ ಸಂದರ್ಭದಲ್ಲಿ ಕನ್ನಡದ ಮೇಲೆ ಅಧಮ್ಯವಾದ ಪ್ರೀತಿಯನ್ನು ಹೊಂದಿದ್ದ ಬಿ.ಎಂ. ಶ್ರೀಯವರು ಇಂಗ್ಲೀಷನ ಕೆಲವು ಗೀತೆಗಳನ್ನು ಕನ್ನಡಕ್ಕೆ ಅನುವಾದಿಸಿದರು ಎಂದು ನಿವೃತ್ತ ಇಂಗ್ಲೀಷ ಪ್ರಾಧ್ಯಾಪಕ, ಸಾಹಿತಿ ಡಾ. ವಿ. ಟಿ. ನಾಯಕ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ.ಮಲ್ಲಿಕಾರ್ಜುನ ದತ್ತಿ ನಿಮಿತ್ತ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ `ಕನ್ನಡ ಸಾಹಿತ್ಯಕ್ಕೆಇಂಗ್ಲೀಷ ಪ್ರಾಧ್ಯಾಪಕರಕೊಡುಗೆ’ ವಿಷಯ ಕುರಿತು ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು ಬೇರೆ ಬೇರೆ ಪತ್ರಿಕೆಯಲ್ಲಿ ಪ್ರಕಟಗೊಂಡ ಅನುವಾದಿತ ಗೀತೆಗಳನ್ನು 1926 ರಲ್ಲಿ ಇಂಗ್ಲೀಷ ಗೀತೆಗಳು' ಎಂಬ ಶೀರ್ಷಿಕೆಯೊಂದಿಗೆ ಪ್ರಕಟಿಸಿದರು. ಕನ್ನಡ ಸಾಹಿತ್ಯದಲ್ಲಿ ಇದೊಂದು ಮೈಲುಗಲ್ಲಾಯಿತು ವಿಷಯ, ಛಂದೋ ವೈವಿಧ್ಯದ ದೃಷ್ಟಿಯಿಂದ ಈ ಕೃತಿಕನ್ನಡದ ಇತಿಹಾಸದಲ್ಲಿ ದಾಖಲೆಯಾಗಿದೆ. ಭಾವಗೀತೆ, ಸಣ್ಣಕಥೆ, ಕಾದಂಬರಿ, ಲಘು ಪ್ರಬಂಧ, ಅನುವಾದ ಸಾಹಿತ್ಯ ಮೊದಲಾದ ಪ್ರಭೇದಗಳಲ್ಲಿ ಇಂಗ್ಲೀಷ ಪ್ರಾಧ್ಯಾಪಕರು ಕನ್ನಡದಲ್ಲಿ ಸಾಹಿತ್ಯ ಕೃಷಿ ಮಾಡಿದ್ದನ್ನು ಕಾಣುತ್ತೇವೆ.ಕರುಣಾಳು ಬಾ ಬೆಳಕೆ ಮುಸುಕಿದಿ ಮಬ್ಬಿನಲಿ’ ಬಿ.ಎಂ.ಶ್ರೀಯವರು ಅನುವಾದಿಸಿದ ಈ ಕಾವ್ಯ ಉತ್ಕøಷ್ಟವಾಗಿದೆ. ಬೇರೆಯವರು ಅನುವಾದ ಮಾಡಲು ಇದೊಂದು ರಹದಾರಿಯಾಯಿತು. ನಾಟಕ ಸಾಹಿತ್ಯದಲ್ಲಿ ದುರಂತ ನಾಟಕಗಳ ಕೊರತೆ ಇತ್ತು.ಭಾರತೀಯ ಪರಂಪರೆಯಲ್ಲಿಇದ್ದ ಈ ಕೊರತೆಯನ್ನು ಬಿ.ಎಂ.ಶ್ರೀಯವರು ರನ್ನನ ಮಹಾಕಾವ್ಯಗಳ ಮೂಲಕ ರನ್ನದಗದಾಯುದ್ದದ ಧುರ್ಯೋದನ, ರಾಮಾಯಣದ ರಾವಣ ಇಂತಹ ಪಾತ್ರಗಳನ್ನು ದುರಂತದ ದೃಷ್ಟಿಯಿಂದ ನೋಡಿ ನಾಟಕ ರಚನೆಗೆ ಸೂಚನೆ ಕೊಟ್ಟರು.
ಎಸ್. ವ್ಹಿ. ರಂಗಣ್ಣಅವರು ಪಾಶ್ಚಾತ್ಯಗಂಭೀರ ನಾಟಕಗಳನ್ನು ರಚಿಸಿದರು.ಎ.ಎನ್. ಮೂರ್ತಿರಾಯರು ಲಲಿತ ಪ್ರಬಂಧಗಳನ್ನು, ಕೀರ್ತಿನಾಥಕುರ್ತಕೋಟಿ, ಕೆ.ವಿ. ತಿರುಮಲೇಶಇವರು ನಿತ್ಯಜೀವನದ ಘಟನೆಗಳ ಜೊತೆಗೆ ವಿಮರ್ಶಾತ್ಮಕದೃಷ್ಠಿಕೋನಗಳ ಹಿನ್ನೆಲೆಯಲ್ಲಿಅಂಕಣ ಬರಹಗಳನ್ನು ಪತ್ರಿಕೆಗಳಲ್ಲಿ ಬರೆಯತೊಡಗಿದರು.ಈ ಬರವಣಿಗೆ ಮನರಂಜನೆಅಥವಾಟೈಮಪಾಸ್‍ಗಾಗಿ ಬರೆದವುಗಳಲ್ಲ. ಗಂಭೀರವಾದ ವಿಷಯಗಳ ನಿರೂಪಣೆಇಲ್ಲಿಇರುವುದನ್ನುಕಾಣುತ್ತೇವೆ. ಕನ್ನಡ ಸಾಹಿತ್ಯದಲ್ಲಿ ವಡ್ಡಾರಾಧನೆ, ಪಂಚತಂತ್ರಗಳ ಕಥಾ ಪರಂಪರೆಇತ್ತು.ವಿ.ಕೃ.ಗೋಕಾಕ ಮಲ್ಲಿಕಾರ್ಜುನ ಹಿರೇಮಠ, ವೀಣಾ ಶಾಂತೇಶ್ವರ ವಿ.ಎನ್. ಇನಾಮದಾರ, ಶಾಂತಿನಾಥದೇಸಾಯಿ, ಲಂಕೇಶ, ಮೊದಲಾದವರು ಸಣ್ಣಕಥೆ, ಕಾದಂಬರಿಗಳನ್ನು ಬರೆದರು.ಕೆಲವು ಸಾಹಿತಿಗಳು ಇಂಗ್ಲೀಷನಿಂದಕನ್ನಡಕ್ಕೆಕನ್ನಡದಿಂದಇಂಗ್ಲೀಷಿಗೆಅನುವಾದವನ್ನು ಮಾಡಿದರು.ಚಂಪಾ, ಗಿರಡ್ಡಿ, ಯರವಿನತೆಲಿಮಠ, ಬಿ.ಆರ್.ಪೋಲಿಸಪಾಟೀಲ, ಸರೋಜಿನಿ ಶಿಂತ್ರಿ, ಕೆ.ಎಸ್. ಅಮೂರ, ಎ.ಎಕೆ.ರಾಮಾನುಜಮ್ ಮೊದಲಾದವರೆಲ್ಲಇಂಗ್ಲೀಷ ಸಾಹಿತ್ಯವನ್ನುಅಧ್ಯಯನ ಮಾಡಿದವರಾಗಿದ್ದುಉತ್ಕøಷ್ಟವಾದಕೊಡುಗೆಯನ್ನು ನೀಡಿಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಸಮಾರಂಭದಅಧ್ಯಕ್ಷತೆ ವಹಿಸಿದ್ದ ನಿವೃತ್ತಐ.ಎ.ಎಸ್. ಅಧಿಕಾರಿ ಜಿ. ವಿ.ಕೊಂಗವಾಡಅವರು, ಇಂಗ್ಲೀಷಅಧ್ಯಯನವನ್ನು ಮಾಡಿದ ನಾನು ಅನೇಕ ಇಂಗ್ಲೀಷ ಪ್ರಾಧ್ಯಾಪಕರು ಬರೆದಕನ್ನಡ ಸಾಹಿತ್ಯವನ್ನು ಓದಿ ನನ್ನಜ್ಞಾನವನ್ನು ಹೆಚ್ಚಿಸಿಕೊಂಡಿದ್ದೇನೆ. ಕೆಲವು ಪ್ರಾಧ್ಯಾಪಕರುಅನುವಾದ ಮಾಡಿದ ಸಾಹಿತ್ಯ ಮನಸ್ಸಿನ ಮೇಲೆ ಅಪಾರವಾದ ಪರಿಣಾಮ ಬೀರಿದ್ದುಂಟುಎಂದು ಹೇಳಿದರು.
ವೇದಿಕೆ ಮೇಲೆ ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದ, ಡಾ.ಮಲ್ಲಿಕಾರ್ಜುನ ಪಾಟೀಲ ಹಾಗೂ ದತ್ತಿದಾನಿ ಡಾ.ನಂದಾ ಪಾಟೀಲ ಉಪಸ್ಥಿತರಿದ್ದರು.
ಶಂಕರ ಕುಂಬಿ ಸ್ವಾಗತಿಸಿದರು.ಡಾ. ಮಹೇಶ ಹೊರಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ವೀರಣ್ಣಒಡ್ಡೀನ ವಂದಿಸಿದರು.
ಕಾರ್ಯಕ್ರಮದಲ್ಲಿ ಶಿವಾನಂದ ಭಾವಿಕಟ್ಟಿ, ಡಾ.ಸಿ.ಆರ್.ಯರವಿನತೆಲಿಮಠ, ಸಿ.ಎಂ.ಕುಂದಗೋಳ, ಸಿ.ಎಸ್. ಪಾಟೀಲ, ಎಸ್.ಜಿ. ಪಾಟೀಲ, ನಿಂಗಣ್ಣಕುಂಟಿ, ಶಾಂತವೀರ ಬೆಟಗೇರಿ, ಡಾ.ಮಲ್ಲಿಕಾರ್ಜುನ ಹಿರೇಮಠ, ನಿಂಗೋಜಿ, ಶಿವಾನಂದ ಶೆಟ್ಟೆಣ್ಣವರ, ಆರ್.ಜಿ.ತಿಮ್ಮಾಪೂರ, ಕುಸುಗಲ್, ರಾಜೇಂದ್ರ ಸಾವಳಗಿ, ಬಿ.ಆಯ್.ಈಳಿಗೇರ ಉಪಸ್ಥಿತರಿದ್ದರು.