ಗುತ್ತಿ ಬಸವಣ್ಣ ಕಾಲುವೆಗೆ ನೀರು
ಇಂಡಿ:ಜೂ.4:ತಾಲೂಕಿನಲ್ಲಿ ಹರಿಯುವ ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಯ ಬಿಡಲಾಗಿದೆ ಎಂದು ಕೃಷ್ಣಾ ಮೇಲ್ದಂಡೆ ಯೋಜನೆ ಅಧಿಕ್ಷಕ ಅಭಿಯಂತರ ಮನೋಜಕುಮಾರ ತಿಳಿಸಿದ್ದಾರೆ.
ಸಿಂದಗಿಯ ತಾಲೂಕಿನ 47 ಕಿ.ಮಿ ನಂತರ 47 ಕಿ.ಮಿಯಿಂದ ತಾಂಬಾದ ವರೆಗೆ 97 ಕಿ.ಮಿ ಸೇರಿದಂತೆ ತಾಲೂಕಿನ ಕೊನೆಯ ಭಾಗ 147 ಕಿ.ಮಿ ವರೆಗೆ ನೀರು ಬಿಡಲಾಗಿದೆ.
ಅದಲ್ಲದೆ ತಡವಲಗಾ ಕೆರೆಗೂ ಗುತ್ತಿ ಬಸವಣ್ಣ ಕಾಲುವೆಯಿಂದ ನೀರು ಬಿಟ್ಟಿದೆ.
ಇದರಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಅನುಕೂಲ ವಾಗುತ್ತದೆ ಎಂದು ಮನೋಜಕುಮಾರ ತಿಳಿಸಿದ್ದಾರೆ.
ಅದಲ್ಲದೆ ಕೃಷ್ಣಾ ಕಾಲುವೆಯ ಮುಖ್ಯ ಕಾಲುವೆಗೂ ನೀರನ್ನು ಬಿಟ್ಟು ಕೆರೆಗಳನ್ನು ತುಂಬಿಸಲಾಗುತ್ತಿದೆ ಎಂದು ಮನೋಜಕುಮಾರ ತಿಳಿಸಿದ್ದಾರೆ.