ಹನೂರಲ್ಲಿ ದಕ್ಷಿಣ ಶಿಕ್ಷಕರ ಮತ ಕ್ಷೇತ್ರ ಚುನಾವಣೆ: 91.16 ರಷ್ಟು ಮತದಾನ
ಸಂಜೆವಾಣಿ ವಾರ್ತೆ
ಹನೂರು :ಜೂನ್ 4:- ದಕ್ಷಿಣ ಶಿಕ್ಷಕರ ಮತಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆಯೂ ಹನೂರು ತಾಲೂಕು ಕೇಂದ್ರಸ್ಥಾನದಲ್ಲಿ ಶಾಂತಿಯುತ ಮತದಾನ ಪ್ರಕ್ರಿಯೆ ನೆಡೆದಿದ್ದು ಶೇ.91.36ರಷ್ಟು ಮತದಾನ ಆಗಿದೆ.
ಹನೂರು ಪಟ್ಟಣದ ಪಶು ವೈದ್ಯಕೀಯ ಆಸ್ಪತ್ರೆ ಸಭಾಂಗಣದಲ್ಲಿ ತೆರೆಯಲಾಗಿದ್ದ ಮತಗಟ್ಟೆಯಲ್ಲಿ ಸೋಮವಾರ ಬೆಳಗ್ಗೆ 8ಗಂಟೆ ಮತದಾನ ಪ್ರಕ್ರಿಯೆ ಆರಂಭವಾಗಿ ಸಂಜೆ 4ತನಕ ಜರುಗಿತು. ನೊಂದಾವಣೆಯಾಗಿದ್ದ ಹನೂರು ಮತಕ್ಷೇತ್ರದಲ್ಲಿ 193ಪುರುಷರು. 56ಮಹಿಳೆಯರು ಒಟ್ಟು 249 ಮತದಾರರಲ್ಲಿ ಒಟ್ಟು 227 ಮತ ಚಲಾವಣೆ ಮಾಡಿದ್ದಾರೆ. ಮತಗಟ್ಟೆ ಅಧಿಕಾರಿಯಾಗಿ ಕಂದಾಯ ಇಲಾಖೆಯ ನಾಗೇಂದ್ರ, ಪಿಡಿಓ ಡಾ.ಶಿವಣ್ಣ, ಗ್ರಾಮ ಆಡಳಿತ ಅಧಿಕಾರಿಗಳಾದ ವಿಷ್ಣು, ಆನಿಲ್ ಕರ್ತವ್ಯ ನಿರ್ವಹಿದರು.
ಜನಪ್ರತಿನಿಧಿಗಳ ಭೇಟಿ : ಇದಕ್ಕೂ ಮುನ್ನ ಹನೂರು ಪಟ್ಟಣಕ್ಕೆ ಆಗಮಿಸಿದ ಕಾಂಗ್ರೆಸ್, ಬಿಜೆಪಿ-ಜೆಡಿಎಸ್ ಸೇರಿದಂತೆ ಬಿ.ಎಸ್.ಪಿ ಪಕ್ಷಗಳ ಮುಖಂಡರು ಪಟ್ಟಣಕ್ಕೆ ಭೇಟಿ ನೀಡಿ ತಮ್ಮಗಳ ಪಕ್ಷದ ಅಭ್ಯರ್ಥಿ ಪರ ಬೆಂಬಲ ಕೋರಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಹನೂರು ಕ್ಷೇತ್ರದ ಶಾಸಕ ಎಂ.ಆರ್. ಮಂಜುನಾಥ್ ಮಾತನಾಡಿ, ಜೆಡಿ- ಎಸ್-ಬಿಜೆಪಿ ಮೈತ್ರಿ ಕೂಟದ ಅಭ್ಯರ್ಥಿಯನ್ನು ಬೆಂಬಲಿಸಿ ಎಂದು ಮನವಿ ಮಾಡಿದ್ದರಲ್ಲದೆ ವಿವೇಕಾನಂದ ಅವರು ಈ ಭಾರಿ ಜಯಗಳಿಸುವ ವಿಶ್ವಾಸವಿದೆ ಎಂದರು.
ಮಾಜಿ ಶಾಸಕ ಆರ್.ನರೇಂದ್ರ ಮಾತನಾಡಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮರಿತಿಬ್ಬೇಗೌಡ ರವರು ಪ್ರಥಮ ಪ್ರಾಶಸ್ತ್ರದ ಮತದ ಮೂಲಕವೇ ಆಯ್ಕೆಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದೇ ಅಧಿಕಾರದಲ್ಲಿ ಇರುವುದರಿಂದ ಶಿಕ್ಷಕರ ಸಮಸ್ಯೆಯನ್ನು ಬಗೆಹ ರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮರಿತಿಬ್ಬೇಗೌಡರವರು ಚರ್ಚೆ ನಡೆಸಿದ್ದಾರೆ. ಮತವನ್ನು ಹಣದ ಮೂಲಕವೇ ಕೊಂಡುಕೊಳ್ಳಬಹುದು ಎಂಬುದು ಭ್ರಮೆ ಎಂದರು.
ಚಾಮರಾಜನಗರ ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಬಿ.ವೆಂಕಟೇರ್ ಮಾತನಾಡಿ, ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಸೆ ಇರುವುದರಿಂದ ದಕ್ಷಿಣ ಶಿಕ್ಷಕರ ಕ್ಷೇತ್ರದ ಎನ್ ಡಿ ಎ ಮೈತ್ರಿಕೂಟದ ಅಭ್ಯರ್ಥಿ ವಿವೇಕಾನಂದರವರಿಗೆ ಮೊದಲ ಪ್ರಾಶಸ್ತ್ರದ ಮತ ನೀಡುವ ಮೂಲಕ ಅವರನ್ನು ಜಯಶೀಲರನ್ನಾಗಿ ಮಾಡುವಂತೆ ಮನವಿ ಮಾಡಿದರು. ದೇಶದಲ್ಲಿ ಲೋಕಸಭಾ ಚುನಾವಣೆ ಮುಕ್ತಾಯವಾಗಿದ್ದು, ಖಾಸಗಿ ಸಂಸ್ಥೆಗಳು ನಡೆಸಿರುವ ಸಮೀಕ್ಷೆಗಳಲ್ಲಿಯೂ ಎನ್.ಡಿ.ಎ ಮೈತ್ರಿಕೂಟ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಚುನಾವಣಾ ಸಮೀಕ್ಷೆಯಲ್ಲಿ ವರದಿ ಬಂದಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಬಿ.ಎಸ್.ಪಿ ಹನೂರು ಘಟಕ ಅಧ್ಯಕ್ಷ ಸೀಗನಾಯಕ್, ಜಿಲ್ಲಾ ಉಪಾಧ್ಯಕ್ಷ ರಾಗ್ಯ ಮಹೇಶ್ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ತನ್ನದೆಯಾದ ಮಾನ ದಂಡವಿದೆ.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಗುಂಡ್ಲುಪೇಟೆ ಕ್ಷೇತ್ರದ ಶಾಸಕ ಗಣೇಶ್ ಪ್ರಸಾದ್ ಅವರು ಮಹದೇಶ್ವರಬೆಟ್ಟ ದೇವಾಲಯಕ್ಕೆ ಭೇಟಿ ನೀಡಿ ಶ್ರೀ ಮಲೆ ಮಹದೇಶ್ವರಸ್ವಾಮಿಯ ದರ್ಶನ ಪಡೆದರು. ಇದಕ್ಕೂ ಮುನ್ನ ಹನೂರು ಪಟ್ಟಣದಲ್ಲಿ ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡಿದ ಅವರು. ಈ ಹಿಂದೆ ನಡೆದ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ವೇಳೆ ಎಕ್ಸಿಟ್ ಪೆÇೀಲ್ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷ 80ಕ್ಕೂ ಹೆಚ್ಚು ಅಸುಪಾಸು ಅಂಕಿ ಅಂಶ ಹೇಳಿದ್ದರು. ಆದರೆ ಕಾಂಗ್ರೆಸ್ ಅಭ್ಯರ್ಥಿಗಳು 137 ಗೆದ್ದಿದ್ದರು. ಹೀಗಾಗಿ ಎಣಿಕೆಯಿಂದ ಹೊರ ಬಂದಾಗಲೇ ಸತ್ಯಾಂಶ ತಿಳಿಯಲಿದೆ ಎಂದರಲ್ಲದೆ ಎಕ್ಸಿಟ್ ಪೆÇೀಲ್ ಸಮೀಕ್ಷೆ ನಿಜವಾಗಿಲ್ಲ ಎಂದು ತಿಳಿಸಿದರು.
ಮಹತ್ವವಿದೆ. ಶೈಕ್ಷಣಿಕ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಜ್ಞಾವಂತ ಮತದಾರರು ಈ ಭಾರಿ ಬೆಂಬಲಿತ ಅಭ್ಯರ್ಥಿ ಹ.ರಾ.ಮಹೇಶ್ ಅವರನ್ನು ಬೆಂಬಲಿಸಲಿದ್ದಾರೆ ಎಂದರು.