ಧಾರಾಕಾರ ಮಳೆ
ಲಕ್ಷ್ಮೇಶ್ವರ,ಜೂ4: ತಾಲೂಕಿನಾದ್ಯಂತ ನಿನ್ನೆ ಸಂಜೆಯಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆ ಅಲ್ಲಲ್ಲಿ ಧಾರಾಕಾರವಾಗಿ ಸುರಿಯುತ್ತಿದೆ.
ಗೊಜನೂರು-ಮಾಗಡಿ ಮಧ್ಯದ ವರ್ತಿ ಹಳ್ಳ ತುಂಬಿ ಹರಿಯುತ್ತಿದ್ದು ರಸ್ಥೆಯ ಮೇಲೆ ಅಪಾರ ಪ್ರಮಾಣದ ನೀರು ಹರಿಯುತ್ತಿರುವುದರಿಂದ ಎರಡು ತಾಸಿನಿಂದ ಲಕ್ಷ್ಮೇಶ್ವರ – ಗದಗ ಮಧ್ಯೆ ಸಂಚಾರ ಸ್ಥಗಿತಗೊಂಡಿತ್ತು.
ಅಪಾರ ಪ್ರಮಾಣದ ನೀರು ಹರಿದು ಬಣಿವೆಗಳು ನೀರಿನಲ್ಲಿ ನಿಂತಿದ್ದು ಅಕ್ಕ ಪಕ್ಕದ ಜಮೀನಿನಲ್ಲಿನ ಮನೆಗಳಲ್ಲಿ ನೀರು ನುಗ್ಗಿದೆ.
ಈ ಪೇವ್ ಡೀಪ್ ಮೇಲ್ದರ್ಜೆಗೆ ಏರಿಸಿ ಸೇತುವೆ ನಿರ್ಮಿಸಿ ಪದೇ ಪದೇ ಆಗುತ್ತಿರುವ ತೊಂದರೆ ತಪ್ಪಿಸಬೇಕು ಎಂದು ಚನ್ನಪ ಶಣ್ಮಖಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.